Thursday, November 21, 2024

ಕಟ್‌ಬೇಲ್ತೂರು: ರಸ್ತೆಗುರುಳಿದ ಮರಗಳು


ಕುಂದಾಪುರ, ಜು.24: ಹೆಮ್ಮಾಡಿ-ಕೊಲ್ಲೂರು ರಸ್ತೆಯ ಕಟ್‌ಬೇಲ್ತೂರು ಸಮೀಪ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು ಕೆಲಹೊತ್ತು ವಾಹನ ಸಂಚಾರ ಸ್ಥಗಿತವಾಯಿತು. ರಸ್ತೆ ಅಂಚಿನಲ್ಲಿದ್ದ ಮರಗಳು ಗಾಳಿಯ ಹೊಡೆತಕ್ಕೆ ನೇರ ರಸ್ತೆಗೆ ಅಡ್ಡವಾಗಿ ಬಿದ್ದಿವೆ. ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಸ್ಥಳೀಯರು ಮರಗಳನ್ನು ತೆರವು ಗೊಳಿಸಲಾಯಿತು.


ಹೆಮ್ಮಾಡಿಯಿಂದ ನೆಂಪು ತನಕ ರಸ್ತೆ ಅಗಲಗೊಳಿಸಲಾಗಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡಿಲ್ಲ. ಮರದ ಬೇರುಗಳನ್ನು ಕತ್ತರಿಸಲಾಗಿದ್ದು, ಒಂದು ಸಣ್ಣ ಗಾಳಿ ಬೀಸಿದರೂ ಮರ ಧರೆಗುರುಳುವುದು ಇಲ್ಲಿ ಸ್ವಾಭಾವಿಕವಾಗಿದೆ. ಮೂರ್‍ನಾಲ್ಕು ದಿನಗಳ ಹಿಂದೆ ಕೂಡಾ ಇದೇ ಪರಿಸರದಲ್ಲಿ ಮರಗಳ ರಸ್ತೆಗೆ ಅಡ್ಡವಾಗಿ ಬಿದ್ದಿವೆ.


ರಸ್ತೆ ಅಗಲೀಕರಣದ ಸಂದರ್ಭ ಮರದ ಬೇರುಗಳನ್ನು ಕತ್ತರಿಸಲಾಗಿದೆ. ಇತ್ತೀಚೆಗೆ ಚರಂಡಿ ನಿರ್ಮಾಣದ ಸಂದರ್ಭ ಮತ್ತಷ್ಟು ಬೇರುಗಳನ್ನು ಕತ್ತರಿಸಿದ ಪರಿಣಾಮ ಮರಗಳು ಆಧಾರವಿಲ್ಲದೆ ಧರಾಶಾಹಿ ಆಗುತ್ತಿವೆ. ಕಾನೂನಿನ ತೊಡಕಿನಿಂದ ರಸ್ತೆಯಂಚಿನಲ್ಲಿರುವ ಮರಗಳ ತೆರವು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದೇ ಪರಿಸರದಲ್ಲಿ ಇನ್ನೂ ಅನೇಕ ಅಪಾಯಕಾರಿ ಮರಗಳು ಧರೆಗುರುಳಲು ಸನ್ನದ್ಧವಾಗಿ ನಿಂತಿವೆ.


ಹೆಮ್ಮಾಡಿಯಿಂದ ನೆಂಪು ಸರ್ಕಲ್ ತನಕವೂ ಅಪಾಯಕಾರಿ ಮರಗಳು ರಸ್ತೆಯ ಎರಡು ಕಡೆ ಇವೆ. ಕೆಲವೆಡೆ ರಸ್ತೆಗೆ ತಗುಲಿಕೊಂಡೆ ಮರಗಳು ಇವೆ. ಇವು ಯಾವಾಗ ಬೀಳುತ್ತವೆ ಎಂದು ಹೇಳಲಾಗುವುದಿಲ್ಲ. ಹೆಮ್ಮಾಡಿ ಸುಳ್ಸೆ ಕ್ರಾಸ್ ಸಮೀಪ ದೊಡ್ಡ ದೇವದಾರು ಮರ ಕೂಡಾ ಅಪಾಯದಲ್ಲಿದೆ. ಅದರ ಸುತ್ತ ಬೃಹತ್ ಬೇರುಗಳನ್ನು ಕತ್ತರಿಸಲಾಗಿದೆ. ಈ ಮರದ ಆಸುಪಾಸಿನಲ್ಲಿ ಮನೆಗಳಿವೆ. ವಾಹನ ಸಂಚಾರದ ವೇಳೆ ಮರ ಬಿದ್ದರೆ ಪರಿಸ್ಥಿತಿ ಊಹಿಸುವುದು ಕಷ್ಟ.


ಈ ರಸ್ತೆಯಲ್ಲಿ ಸದಾ ವಾಹನ ದಟ್ಟಣಿ ಇರುತ್ತದೆ. ದ್ವಿಚಕ್ರ ವಾಹನ, ಇತರ ವಾಹನ ಸಂಚರಿಸುವ ಸಂದರ್ಭ ಗಾಳಿ, ದೇವದಾರು, ಇತ್ಯಾದಿ ಮರಗಳು ಬಿದ್ದರೆ ಅಲ್ಲಿ ಸಂಭವಿಸುವ ಪ್ರಾಣಹಾನಿಗೆ ಯಾರು ಜವಾಬ್ದಾರರು? ಅನಾಹುತ ಸಂಭವಿಸುವ ಮುಂಚಿತವಾಗಿ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕಾದ ಅಗತ್ಯತೆ ಇದೆ. ಕಾನೂನಿನಲ್ಲಿ ಸಡಿಲಿಕೆ ಮಾಡಿಕೊಂಡು ರಸ್ತೆಯ ಅಂಚಿನಲ್ಲಿರುವ, ಬೀಳುವ ಸನ್ನಿಹಿತದಲ್ಲಿರುವ ಮರಗಳನ್ನು ತೆರವು ಮಾಡಬೇಕಾದ ತುರ್ತು ಅನಿವಾರ್ಯತೆ ಇದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!