Thursday, November 21, 2024

ಕುಂದಾಪುರದಲ್ಲಿ ಕೇಕ್‌ವಾಲ, ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಉದ್ಘಾಟನೆ


ಶ್ರೀನಿವಾಸ ರಾವ್ ಅವರ ಆಹಾರೋದ್ಯಮ ಸೂತ್ರಗಳು ಯಶಸ್ಸಿಗೆ ಕಾರಣ-ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ


ಕುಂದಾಪುರ, ಮಾ.19: ಆಹಾರೋದ್ಯಮ ಕ್ಷೇತ್ರದಲ್ಲಿ ಗೋಪಾಡಿ ಶ್ರೀನಿವಾಸ ರಾವ್ ಅವರ ಕಳೆದ 45 ವರ್ಷಗಳ ಅನುಭವ, ಗ್ರಾಹಕರ ಬಗೆಗೆ ಅವರಿಗಿರುವ ಕಾಳಜಿ, ಆಹಾರದಲ್ಲಿ ಗುಣಮಟ್ಟ, ಸ್ವಚ್ಛತೆ, ಕೈಗೆಟಕುವ ದರ ಈ ಮೂರು ಸೂತ್ರಗಳಿಂದ ಯಶಸ್ಸು ಅವರಿಗೆ ಸಾಧ್ಯವಾಗಿದೆ. ಕುಂದಾಪುರದಲ್ಲಿಯೂ ಕೂಡಾ ಅವರ ಉದ್ಯಮ ಯಶಸ್ಸು ಗಳಿಸಲಿ ಎಂದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟರು.


ಮಯೂರ ಸಮೂಹ ಸಂಸ್ಥೆಗಳು ಕುಂದಾಪುರ ಪುರಸಭಾ ರಸ್ತೆಯಲ್ಲಿರುವ ಜಿ.ಎಸ್.ಆರ್ ಸ್ಕ್ವೇರ್‌ನ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಆರಂಭಿಸಿದ ಕೇಕ್‌ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ಸಂಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಜಿ.ಎಸ್.ಆರ್ ಸ್ಕ್ವೇರ್ ನಾಮಫಲಕ ಅನಾವರಣಗೊಳಿಸಿದರು.

ಕುಂದಾಪುರ ವಿನಯ ಆಸ್ಪತ್ರೆಯ ಡಾ|ಎನ್.ವಿಶ್ವನಾಥ ಶೆಟ್ಟಿ ಮಾತನಾಡಿ, ಗೋಪಾಡಿ ಶ್ರೀನಿವಾಸ ರಾವ್ ಅವರು ಹುಟ್ಟೂರಿಗೆ ಅತಿ ಉತ್ತಮ ಹಾಗೂ ಸುಂದರವಾದ ಕಟ್ಟಡ ನಿರ್ಮಾಣ ಮಾಡಿ ಉದ್ಯಮವನ್ನು ಕುಂದಾಪುರಕ್ಕೆ ವಿಸ್ತರಿಸಿದ್ದಾರೆ. ಇದು ಕುಂದಾಪುರಕ್ಕೆ ಉತ್ತಮ ಕೊಡುಗೆಯಾಗಿದೆ ಎಂದರು.


ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಶ್ರೀನಿವಾಸ ರಾವ್ ಅವರು ನುಡಿದಂತೆ ಕುಂದಾಪುರದಲ್ಲಿ ಸುಂದರವಾದ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಇದು ಮುಂದೆ ಕುಂದಾಪುರಕ್ಕೆ ಲ್ಯಾಂಡ್ ಮಾರ್ಕ್ ಆಗಲಿ ಎಂದರು.

ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಹಿರಿಯ ಸಮಾಜ ಸೇವಕ ರಾಮಚಂದ್ರ ವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಮಯೂರ ಗ್ರೂಫ್‌ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ, ಸ್ಥಳೀಯ ತಿಂಡಿ ತಿನಿಸುಗಳಿಗೆ ಒತ್ತು, ಸ್ವಚ್ಛತೆ ಮತ್ತು ಪರಿಶುದ್ದತೆ, ಕೈಗೆಟಕುವ ದರ ಈ ಮೂರು ಅಂಶಗಳನ್ನು ನಮ್ಮ ಉದ್ಯಮದಲ್ಲಿ ಬಳಕೆ ಮಾಡಿಕೊಂಡಿದ್ದೇವೆ. ಇಲ್ಲಿ ತೆರೆದಿಟ್ಟ ಪಾಕಶಾಲೆ, ಕಣ್ಣೆದುರೆ ಮಾಡಿಕೊಡುವ ಕೇಕ್‌ಗಳು ಕೇಕ್‌ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ವಿಶೇಷತೆಯಾಗಿದೆ, ಆಹಾರ ಉತ್ಪಾದನೆಯಲ್ಲಿ ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಂಡಿದ್ದೇವೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಈ ಸಂದರ್ಭದಲ್ಲಿ ಆರ್ಕಿಟೆಕ್ಟ್ ಲಕ್ಷ್ಮೀಶ, ಇಂಜಿನಿಯರ್ ಸುರೇಶ ಹತ್ವಾರ್, ಗೋಪಾಲ್ ಭಟ್, ದಿವಿತ್, ಸತೀಶ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಉದ್ಯಮಿಗಳು, ಗಣ್ಯರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಅಮೃತ್ ಕುಮಾರ್ ತೌಳ, ನಿರ್ದೇಶಕರಾದ ಕೆ.ಸುಬ್ಬಣ್ಣ ಉಪಾಧ್ಯ, ಬಿ.ವೆಂಕಟೇಶ್ ವರ್ಣ, ಜಗದೀಶ್ ಎಸ್.ಹತ್ವಾರ್, ಎಚ್.ಎಸ್.ಮಹೇಶ ಹತ್ವಾರ್, ಶ್ರೀಮತಿ ಮಾನಸ ಸುಶಾಂತ್ ಅತಿಥಿಗಳನ್ನು ಗೌರವಿಸಿದರು.


ಸುಮಿತ್ರಾ ಮತ್ತು ಭಾರತಿ ರಾಮಕೃಷ್ಣ ದಾಸ್ ಪ್ರಾರ್ಥಿಸಿದರು. ಕೇಕ್‌ವಾಲದ ಸಿ‌ಇ‌ಓ ಕೆ.ಎಸ್.ಸುಹಾಸ್ ಉಪಧ್ಯಾಯ ಸ್ವಾಗತಿಸಿ, ವಂದಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!