Thursday, November 21, 2024

ಲೇಖಕಿ ಪಾರ್ವತಿ ಜಿ ಐತಾಳರಿಗೆ ರಂಗ ಚಿನ್ನಾರಿ ಪ್ರಶಸ್ತಿ


ಕುಂದಾಪುರ: ನಾಡಿನ ಹೆಸರಾಂತ ಲೇಖಕಿ, ಅನುವಾದಕಿ ಡಾ|ಪಾರ್ವತಿ ಜಿ. ಐತಾಳ್ ಅವರಿಗೆ ಕಾಸರಗೋಡು ಜಿಲ್ಲೆಯ ಸಾಂಸ್ಕೃತಿಕ-ಸಾಹಿತ್ಯಿಕ ಸಂಘಟನೆ ರಂಗ ಚಿನ್ನಾರಿ ನೀಡುವ ರಂಗ ಚಿನ್ನಾರಿ-2021 ಪ್ರಶಸ್ತಿ ಲಭಿಸಿದೆ.


ಸಾಹಿತ್ಯ ಕ್ಷೇತ್ರದಲ್ಲಿ ಪಾರ್ವತಿ ಜಿ. ಐತಾಳ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ.12 ರಂದು ಎಡನೀರು ಮಠದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.


ಮೂಲತಃ ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವಾರದ ಪಾರ್ವತಿ ಜಿ.ಐತಾಳ್ ಅವರು, ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನುವಾದ ಕ್ಷೇತ್ರದಲ್ಲಿ ನಿಪುಣರಾಗಿರುವ ಇವರು ಮಲೆಯಾಳಂ ಭಾಷೆಯಿಂದ 38 ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 28 ಸ್ವತಂತ್ರ ಕೃತಿಗಳು, 3 ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ. ಆಕಾಶವಾಣಿಯ ನಾಟಕ ಕಲಾವಿದೆಯಾಗಿರುವ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಶಿವರಾಮ ಕಾರಂತ ಮತ್ತು ತಕಳಿ ಶಿವಶಂಕರ ಪಿಳ್ಳೆಯವರ ಕಾದಂಬರಿಗಳ ಸ್ತ್ರೀವಾದಿ ತೌಲನಿಕ ಅಧ್ಯಯನ’ ಎಂಬ ಇಂಗ್ಲಿಷ್ ಭಾಷೆಯ ಮಹಾ ಪ್ರಬಂಧಕ್ಕೆ ಕೇರಳದ ಕಣ್ಣೂರು ವಿವಿಯಿಂದ ಪಿ‌ಎಚ್‌ಡಿ ಪದವಿ ದೊರಕಿದೆ. ಇತ್ತೀಚೆಗೆ ಅವರ ಸಮಗ್ರ ಕೃತಿಗಳ ವಿಮರ್ಶಾ ಸಂಕಲನ ‘ಸುರಗಂಗಾ’ ಪ್ರಕಟಗೊಂಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!