spot_img
Thursday, March 26, 2026
spot_img

ಉಳ್ಳೂರು-74: ವನಮಹೋತ್ಸವ, ಪರಿಸರ ಜಾಗ್ರತಿ ಶಿಬಿರ


ಸಿದ್ಧಾಪುರ: ಗ್ರಾಮ ಅರಣ್ಯ ಸಮಿತಿ ಉಳ್ಳೂರು- 74, ಅರಣ್ಯ ಇಲಾಖೆ ಶಂಕರನಾರಾಯಣ, ರೋಟರಿ ಕ್ಲಬ್ ಸಿದ್ದಾಪುರ, ಗ್ರಾಮ ಪಂಚಾಯತ್ ಉಳ್ಳೂರು – 74 ಇವರುಗಳ ಸಂಯುಕ್ತ ಸಹಬಾಗಿತ್ವದಲ್ಲಿ 74ನೇ ಉಳ್ಳೂರು ಗ್ರಾಮದ ಎ1 ಕ್ಯಾಶ್ಯು ಫ್ಯಾಕ್ಟರಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಯು.ಉಮೇಶ್ ರಾವ್ ವಹಿಸಿದ್ದರು. ಸಿದ್ದಾಪುರ-ಹೊಸಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಸುಭಾಸ್ಚಂದ್ರ ಶೆಟ್ಟಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ನಮ್ಮ ಪರಿಸರವನ್ನು ಕಾಪಾಡುವ ಕಾಳಜಿ ನಾವು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಬಿಸ್ಲೇರಿ ನೀರನ್ನು ನಮ್ಮ ಜೊತೆಗೆ ಹೇಗೆ ಕೊಂಡೊಯ್ಯುತ್ತೇವೋ ಹಾಗೆಯೇ ಆಮ್ಲಜನಕದ ಸಿಲಿಂಡರ್ನ್ನು ಉಸಿರಾಡಲು ಜೊತೆಗೆ ಕೊಂಡೊಯ್ಯ ಬೇಕಾಗುತ್ತದೆ ಎಂದು ಎಂದರು.


ಶಂಕರನಾರಾಯಣ ಉಪವಲಯ ಅರಣ್ಯಾಧಿಕಾರಿ ಮ್ಯಾಥಿವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಉಳ್ಳೂರು ಗ್ರಾ.ಪ.ಅಧ್ಯಕ್ಷ ಪ್ರಸಾದ ಶೆಟ್ಟಿ ಕಟ್ಟಿನಬೈಲ್, ಸಿದ್ದಾಪುರ ರೋಟರಿ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ಯಡಿಯಳ ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಬಿಲ್ವಪತ್ರ, ಪುನರ್ಪುಳಿ, ಹಲಸು, ಬೇವು, ನೆಲ್ಲಿ, ವಾಂಟೆ, ಸೀತಾ ಅಶೋಕ, ಸಾಗವಾನಿ ಮುಂತಾದ ಗಿಡಗಳನ್ನು ವಿತರಿಸಲಾಯಿತು.


ಗ್ರಾಮ ಅರಣ್ಯ ಸಮಿತಿ ಕಾರ್ಯನಿರ್ವಾಹಕ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅರಣ್ಯ ರಕ್ಷಕ ಶಿವಣ್ಣ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!