-6.1 C
New York
Saturday, January 22, 2022

Buy now

spot_img

ಧೈರ್ಯ ಸ್ಥೈರ್ಯದ ಮನಸ್ಸಿನ ಸವಾರಿಗೆ ಲಗಾಮು ‘ಧ್ಯಾನದಿಂದ ಸಮಾಧಿ’

ಜೂನ್ 21: ವಿಶ್ವ ಯೋಗ ದಿನದ ವಿಶೇಷ

(-ಸುಧಾಕರ ವಕ್ವಾಡಿ)


ಮಾನವನು ಭೂಮಿಗೆ ಬಂದ ಮೇಲೆ ಬಿಡಿಸಲಾಗದ ದೊಡ್ಡ ಬಂಧವೇ ಮನಸ್ಸು ಅದು ಯಾವಾಗಲೂ ಹಣ, ಸಮಯ, ಶ್ರಮದ ವ್ಯಯದತ್ತ ಹೋಗದಂತೆ ಸ್ವ ನಿಯಂತ್ರಣ ಸಾಧನ ಧ್ಯಾನ ಮಾರ್ಗ.
ಮನ ಏವ ಮನುಷ್ಯಾಣ ಕಾರಣಂ ಎನ್ನುವಂತೆ ಮನುಷ್ಯನ ಪ್ರಗತಿಗೂ ಅವನತಿಗೂ ಮನಸ್ಸೇ ಕಾರಣ ಅದು ನರಕಕ್ಕೆ ಮತ್ತು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ. ಹಿಟ್ಲರ್ ಮನಸ್ಸಿನಿಂದ ಯುದ್ಧ ಆರಂಭಿಸಿ ಇಂಗ್ಲೆಂಡ್ ಯುದ್ಧದಲ್ಲಿ ಕೊನೆಗೊಂಡಿದೆ. ಹಾಗೆಯೇ ದೇಹ, ಬುದ್ಧಿ ಇಂದ್ರಿಯಗಳನ್ನು ನಿಗ್ರಹಿಸಿ ಮನಸ್ಸನ್ನು ಗೆದ್ದವ ಜಗತ್ತನ್ನೇ ಗೆದ್ದಂತೆ ಇದಕ್ಕೆಲ್ಲಾ ಮನೋಬಲ ಇದ್ದರೆ ಏನೂ ಬೇಕಾದರೂ ಸಾಧಿಸಬಹುದು ಇದಕ್ಕಿಂತ ಮುಂದೆ ಸಾಗಿದವನು ಸಾಕ್ಷಾತ್ಕಾರಕ್ಕೆ ತಲುಪಿದವ ಎನ್ನುತ್ತೇವೆ. ಮನಸ್ಸನ್ನು ಗುಲಾಮನಾಗಿಸಲು ಧ್ಯಾನ ಎಂಬ ಅಸ್ತ್ರದಿಂದ ಸಾದ್ಯ ಎಂಬುದನ್ನು ಭಾರತೀಯ ಋಷಿ ಮುನಿಗಳು ಕಂಡು ಕೊಂಡ ಸತ್ಯ ನೂರಾರು ವರ್ಷಗಳಿಂದ ವಿಜ್ಞಾನಿಗಳು ಮನಸ್ಸಿನ ಬಗ್ಗೆ ಸಂಶೋಧನೆ ನಡೆಸಿ ನಿರ್ಧಿಷ್ಟವಾದ ಸಿಧ್ದಾಂತಕ್ಕೆ ಬರಲು ಸಾಧ್ಯವಾಗಲಿಲ್ಲ ಸಾವಿರಾರು ವರ್ಷಗಳಿಂದ ನಮ್ಮ ಋಷಿ ಮುನಿಗಳು ವಿಶ್ವ ಪರ್ಯಟನೆ ಮಾಡಿ ನಿಜವಾಗಿ ಮನಸ್ಸನ್ನು ಗೆದ್ದಿದ್ದಾರೆ.


ನಾನು ಎಂಬ ಭಾವ ಬಿಟ್ಟ ಮೇಲೆ ನನ್ನದಲ್ಲ ಎಂಬ ಭಾವನೆ ಮೂಡಿಸಿ ಮನಸ್ಸಿನ ಗುಲಾಮನಾಗಲು ಅಹಂಕಾರ ಕಾರಣ ಈ ಭೂಮಿಗೆ ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನೂ ಕೊಂಡೊಯ್ಯುದಿಲ್ಲ ನಾನು ಎಂಬ ಅಹಂ ಬಿಟ್ಟು ದೇವರ ಕೊಡುಗೆ ಎಂಬುದಾಗಿ ಅನುಭವಿಸಬೇಕು. ನಾವೆಲ್ಲ ಗೇಣಿದಾರ ರೈತನಂತೆ ದುಡಿದು ಪ್ರಕೃತಿ ಕೊಟ್ಟಿದ್ದನ್ನು ತಾನು ಅನುಭವಿಸಿ ಹಂಚಿ ತಿನ್ನಬೇಕು.


ಆಗುವುದೆಲ್ಲಾ ಒಳ್ಳೆಯದಕ್ಕೆ ಸೂರ್ಯನಿಂದ ರಾತ್ರಿ ಹಗಲು ಭೂಮಿ ಒಲಿದಾಗ ಸ್ವರ್ಗ ಮುನಿದಾಗ ನರಕ ಬೆಳಿಗ್ಗೆ ಏಳುವಾಗ ಮತ್ತು ರಾತ್ರಿ ಮಲಗುವಾಗ ಆನಂತ ಸತ್ಯದೆಡೆಗೆ ಚಿಂತಿಸುತ್ತಾ ಬಂದಾಗ ಅಹಂನ ಮಕ್ಕಳಾದ ಕಾಮ, ಕೋಧ. ಲೋಭ. ಮೋಹ, ಮದ. ಮತ್ಸರ ನಮ್ಮಿಂದ ನಿಧಾನವಾಗಿ ದೂರವಾಗುತ್ತಾ ದುಖಃ ಕಡಿಮೆಯಾಗಿ ನಗು ನಗುತ್ತಾ ಮನಸ್ಸನ್ನು ಅರಿಯಲು ಮೊದಲ ಮಾರ್ಗವೆಂದರೆ ಧ್ಯಾನ ಕುದುರೆ ಸವಾರಿ ಮಾಡುವಾಗ ದೈರ್ಯ ಸ್ಥೆರ್ಯದಿಂದ ಎಷ್ಟು ಜಾಗೃತರಾಗುತ್ತೇವೆಯೋ ಹಾಗೆ ಮನಸ್ಸಿನ ಸವಾರಿ ಮಾಡುವಾಗ ಅಷ್ಟೇ ಜಾಗೃತರಾಗಬೇಕು. ಇಲ್ಲದಿದ್ದರೆ ಭ್ರಾಂತರಾಗಿ ಕ್ಷೀಣ ಮನಸ್ಸನವರಾಗುತ್ತೇವೆ.


ಧ್ಯಾನ ಮಾಡುವಾಗ ವಜ್ರಾಸನ, ಸಿದ್ಧಾಸನ, ಪದ್ಮಾಸನ, ಅರ್ಧ ಪದ್ಮಾಸನ ಯಾವುದೇ ಆಸನ ಆಗಿರಬಹುದು ಒಂದು ಆಸನದಲ್ಲಿ 1 ಗಂಟೆಗಳ ಕಾಲ ಕುಳಿತುಕೊಳ್ಳಲು ಸಾದ್ಯವಾದರೆ ಅದನ್ನು ಆಸನ ಸಿದ್ಧಿ ಎನ್ನುತ್ತೇವೆ. ನಿಧಾನವಾಗಿ ಉಸಿರನ್ನು ಮೇಲೆ ಕೆಳಗೆ ಎಳೆದುಕೊಂಡು ಬೆಳಿಗ್ಗೆಯಿಂದ ಈಗಿನವರೆಗೆ ಆಗಿಹೋದ ಘಟನೆಗಳ ಬಗ್ಗೆ ಜ್ಞಾಪಿಸಿ ತಪ್ಪುಗಳನ್ನು ಭಾವಪೂರ್ಣವಾಗಿ ಕ್ಷಮಿಸಿ, ಇತರರಿಂದ ತೊಂದರೆಯಾದಲ್ಲಿ ಮನಸ್ಸಿನಲ್ಲಿಯೇ ಕ್ಷಮಿಸಿ ತುಂಬು ಹೃದಯದಿಂದ ಮುಂದೆ ಸಾಗಿದಾಗ ಧ್ಯಾನದ ಒಳಗಡೆ ಹೋಗುವಾಗ ಉಸಿರಾಟದ ಕಡೆಗೆ ಗಮನಹರಿಸಿ ಉಸಿರನ್ನು ಒಳಗೆ ಎಳೆದುಕೊಳ್ಳುವಾಗ ‘ಸೋ… ಉಸಿರು ಹೊರಗೆ ಬಿಡುವಾಗ ‘ಹಂ ಧ್ಯಾನದ ಮೊದಲು ಹತ್ತು ಭಾರಿ ಓಂ ಹೇಳಬೇಕು ನಂತರ ಮನಸ್ಸಿನಲ್ಲಿಯೇ ೫ ಬಾರಿ ಸೋಹಂ ಹೇಳಿದ ನಂತರ ಕೇವಲ ಶಬ್ದದ ಮೇಲೆ ಗಮನಹರಿಸಿ ಓಡುತ್ತಿರುವ ಮನಸ್ಸಿನ ಮೇಲೆ ನಿಗಾ ವಹಿಸಿ ಮನಸ್ಸು ಕಟ್ಟಕಡೆಗೆ ಓಡುತ್ತಿರುವಾಗ ಸದಾ ನಿನ್ನನ್ನು ಪ್ರೀತಿಸುತ್ತೇನೆ ಎಂದು ತಿಳಿದುಕೊಂಡು ನಂತರ ಖಾಲಿಯಾದ ಜಾಗವೇ ಧ್ಯಾನದ ಆರಂಭ ಪ್ರತಿ ದಿನ ೫ನಿಮಿಷ ಧ್ಯಾನ ಮಾಡಿ ನಂತರ 1-2 ತಿಂಗಳು 20 ನಿಮಿಷ 6 ತಿಂಗಳ ತಂತರ 30 ನಿಮಿಷ ಧ್ಯಾನ ಮಾಡಿ ಮೊದ ಮೊದಲು ಧ್ಯಾನ ಸಾಕು ಎಂದು ಮನಸ್ಸಿನಲ್ಲಿ ಜಗಳವಾಡಿದರೆ ಅದೇ ಮನಸ್ಸು ಸಹಾಯ ಮಾಡಿ ಮುಂದೆ ಹೋಗುತ್ತದೆ ಧ್ಯಾನದ ಒಳಗೆ ಹೋದಾಗ ಮನಸ್ಸಿನ ಶಾಂತಿ ಸಮಾದಾನದ ನಂತರ ಅಂತರ್ ಯಾತ್ರೆ 1 ವರ್ಷ ಕಳೆದಾಗ ಧ್ಯಾನದ ಅನುಭವ ವಾಗುತ್ತದೆ. ದೇಹ ಸ್ಪರ್ಶರಹಿತ, ಶಕ್ತಿರಹಿತ ಏನೋ ಸಂತೋಷ ಒಳಗೆ ಹೊರಗೆ ಹೊರಗೆ ಹೋದ ಅನುಭವ ಆಗುತ್ತದೆ. ಧ್ಯಾನದ ಒಳಗೆ ಸೇರಿದಾಗ ಮೆದುಳಿನಿಂದ ಇಡೀ ದೇಹವನ್ನು ವ್ಯಾಪಿಸಿದ ಅನುಭವವಾಗುತ್ತದೆ. ಸಾಮಾನ್ಯ ಮನುಷ್ಯನಲ್ಲಿ ನಿಮಿಷಕ್ಕೆ23 ಅಲೆಗಳು ಹರಿದಾಡುತದೆ. ದೇಹದಲ್ಲಿ ಅಲೆಗಳು ನಿಮಿಷಕ್ಕೆ 23 ರಿಂದ 13 ಕ್ಕೆ ಇಳಿದಾಗ ಶಿಸ್ತುಬಧ್ಧವಾಗಿ ಇದನ್ನು ಆಲ್ಫಾ ಅಲೆಗಳು ಅನ್ನುತ್ತೇವೆ. ಇನ್ನೂ ಆಳಕ್ಕೆ ಇಳಿದಾಗ 13ರಿಂದ 7ಕ್ಕೆ ಇಳಿಯುದನ್ನು ಥೀಟಾ ಅಲೆಗಳು ಎಂದೂ ಕ್ರಮೇಣ 1 ತಾಸಿನ ಧ್ಯಾನದಲ್ಲಿ ಆಸಕ್ತರಾದ ನಿದ್ದೆಯೂ ಅಲ್ಲ ಜಾಗೃತಿಯೂ ಅಲ್ಲದ ಸ್ಥಿತಿಗೆ ಬರುತ್ತದೆ. ನಂತರ ಈ ಅಲೆಗಳು 7 ರಿಂದ 4,3,2,1 ಕ್ಕೆ ಬಂದಾಗ ಇದನ್ನು ಡೆಲ್ಟಾ ಅಲೆಗಳು ಇದನ್ನೆ ಸಮಾಧಿ ಸ್ಥಿತಿ ಆಗ ನಿಜವಾದ ಉತ್ಸಾಹ, ಆನಂದ ಪ್ರಾಪ್ತಿಯಾಗುತ್ತದೆ.

Related Articles

Stay Connected

21,961FansLike
3,126FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!