Sunday, September 8, 2024

ಹಳ್ಳಿಹೊಳೆಯ ಪಾರೆಯಲ್ಲೊಂದು ಕಬ್ಬಿಣದ ಕಡವೆ


ಕುಂದಾಪುರ: ಕಮಲಶಿಲೆ-ಹಳ್ಳಿಹೊಳೆ ನಡುವಿನ ರಸ್ತೆಯಲ್ಲಿ ಸಾಗುವಾಗ ಕಲ್ಲು ಪಾರೆಯಲ್ಲಿ ತಟಸ್ಥವಾಗಿ ನಿಂತಿರುವ ಕಡವೆಯೊಂದು ಪ್ರತ್ಯಕ್ಷವಾಗಿದೆ. ಏನೋ ಶಬ್ದ ಗ್ರಹಿಸುವಿಕೆ ಭಂಗಿಯಲ್ಲಿ ನಿಂತಿರುವ ಸುಮಾರು 10 ಅಡಿ ಎತ್ತರ ಕಡವೆ ಸಹಜವಾಗಿ ಜನಕರ್ಷಣೆಗೆ ಕಾರಣವಾಗಿದೆ.


ಇದು ಮಾನವ ನಿರ್ಮಿತ ಕಬ್ಬಿಣದ ಕಡವೆ. ಕಲಾವಿದ ಚೇತನ್ ಕುಮಾರ್ ಈ ಕಲಾಕೃತಿಯನ್ನು ರಚಿಸಿದ್ದು ಈ ಹಿಂದೆ ಹಳ್ಳಿಹೊಳೆಯ ಕಾಡುಕಲ್ಲಿನಲ್ಲಿ ಮಂದಸ್ಮಿತ ಕಪ್ಪೆಯ ಕಲಾಕೃತಿ ರಚಿಸಿ ಸುದ್ದಿಯಾಗಿದ್ದರು.
ಕಮಲಶಿಲೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇರುವ ಪಾರೆಯಲ್ಲಿ ಈ ಕಬ್ಬಿಣದ ಕಡವೆಯ ಕಲಾಕೃತಿ ಇದೆ. ಚೇತನ್ ಕುಮಾರ್ ಹಳ್ಳಿಹೊಳೆ ಅವರ ಕಲ್ಪನೆ, ಆಲೋಚನೆಗೆ ವೆಲ್ಡಿಂಗ್‌ನಲ್ಲಿ ಅಶೋಕ್ ಹಳ್ಳಿಹೊಳೆ ಸಾಥ್ ನೀಡಿದ್ದಾರೆ.


14 ಲೆಂಥ್ ಕಬ್ಬಿಣದ ರಾಡ್‌ಗಳು ಹಾಗೂ ಬೇಸ್‌ಗೆ ಒಂದು ಇಂಚು ಅಗಲದ ಒಂದು ಲೆಂಥ್ ಕಬ್ಬಿಣ ಬಳಕೆ ಮಾಡಲಾಗಿದೆ.


ಇದೊಂದು ಗಂಡು ಕಡವೆಯ ಕಲಾಕೃತಿಯಾಗಿದೆ. ಕೇವಲ ಕಬ್ಬಿಣದ ಸರಳುಗಳನ್ನೆ ಬಳಸಿ ನೈಜವಾಗುಷ್ಟು ಪರಿಣಾಮಕಾರಿಯಾಗಿ ಆಕೃತಿ ರಚಿಸಲಾಗಿದೆ. ವನ್ಯ ಮೃಗಗಳ ಸಂರಕ್ಷಣೆ ಈ ಕಲಾಕೃತಿಯ ಆಶಯವಾಗಿದೆ. ಪ್ರಕೃತಿ, ವನ್ಯಸಂಕುಲದ ಬಗ್ಗೆ ಇನ್ನೂ ಕೂಡಾ ಸಾಕಷ್ಟು ಕಲಾಕೃತಿಗಳಿಗೆ ಕಲಾಮನಸ್ಸುಗಳಿಂದ ಬೇಡಿಕೆಗಳು ಬರುತ್ತಿದೆ ಎನ್ನುತ್ತಾರೆ ಕಲಾವಿದ ಚೇತನ್ ಕುಮಾರ್.

(ನಾಗರಾಜ್ ವಂಡ್ಸೆ)

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!