27 C
New York
Thursday, August 11, 2022

Buy now

spot_img

ಲಯನ್ಸ್ ವಲಯಾಧ್ಯಕ್ಷರಾಗಿ ಬನ್ನಾಡಿ ಸೋಮನಾಥ ಹೆಗ್ಡೆ ಆಯ್ಕೆ


ಕುಂದಾಪುರ: ಲಯನ್ಸ್ ಜಿಲ್ಲೆ 317ಸಿ, ಪ್ರಾಂತ್ಯ IV ರ ವ್ಯಾಪ್ತಿಯ, ವಲಯ II ರ ವಲಯಾಧ್ಯಕ್ಷರಾಗಿ ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ನ್ಯಾಯಾವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಇವರನ್ನು ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ ಶೆಟ್ಟಿ ನಿಯುಕ್ತಿಗೊಳಿಸಿದ್ದಾರೆ.


ಬನ್ನಾಡಿ ಸೋಮನಾಥ ಹೆಗ್ಡೆ ಅವರು ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆಯ ಸ್ಥಾಪಕಧ್ಯಕ್ಷರಾಗಿ, ಲಯನ್ಸ್ ರೀಜನ್ VI ಮತ್ತು VII ರ ರೀಜನ್ ಕೋ-ಆರ್ಡಿನೇಟರ್ ಆಗಿ ಸೇವೆಯನ್ನು ಸಲ್ಲಿಸಿದ್ದರು.
ವಲಯ ಕಾರ್ಯದರ್ಶಿಯಾಗಿ ಯಾಳಕ್ಲು ಚಂದ್ರಶೇಖರ ಶೆಟ್ಟಿಯವರನ್ನು ನೇಮಿಸಲಾಗಿದೆ.


ಲಯನ್ಸ್ ಕ್ಲಬ್ ಬನ್ನಾಡಿ- ವಡ್ಡರ್ಸೆ, ಲಯನ್ಸ್ ಕ್ಲಬ್ ಕೋಟೇಶ್ವರ, ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕೊರ್ಗಿ-ಕಾಳವಾರ, ಲಯನ್ಸ್ ಕ್ಲಬ್ ಬಸ್ರೂರು- ಮೂಡ್ಲಕಟ್ಟೆ ಮತ್ತು ನೂತನ ಮಹಿಳಾ ಲಯನ್ಸ್ ಕ್ಲಬ್ ಅಮೃತಧಾರ ಸೇರಿ ಒಟ್ಟು 6 ಲಯನ್ಸ್ ಕ್ಲಬ್‌ಗಳು ಪ್ರಾಂತ್ಯ IV, ವಲಯ II ರ ವ್ಯಾಪ್ತಿಗೆ ಸೇರಿವೆ.

Related Articles

Stay Connected

21,961FansLike
3,430FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!