spot_img
Wednesday, March 25, 2026
spot_img

ಸಿಗಂದೂರು ಮೇಳಕ್ಕೆ ಭೂತರಾಯನ ವೇಷಭೂಷಣ ಕೊಡುಗೆ


ಕುಂದಾಪುರ: ಸಿಗಂದೂರು ಶ್ರೀ ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಶ್ರೀ ಸಿಗಂದೂರು ಕ್ಷೇತ್ರ ಮಹಾತ್ಮೆಯ ಭೂತರಾಯನ ಪಾತ್ರಕ್ಕೆ ಸುಮಾರು 25,000ಸಾವಿರ ಮೌಲ್ಯದ ಕಿರೀಟ-ಭೂಷಣವನ್ನು ರೇವತಿ ಉಮೇಶ್ ಸುವರ್ಣ ಅವರು ಕೊಡುಗೆಯಾಗಿ ಮೇಳಕ್ಕೆ ಸಮರ್ಪಿಸಿದರು.


ಮಾ.೨೨ರಂದು ಶಂಕರನಾರಾಯಣ ಸಮೀಪದ ನೀರಜೆಡ್ಡಿನಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭ ಸೇವಾರ್ಥಿಗಳ ಪರವಾಗಿ ಪಾರ್ವತಿ ಲಕ್ಷ್ಮಣ ನಾಯ್ಕ ಇವರು ಕೊಡುಗೆಯನ್ನು ಶ್ರೀ ಕ್ಷೇತ್ರದ ಚಂದ್ರಪ್ಪ ಮಾಸ್ಟರ್ ಮೂಲಕ ಹಸ್ತಾಂತರ ಮಾಡಿದರು. ಸಿಗಂದೂರು ದೇವಾಲಯದ ವತಿಯಿಂದ ರೇವತಿ ಉಮೇಶ ಸುವರ್ಣ ದಂಪತಿಗಳನ್ನು ಸನ್ಮಾನಿಸಿ ,ಇವರ ಕುಟುಂಬವನ್ನು ಅಭಿನಂದಿಸಲಾಯಿತು.


ಚಂದ್ರಪ್ಪ ಮಾಸ್ಟರ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಮೇಳದ ಪ್ರಧಾನ ಭಾಗವತರು, ಭೂತರಾಯನ ವೇಷಭೂಷಣದ ಸೇವಾರ್ಥಿಗಳಾದ ಉಮೇಶ ಸುವರ್ಣ ಗೋಪಾಡಿ ಭೂತರಾಯನ ವಿಶೇಷ ವೇಷಭೂಷಣ ಮತ್ತು ವೈಶಿಷ್ಟ್ಯತೆ ವಿವರಿಸಿದರು. ಕಲಾವಿದ ಉದಯ ಕಲ್ಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!