ಕುಂದಾಪುರ: ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಅಧ್ಯಕ್ಷರಾಗಿ ಕುಂದಾಪುರದ ನ್ಯಾಯವಾದಿ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಲಯನ್ ಬನ್ನಾಡಿ ಶರತ್ ಶೆಟ್ಟಿ, ಕೋಶಾಧಿಕಾರಿಯಾಗಿ ಉಪ್ಲಾಡಿ ಶ್ರೀಧರ್ ಶೆಟ್ಟಿ, 2022-23 ನೇ ಸಾಲಿನ ಅಧ್ಯಕ್ಷರಾಗಿ ಕಲ್‌ಕಟ್ಟೆ ರಾಜಾರಾಮ ಶೆಟ್ಟಿ, ಕಾರ್ಯದರ್ಶಿಯಾಗಿ ಕೊತ್ತಾಡಿ ಅಜಿತ್ ಕುಮಾರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಕ್ಲಬ್ ಅಡ್ಮಿನಿಸ್ಟ್ರೇಟರ್ ಆಗಿ ಶರತ್ ಶೆಟ್ಟಿ ಕೊಮೆ, ಮೆಂಬರ್ ಶಿಪ್ ಕಮಿಟಿ ಚೇರ್‍ಮನ್ ಆಗಿ ಪ್ರವೀಣ್ ಬಿ.ಬಿ, ಎಲ್.ಸಿ.ಐ.ಎಫ್. ಕೋ-ಆರ್ಡಿನೇಟರ್ ಆಗಿ ರವಿರಾಜ್ ಶೆಟ್ಟಿ ವಡ್ಡರ್ಸೆ, ಪಬ್ಲಿಕ್ ರಿಲೇಷನ್ ಆಫೀಸರ್ ಆಗಿ ಅಚ್ಲಾಡಿ ಲಕ್ಷ್ಮಣ್ ಶೆಟ್ಟಿ ಕೊಮೆ, ಕ್ಲಬ್ ಸರ್ವೀಸ್ ಚೈರ್ ಪರ್ಸನ್ ಆಗಿ ನವೀನ್ ಶ್ಯಾನುಭಾಗ್ ವಡ್ಡರ್ಸೆ, ಟೈಲ್ ಟ್ವಿಸ್ಟರ್ ಆಗಿ ರಂಜಿತ್ ಶೆಟ್ಟಿ ಯಾಳಕ್ಲು, ಲಯನ್ ಟ್ಯಾಮರ್ ಆಗಿ ಮಹೇಂದ್ರ ಆಚಾರ್ಯ, ಬೋರ್ಡ್ ಆಫ್ ಡೈರೆಕ್ಟರ್ ಆಗಿ. ಬನ್ನಾಡಿ ಸೋಮನಾಥ ಹೆಗ್ಡೆ, ಪ್ರೊ. ಯಾಳಕ್ಲು ಚಂದ್ರಶೇಖರ ಶೆಟ್ಟಿ, ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಉಪ್ಲಾಡಿ ಸುಗುಣಾಕರ ಶೆಟ್ಟಿ, ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ, ವಸಂತ್ ಶೆಟ್ಟಿ ಸೂರಿಬೆಟ್ಟು, ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ಮತ್ತು ರಾಜೀವ್ ಶೆಟ್ಟಿ ಅಚ್ಲಾಡಿ ಆಯ್ಕೆಯಾಗಿರುತ್ತಾರೆ.
ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಲಯನ್ಸ್ ಪ್ರಾಂತ್ಯ IV, ವಲಯ II ರ ವಲಯಾಧ್ಯಕ್ಷರಾದ. ಬನ್ನಾಡಿ ಸೋಮನಾಥ ಹೆಗ್ಡೆ ಮತ್ತು ಕಾರ್ಯದರ್ಶಿ ಯಾಳಕ್ಲು ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.