spot_img
Wednesday, March 25, 2026
spot_img

ಆಶೀರ್ವಾದ್ ಟ್ರೋಫಿ-ಕಬಡ್ಡಿ ಪಂದ್ಯಾಟ: ಮೈಲಾರೇಶ್ವರ ಯುವಕ ಮಂಡಲಕ್ಕೆ ಟ್ರೋಫಿ


ಕುಂದಾಪುರ: ಆಶೀರ್ವಾದ್ ಫ್ರೆಂಡ್ಸ್ ಅಬ್ಬಿ, ಹರಾವರಿ-ವಂಡ್ಸೆ ದಶಮಾನೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಇವರ ಸಹಕಾರದೊಂದಿಗೆ ಮುಕ್ತ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಆಶೀರ್ವಾದ್ ಟ್ರೋಫಿ-2021ರ ಇತ್ತೀಚೆಗೆ ವಂಡ್ಸೆಯಲ್ಲಿ ನಡೆಯಿತು.

21 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ ಈ ಪಂದ್ಯಕೂಟದಲ್ಲಿ ಕುಂದಾಪುರದ ಮೈಲಾರೇಶ್ವರ ಯುವಕ ಮಂಡಲ ವಿಜಯಿಯಾಗಿ ಮೂಡಿಬರುವುದರ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ತೆಂಕನಿಡಿಯೂರು ಫ್ರೆಂಡ್ಸ್ ಉಡುಪಿ, ತೃತೀಯ ಸ್ಥಾನವನ್ನು ಕೋಟೆ ಜಟ್ಟಿಗೇಶ್ವರ ಗಂಗೊಳ್ಳಿ, ಚತುರ್ಥ ಸ್ಥಾನವನ್ನು ಬ್ರಹ್ಮಶ್ರೀ ಫ್ರೆಂಡ್ಸ್ ನೇರಳಕಟ್ಟೆ ಪಡೆದುಕೊಂಡರು.


ಈ ಸಂದರ್ಭದಲ್ಲಿ ಆಶೀರ್ವಾದ್ ಫ್ರೆಂಡ್ಸ್‌ನ ಅಧ್ಯಕ್ಷ ಮಹೇಶ ಗಾಣಿಗ ಅಬ್ಬಿ, ಗ್ರಾ.ಪಂ. ಮಾಜಿ ಸದಸ್ಯ ಗುಂಡು ಪೂಜಾರಿ ಹರಾವರಿ, ಡಾ| ಗೋಪಾಲ ಎನ್.ಜಿ., ಶಶಿಧರ ಶೆಟ್ಟಿ ಕೊರಾಡಿಮನೆ, ಚಂದ್ರ ಪೂಜಾರಿ ನೂಜಾಡಿ, ಅವಿನಾಶ ಮೊಗವೀರ ಶಾರ್ಖೆ, ಗುರುರಾಜ ಗಾಣಿಗ ಅಬ್ಬಿ, ವಸಂತ್ ಶೆಟ್ಟಿ ಚಿತ್ತೂರು, ಪ್ರಕಾಶ ಪೂಜಾರಿ ಜೆಡ್ಡು, ಪ್ರಮೋದ್, ಮಂಜುನಾಥ ಮೊಗವೀರ ಕೊಡಕುಳಿ, ಸಂದೀಪ್ ಪೂಜಾರಿ ಹರಾವರಿ, ಅಬಿಜಿತ್ ಶಾರ್ಕೆ, ಮಣಿಂದರ್ ಗಾಣಿಗ ಅಬ್ಬಿ, ಶಂಕರ ಆಚಾರ್ಯ ವಂಡ್ಸೆ, ಸಚಿನ್ ಪೂಜಾರಿ, ಪ್ರಭಾಕರ ಗಾಣಿಗ ವಂಡ್ಸೆ ಮೊದಲಾದವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಅರುಣ್ ಕುಮಾರ್ ಶೆಟ್ಟಿ ಮತ್ತು ತಂಡದವರು ಸಹಕರಿಸಿದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಡಾ|ರಾಮಚಂದ್ರ ಭಟ್ ಕೊಲ್ಲೂರು, ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ವಂಡ್ಸೆ ಗ್ರಾ.ಪಂ.ಅಧ್ಯಕ್ಷ ಉದಯಕುಮಾರ ಶೆಟ್ಟಿ, ಗೋಪಾಲಕೃಷ್ಣ ಉಪಾಧ್ಯ, ಕೊಳ್ತ ಗೋಪಾಲ ಶೆಟ್ಟಿ, ಸಂಜೀವ ಪೂಜಾರಿ ವಂಡ್ಸೆ, ರಾಮಚಂದ್ರ ಭಟ್ ಮಾರಣಕಟ್ಟೆ, ಗುಂಡು ಪೂಜಾರಿ ಹರಾವರಿ, ಆಶೀರ್ವಾದ್ ಫ್ರೆಂಡ್ಸ್‌ನ ಮಹೇಶ್ ಗಾಣಿಗ ಅಬ್ಬಿ, ಗೋವರ್ದನ್ ಜೋಗಿ, ಡಾ|ಗೋಪಾಲ ಎನ್.ಜಿ., ಹರೀಶ ಪೂಜಾರಿ ಬೆಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.


ಶಿಕ್ಷಕ ಉದಯ ಕಾರ್ಯಕ್ರಮ ನಿರ್ವಹಿಸಿ, ಸುಜನ, ಅರ್ಚನ ಪ್ರಾರ್ಥಿಸಿದರು. ವಿಜಯ್ ಪೂಜಾರಿ ತೆಂಕೊಡಿಗೆ ಸ್ವಾಗತಿಸಿದರು. ಉದಯ್ ಮೊಗವೀರ ಕೊಡಕುಳಿ ವಂದಿಸಿದರು. ರಾತ್ರಿ 8 ಗಂಟಯಿಂದ ಮರುದಿನ ಬೆಳಿಗ್ಗೆ 6.30ರ ತನಕ ನಡೆದ ಕಬಡ್ಡಿ ಪಂದ್ಯಾಟವನ್ನು ಸಾವಿರಾರು ಜನ ವೀಕ್ಷಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!