spot_img
Thursday, March 26, 2026
spot_img

ಸ.ಹಿ.ಪ್ರಾ.ಶಾಲೆ, ಹೆಸಕುತ್ತೂರು:ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಕೃಷ್ಣ ಕೆದ್ಲಾಯ ಆಯ್ಕೆ

ವಿನುತಾ ಶೆಟ್ಟಿ

ಕುಂದಾಪುರ, ಆ.27: ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇದರ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಇತ್ತೀಚೆಗೆ ನಡೆಯಿತು.


ಶಾಲಾ ಎಸ್.ಡಿ.ಎಂ.ಸಿಯ ನೂತನ ಅಧ್ಯಕ್ಷರಾಗಿ ಕೃಷ್ಣ ಕೆದ್ಲಾಯ ಹಾಗೂ ಉಪಾಧ್ಯಕ್ಷರಾಗಿ ವಿನುತಾ ಶೆಟ್ಟಿ ಆಯ್ಕೆಯಾದರು.

ಸದಸ್ಯರಾಗಿ ಭಾಸ್ಕರ ಮೊಗವೀರ, ಗಾಯತ್ರಿ ಆಚಾರ್, ಶಂಕರ ಪೂಜಾರಿ, ಶ್ರೀಕಾಂತ್ ಶೆಟ್ಟಿ, ಬೇಬಿ ಕುಲಾಲ, ವಿನುತಾ, ರಾಜು ಕುಲಾಲ, ಆಶಾ ಕುಲಾಲ, ರಾಜೇಶ್ ದೇವಾಡಿಗ, ಜಗದೀಶ್ ಶೆಟ್ಟಿಗಾರ್, ರೇಣುಕಾ, ಅನುಷಾ ಶೆಟ್ಟಿ, ಸುಮನಾ, ಶಾಲಿನಿ, ಸುನಿಲ್, ರಾಘವೇಂದ್ರ ಜಿ ಆಯ್ಕೆಯಾದರು.


ಈ ಸಂದರ್ಭದಲ್ಲಿ ಶಾಲಾ ಎಸ್‌ಡಿ‌ಎಂಸಿ ಯ ನಿರ್ಗಮನ ಅಧ್ಯಕ್ಷ ವಿಠಲ ಕುಲಾಲರನ್ನು ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಎಸ್‌ಡಿ‌ಎಂಸಿಯ ನಿಕಟಪೂರ್ವ ಉಪಾಧ್ಯಕ್ಷ ಆದರ್ಶ ಶೆಟ್ಟಿ, ನಿಕಟಪೂರ್ವ ಸದಸ್ಯರು, ಹುಣ್ಸೆಮಕ್ಕಿ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೀವ ಕುಲಾಲ, ಸಹ ಶಿಕ್ಷಕರಾದ ಸಂಜೀವ ಎಂ, ಜಯರಾಮ ಶೆಟ್ಟಿ, ವಿಜಯ ಶೆಟ್ಟಿ ಉಪಸ್ಥಿತರಿದ್ದರು.


ಸಹ ಶಿಕ್ಷಕಿ ಜಯಲಕ್ಷ್ಮಿ ಬಿ ಸ್ವಾಗತಿಸಿದರು. ರವೀಂದ್ರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಾ ಆರ್ ವಂದಿಸಿದರು. ಅಶೋಕ ತೆಕ್ಕಟ್ಟೆ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!