Sunday, September 8, 2024

‘ಮಾರಣಕಟ್ಟೆ ಬ್ರಹ್ಮಲಿಂಗೇಶ’ ವೈಷ್ಣವಿ ಜೋಗಿ ಹಾಡಿಗೆ ಫಿದಾ

ಕುಂದಾಪುರ: ಮಾರಣಕಟ್ಟೆ ಬ್ರಹ್ಮಲಿಂಗೇಶ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಎಳೆಯ ಕಂಠಸಿರಿಯಲ್ಲಿ ತೇಲಿಬರುವ ಈ ಹಾಡು ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಭಕ್ತವಲಯದಲ್ಲಿ ಭಕ್ತಿಯ ಸಂಚಲನ ಮೂಡಿಸುತ್ತಿದೆ. ಸುಮಾರು 6 ನಿಮಿಷಗಳ ಈ ಹಾಡಿನಲ್ಲಿ ಅಡಗಿರುವ ಮಾಧುರ್ಯತೆ ಹಾಗೂ ಆಕರ್ಷಣೆ ಮೋಡಿ ಮಾಡಿದೆ.


ವೈಷ್ಣವಿ ಜೋಗಿ ಉಡುಪಿ ಎನ್ನುವ ಬಾಲ ಪ್ರತಿಭೆ ಹಾಡಿರುವ ಪ್ರಥಮ ವಿಡಿಯೋ ಆಲ್ಬಂ ಇದಾಗಿದೆ. ಉಡುಪಿಯ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ವಿದ್ಯಾ ಹಾಗೂ ಕೃಷ್ಣ ಜೋಗಿ ದಂಪತಿಗಳ ಪುತ್ರಿ.

ಸೃಷ್ಟಿ ಕ್ರಿಯೇಶನ್ಸ್ ಕಟಪಾಡಿ ಮತ್ತು ಯಶಸ್ ಆಡಿಯೋಸ್ ಬ್ಯಾನರ್‍ಸ್‌ನಡಿ ನಿರ್ಮಿಸಲಾದ 2ನೇ ಕಾಣಿಕೆ ಮಾರಣಕಟ್ಟೆ ಬ್ರಹ್ಮಲಿಂಗೇಶ ಭಕ್ತಗೀತೆ ವಿಡಿಯೋ ಸಾಂಗ್ ಈ ಹಾಡನ್ನು ಉಡುಪಿಯ ಖ್ಯಾತ ಸಾಹಿತ್ಯಕಾರ, ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ರಚಿಸಿದ್ದು, ಈ ಗೀತೆ ಸಾಕಷ್ಟು ಜನಪ್ರಿಯತೆ ಗಳಿಸಿದೆ.


ಸುವರ್ಣ ಮ್ಯೂಸಿಕ್ ಯ್ಯೂಟೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಗೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಕರು ಫೇಸ್‌ಬುಕ್, ಇನ್‌ಸ್ಟ್ರಾ ಗ್ರಾಂ, ವಾಟ್ಸ್‌ಪ್ ಮೂಲಕವು ಹಂಚಿಕೊಂಡು ಈ ಹಾಡನ್ನು ಜಗತ್ತಿನಾದ್ಯಂತ ಮಾರಣಕಟ್ಟೆ ಭಕ್ತರು ವೀಕ್ಷಿಸುವಂತೆ ಮಾಡಿದ್ದಾರೆ. ಕೃಪಾ ಜೋಗಿ ಉಡುಪಿ ಸಹಗಾಯನ ಮಾಡಿದ್ದಾರೆ.
ಮಾರಣಕಟ್ಟೆ ಶ್ರೀ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಸಹಕಾರ ನೀಡಿದ್ದು, ಈ ಹಾಡನ್ನು ಪರ್ಕಳ ಬ್ರಾಹ್ಮರಿ ಸ್ಟುಡಿಯೋ ಆನಂದ್ ಪೆರ್ಡೂರು ರೆಕಾರ್ಡಿಂಗ್ ಮಾಡಿದ್ದಾರೆ. ಮಣಿಪಾಲ ಡ್ರೀಮ್ ಸ್ಟುಡಿಯೋದ ಸುಹಾಸ್ ಶೆಣೈ, ವಿಡಿಯೋ ಚಿತ್ರೀಕರಣ ಮತ್ತು ಸಂಕಲನ ನಿರ್ವಹಿಸಿದ್ದಾರೆ. ವೀರೇಂದ್ರ ಜೋಗಿ ಹರಾವರಿ ವಂಡ್ಸೆ ಈ ವಿಡಿಯೋ ಆಲ್ಬಂ ನಿರ್ಮಾಣ ಮಾಡಿದ್ದಾರೆ. ಪೂಜಾ ಎಸ್. ಮೈಸೂರು, ಜಯರಾಮ್ ದೇವಾಡಿಗ ಶಾರ್ಕೆ, ಪ್ರೀತಿ ಪ್ರಕಾಶ ಸುವರ್ಣ ಅವರು ಸಕಾಲಿಕ ಸಹಕಾರ ನೀಡಿದ್ದಾರೆ.

ಪ್ರಕಾಶ ಸುವರ್ಣ ಕಟಪಾಡಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!