spot_img
Saturday, August 22, 2026
spot_img

ಶ್ರೀ ಕ್ಷೇತ್ರ ಸೌಕೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಸೌಕೂರಿನಲ್ಲಿ ದಿನಾಂಕ 21-8 -2026 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 8,000ಕ್ಕೂ ಹೆಚ್ಚು ಭಕ್ತರು ಶ್ರೀದೇವಿಯ ದರ್ಶನ ಪಡೆದರು. ಕ್ಷೇತ್ರದ ಪೂಜಾ ಅರ್ಚಕರ ವತಿಯಿಂದ ಚಂಡಿಕಾ ಹೋಮ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ ಸೌಕೂರು ಭಂಡಾರಮನೆ ಸಮಿತಿಯ ಸದಸ್ಯರಾದ ಎಸ್ ಅನಂತ ಅಡಿಗ ಸೌಕೂರು, ರಾಜು ಎಸ್ ಸೌಕೂರು, ಲೀಲಾವತಿ ಬಿ ಪೂಜಾರಿ ಅಬ್ಬಿಗುಡ್ಡೆ, ಮಾಲತಿ ದೇವಾಡಿಗ ಸೌಕೂರು, ರವೀಂದ್ರನಾಥ ಶೆಟ್ಟಿ ಗುಲ್ವಾಡಿ ಹೊಸ್ಮನೆ, ಭುಜಂಗ ಶೆಟ್ಟಿ ಮುಳ್ಳುಗುಡ್ಡೆ, ಅಶೋಕ್ ಕುಮಾರ್ ಶೆಟ್ಟಿ ಜಾಡ್ಕಟ್ಟು, ರಾಜೇಶ್ ಮೊಗವೀರ ತಪ್ಲು ಕಂಡ್ಲೂರು ಉಪಸ್ಥಿತರಿದ್ದರು.ಮಧ್ಯಾಹ್ನ 4700 ಜನರು ಶ್ರೀ ದೇವಿಯ ಅನ್ನಪ್ರಸಾದವನ್ನು ಸ್ವೀಕರಿಸಿದರು. ಈ ದಿನ ಕ್ಷೇತ್ರಕ್ಕೆ ಆಗಮಿಸಿದ ಮುತ್ತೈದೆಯರಿಗೆ ಬಾಗಿನ ( ಸೀರೆ, ಅರಶಿನ, ಕುಂಕುಮ, ಬಳೆ ) ನೀಡಲಾಯಿತು.
ಕ್ಷೇತ್ರದ ಅರ್ಚಕ ವೃಂದದವರು, ಸಿಬ್ಬಂದಿ ವರ್ಗದವರು, ಸ್ವಯಂಸೇವಕರು, ಗ್ರಾಮಸ್ಥರು, ಊರ ಹಾಗೂ ಪರವೂರ ಭಕ್ತಾದಿಗಳು ಸಹಕಾರವನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಮಹೇಶ್ ಭಟ್ ಸೌಕೂರು ಮತ್ತು ಬಳಗದವರು ಅನ್ನಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!