spot_img
Thursday, March 26, 2026
spot_img

ಲಯನ್ಸ್ ಕ್ಲಬ್ ಅಮೃತಧಾರದಿಂದ ವೃದ್ದಾಶ್ರಮಕ್ಕೆ ವಾಟರ್ ಹೀಟರ್ ಕೊಡುಗೆ

ಕುಂದಾಪುರ, ಆ.28: ಬೇಳೂರು ಗ್ರಾಪಂ ವ್ಯಾಪ್ತಿಯ ಗುಳ್ಳಾಡಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ನಿರ್ವಹಿಸುತ್ತಿರುವ ಅತ್ತೂರು ವಿಠ್ಠಲ್ ಪ್ರಭು ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದದಿಂದ ವಾಟರ್ ಹೀಟರ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಶ್ರೀ ರಾಮ್ ಗ್ರಾನೈಟ್‌ನ ಪ್ರಾಯೋಜಕತ್ವದಲ್ಲಿ ನೀಡಿದ ಕೊಡುಗೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಪುತ್ರನ್ ವೃದ್ದಾಶ್ರಮದ ನಿರ್ವಾಹಕ, ಸತ್ಯ ಸಾಯಿ ಸಂಸ್ಥೆಯ ಜಿಲ್ಲಾ ಯುವ ಸಂಯೋಜಕ ಸಂದೀಪ್ ರಾವ್ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮಾನವತಾವಾದಿ ಮದರ್ ತೆರೇಸಾ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ಮಾತನಾಡಿ ಮದರ್ ತೆರೇಸಾರ ಸೇವೆಯನ್ನು ಸ್ಮರಿಸಿದರು. ಆಶ್ರಮದ ವಯೋವೃದ್ಧರ ಜೊತೆ ಪ್ರೀತಿಪೂರ್ವಕವಾಗಿ ಬೆರೆತು, ಅವರಿಗೆ ಹಣ್ಣು ಹಂಪಲು ಹಂಚಿ, ಅವರೊಂದಿಗೆ ಭಜನೆಯನ್ನು ಮಾಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮನೋಧರ್ಯದ ಮಾತುಗಳನ್ನಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜಯಶೀಲ ಕಾಮತ್, ಕಲ್ಪನಾ ಭಾಸ್ಕರ್, ಆಶಾ ಶೆಟ್ಟಿ, ಚಂದ್ರಿಕಾ ಧನ್ಯ, ಶ್ರೀ ಸತ್ಯಸಾಯಿ ಸಂಸ್ಥೆಯ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಶಶಿಕಲಾ ಬಿಜೂರ್, ಸದಸ್ಯರಾದ ನಿರ್ಮಲಾ ಶಂಕರ್, ರೇಶ್ಮಾಶೇಟ್, ಆಶ್ರಮ ಮೆಲ್ವಿಚಾರಕಿ ಪೂರ್ಣಿಮಾ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!