16.1 C
New York
Friday, October 22, 2021

Buy now

spot_img

ಮಕ್ಕಳನ್ನು ಕಲೆಯ ಮೂಲಕ ಪೋಷಿಸಿ, ಬೆಳೆಸುವ ಕಾರ್ಯ ಸ್ತುತ್ಯರ್ಹ: ಡಾ.ಜಿ.ಶಂಕರ್

ಕುಂದಾಪುರ: ಮಕ್ಕಳು ದೇವರಿಗೆ ಸಮಾನ. ಈ ಮಕ್ಕಳನ್ನು ಕಲೆಯ ಮೂಲಕ ಪೋಷಿಸುವ, ಬೆಳೆಸುವ ಸಂಸ್ಥೆಯ ಕಾರ್ಯ ನಿಜಕ್ಕೂ ಸ್ತುತ್ಯರ್ಹ. ಹೂವಿನಕೋಲು ಸಾಂಪ್ರದಾಯಿಕ ಕಲೆಯ ಮೂಲಕ ಅಲ್ಲಲ್ಲಿ ಮನೆಗಳನ್ನು ತಲುಪಿ, ನವರಾತ್ರಿಯ ಸಂದರ್ಭದಲ್ಲಿ ಮಂದಿಗೆ ಹಾರೈಸುವುದು ಈ ಕಾಲದಲ್ಲೂ ಮುಂದುವರಿದಿದೆ ಎನ್ನುವುದೇ ದೊಡ್ಡ ಸಂಗತಿ. ಮೊಬೈಲ್, ದೂರದರ್ಶನದ ಮೂಲಕ ಬಹಳ ಮುಂದುವರಿದ ಈ ಯುಗದಲ್ಲಿ ಈ ಕಲೆ ಪ್ರಕಾಶಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ. ಜಿ. ಶಂಕರ್ ಅಭಿಪ್ರಾಯಪಟ್ಟರು.

ಅಕ್ಟೋಬರ್ ೧೪ರಂದು ಸಂಜೆ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆಯ ಚಿಣ್ಣರು ಜಿ. ಶಂಕರ್ ಮನೆಯಲ್ಲಿ ಹೂವಿನಕೋಲು ನಾರಾಯಣಾಯ ನಮೊ ನಾರಾಯಣಾಯ ಎಂಬ ಸ್ತುತಿಯೊಂದಿಗೆ ಪುರಾಣದ ಪ್ರಸಂಗಗಳ ತುಣುಕನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಗುರುಗಳಾದ ದೇವದಾಸ್ ರಾವ್ ಕೂಡ್ಲಿ, ಭಾಗವತ ಮಂಜುನಾಥ ತೆಕ್ಕಟ್ಟೆ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ. ಉಪಸ್ಥಿತರಿದ್ದರು.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!