Sunday, September 8, 2024

ಉಡುಪಿ ಜಿಲ್ಲಾ ಟೆನಿಸ್‌ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗೌತಮ್ ಶೆಟ್ಟಿ ಕುಂದಾಪುರ ಆಯ್ಕೆ


ಉಡುಪಿ : ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಹಿರಿಯ ಕ್ರಿಕೆಟ್ ಆಟಗಾರ, ಕ್ರೀಡಾ ಪ್ರೋತ್ಸಾಹಕ, ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷರಾಗಿರುವ ಗೌತಮ ಶೆಟ್ಟಿ ಕುಂದಾಪುರ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಶರತ್ ಶೆಟ್ಟಿ ಪಡುಬಿದ್ರಿ, ಶ್ರೀಪಾದ್ ಉಪಾಧ್ಯ, ಶ್ರೀಧರ ಶೆಟ್ಟಿ ಪ್ಯಾರಡೈಸ್ ಬನ್ನಂಜೆ, ದಯಾನಂದ ಬಂಗೇರ, ಉದಯ್ ಕಟಪಾಡಿ, ಗಿರೀಶ್ ಬೈಂದೂರು, ಉಪಾಧ್ಯಕ್ಷರಾಗಿ ಉದಯ್ ಕಿನ್ನಿಮುಲ್ಕಿ, ಅಮರನಾಥ್ ಭಟ್ ಉಡುಪಿ, ಜಗದೀಶ್ ಕಾಮತ್ ಕಟಪಾಡಿ, ಸಫ್ತಾರ್ ಶಿರ್ವ, ನಾರಾಯಣ ಶೆಟ್ಟಿ ಕುಂದಾಪುರ, ಪ್ರವೀಣ್ ಕುಮಾರ್ ಬೈಲೂರು, ಕಾರ್ಯದರ್ಶಿಯಾಗಿ ಡಾ.ವಿನೋದ್ ನಾಯಕ್ ಮಣಿಪಾಲ, ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವಾಡಿಗ ಉಡುಪಿ, ಖಜಾಂಚಿಯಾಗಿ ಪ್ರವೀಣ್ ಕುಮಾರ್ ಪಿತ್ರೋಡಿ, ಸಲಹಾ ಸಮಿತಿ ಸದಸ್ಯರಾಗಿ ನಿತ್ಯಾನಂದ (ಮುನ್ನ), ರಮೇಶ್ ಕುಂದರ್ ಕೋಟ, ರಮೇಶ್ ಭಟ್ ಪಾರಂಪಳ್ಳಿ, ಹರಿಪ್ರಸನ್ನ ಕುಂದಾಪುರ, ಅರುಣ್ ಮಧ್ಯಸ್ಥ ಪಾರಂಪಳ್ಳಿ, ಅರುಣ್ ಸವಿನಯ ಸಾಸ್ತಾನ, ಮುನ್ನ ರಾವ್ ಬ್ರಹ್ಮಾವರ, ಸಂಜಯ ಶಿವಪುರ, ಕೇಶವರಾಜ್ ಬ್ರಹ್ಮಾವರ, ಯೋಗೀಶ್ ಮಲೈ, ದಿನೇಶ್ ಪೈ ಗಂಗೊಳ್ಳಿ, ಪುರುಷೋತ್ತಮ ಕೋಟೇಶ್ವರ., ಟೂರ್ನ್‌ಮೆಂಟ್ ಸಮಿತಿ : ಯಾದವ ನಾಯ್ಕ, ರಮೇಶ್ ಶೇರಿಗಾರ್, ಶ್ರೀಧರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಜಾನ್ ಪ್ರೇಮ್ ಕುಮಾರ್, ಮೋಹನ್ ಅಮ್ಮಣ್ಣ, ಸದಾನಂದ ಶಿರ್ವ, ಇಬ್ರಾಹಿಂ ಆತ್ರಾಡಿ. ನಿರ್ದೇಶಕರ ಮಂಡಳಿ: ಸಚೀಂದ್ರ ಶೆಟ್ಟಿ, ಮನೋಜ್ ನಾರ್, ಪ್ರದೀಪ್ ವಾಜ್, ಪ್ರೇಮೆಂದ್ರ ಶೆಟ್ಟಿ, ಸಂದೇಶ್ ಪರ್ಕಳ, ಸುಭಾಷ್ ಕಾಮತ್, ಅಜಿತ್ ಕೋಟ, ದಿನೇಶ್ ಬೈಂದೂರು, ಕೆ.ಪಿ. ಸತೀಶ್, ಸತೀಶ್ ಕೋಟ್ಯಾನ್, ನಿತಿನ್ ಮುಲ್ಕಿ, ಕಿರಣ್ ಶೆಟ್ಟಿ, ಬಾಲಕೃಷ್ಣ ಪರ್ಕಳ, ರಂಜಿತ್ ಶೆಟ್ಟಿ, ವಿಷ್ಣುಮೂರ್ತಿ, ಭಾಸ್ಕರ ಆಚಾರ್ಯ, ಉಮೇಶ್ ಬ್ರಹ್ಮಗಿರಿ, ಪ್ರವೀಣ ಕೊರೆಯಾ ಬ್ರಹ್ಮಗಿರಿ, ರಾಜೇಶ್ ಆಚಾರ್ಯ ಬೈಂದೂರು, ಕಿಶೋರ್ ಸನ್ನಿ ಉಡುಪಿ, ನಾರಾಯಣ ಬೈಂದೂರು, ಪ್ರಸನ್ನ ಆಚಾರ್ ಆಯ್ಕೆಯಾದರು.


ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌತಮ್ ಶೆಟ್ಟಿಯವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ ಕ್ರೀಡೆಗೆ ತನ್ನದೇ ಆದ ಪ್ರೋತ್ಸಾಹ ನೀಡುತ್ತಿದ್ದಾರೆ. ಜಿಲ್ಲೆಯ ಪ್ರತಿಷ್ಟಿತ ಟಾರ್ಪಡೋಸ್ ಕ್ರಿಕೆಟ್ ಕ್ಲಬ್‌ನ ಆಟಗಾರರಾಗಿ, ನಾಯಕರಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದವರು. ಈಗಲೂ ಕ್ರಿಕೆಟ್ ಮಾತ್ರವಲ್ಲದೆ ಬಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ಹಲವಾರು ಟೂರ್ನಿಗಳನ್ನು ಆಯೋಜಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!