spot_img
Wednesday, May 13, 2026
spot_img

ಉದಯ ಗಾಣಿಗ ಹತ್ಯೆ ಪ್ರಕರಣ- ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಬೈಂದೂರು ಗಾಣಿಗ ಸೇವಾ ಸಂಘ ಆಗ್ರಹ


ಬೈಂದೂರು: ಕುಂದಾಪುರ ತಾಲ್ಲೂಕಿನ ಯಡಮೊಗೆಯ ಕೃಷಿಕ ಹಾಗೂ ಸಾಮಾಜಿಕ ಕಾರ್ಯಕರ್ತ ಉದಯ ಗಾಣಿಗರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ ಯಡಿಯಾಳ ಮತ್ತು ಅವರ ಗೆಳೆಯರು ರಾತ್ರಿಹೊತ್ತು ಮನೆಯಿಂದ ಕರೆಸಿಕೊಂಡು ಅವರ ಮೇಲೆ ಕಾರು ಹತ್ತಿಸಿ, ದೊಣ್ಣೆಯಿಂದ ಹೊಡೆದು ಅಮಾನುಷವಾಗಿ ಕೊಲೆ ಮಾಡಿದರು. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ನಿಷ್ಪಕ್ಷಪಾತವಾಗಿ ಮುಂದಿನ ಕ್ರಮ ಕೈಗೊಂಡು, ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ತಗ್ಗರ್ಸೆ ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ವೀರಭದ್ರ ಗಾಣಿಗ ಆಗ್ರಹಿಸಿದರು.


ಅವರು ಬೈಂದೂರು ಪ್ರೆಸ್ ಕ್ಲಬ್‌ನಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


ಹತ್ಯೆಗೀಡಾದವರು ಮತ್ತು ಆರೋಪಿಗಳು ಬಿಜೆಪಿಗೆ ಸೇರಿದವರು. ಆದರೆ ಆರೋಪಿಗಳು ಪ್ರಭಾವಿಗಳು. ಹಾಗಾಗಿ ದಿನಕಳೆದಂತೆ ಪ್ರಕರಣ ಹಗುರಾಗುವ ಸಂಭವ ಇದೆ. ಈ ಘಟನೆಯಿಂದ ಉದಯ ಗಾಣಿಗರ ಪತ್ನಿ ಮತ್ತು ಎರಡು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಕ್ಷೇತ್ರದ ಸಂಸದರು, ಶಾಸಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಂಡು, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ಸೂಕ್ತ ಪರಿಹಾರ ಒದಗಿಸಬೇಕು ಎಂದು ವೀರಭದ್ರ ಗಾಣಿಗ ಹೇಳಿದರು.


ಶಾಸಕರು, ಕಾಂಗ್ರೆಸ್ ನಾಯಕರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನದ ಮಾತಾಡಿದ್ದಾರೆ. ಸಂಸದರು ನಮ್ಮ ದೂರವಾಣಿ ಕರೆಗೆ ಸ್ಪಂದಿಸಿದ್ದಾರೆ. ಅವರು ಮತ್ತು ಉಡುಪಿ ಸಂಸದೆ ಕೂಡ ಬಂದು, ಪಕ್ಷದ ಕಾರ್ಯಕರ್ತನ ಸಾವಿಗೆ ಮಿಡಿಯಬೇಕಾಗಿತ್ತು. ಅದು ಆಗಿಲ್ಲ ಎಂಬ ಬೇಸರ ಗಾಣಿಗ ಸಮುದಾಯಕ್ಕೆ ಇದೆ. ಕೊಲೆ ತನಿಖೆ ಮತ್ತು ಮುಂದಿನ ಬೆಳವಣಿಗೆಯನ್ನು ಸಮುದಾಯ ನಿಕಟವಾಗಿ ಗಮನಿಸುತ್ತದೆ. ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ಗಾಣಿಗರ ರಾಜ್ಯ ಸಂಘದ ನೇತೃತ್ವದಲ್ಲಿ ವಿವಿಧ ಸ್ತರದ ಸಂಘಟನೆಗಳು ಸೇರಿ ಪ್ರಬಲ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಸಿದರು.


ಸಂಘದ ಅಧ್ಯಕ್ಷ ರಾಜು ಗಾಣಿಗ ಹುಳುವಾಡಿ, ಪದಾಧಿಕಾರಿಗಳಾದ ಗೋವಿಂದ ಗಾಣಿಗ, ಆನಂದ ಗಾಣಿಗ, ವಿಜಯ ಗಾಣಿಗ ಇತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!