spot_img
Saturday, October 3, 2026
spot_img

ಹೀಗೊಬ್ಬ ಅಕ್ಷರ ಸಂತನಿಗೆ ಅಭಿನಂದನೆಯ ಪದಮಂತ್ರಾಕ್ಷತೆ…!

ನರೇಂದ್ರ ಕುಮಾರ್ ಕೋಟ….
             ಅದ್ಯಾವ ನಿರೂಪಣೆಯಲ್ಲಿ ಚಪ್ಪಾಳೆಯ ಮೆರವಣಿಗೆ..! ಬೆಳಕಿನ ಬೀಜಗಳು..!, ಪ್ರತಿಭೆಗಳ ದಿಬ್ಬಣ..!, ಪದಗಳ ತೋರಣ….! ಇನಿತೆಲ್ಲ  ಕನ್ನಡದ ಹೊನ್ನ ಪದಗಳ ಸೇಚನವಿದ್ದರೆ , ಅದ್ಯಾವ ಸಾಹಿತ್ಯಕ ಕಾರ್ಯಕ್ರಮಗಳ ಹೆಸರುಗಳು ಚಿನಂಪ, ಸಮನ್ಯು, ಸುಕೃತಿ, ಸ್ಪರ್ಶ, ಸಂಚಲನ, ಗುಂಜನ, ಜೇಂಕಾರ, ಅಸ್ಮಿತೆ, ಕಾಂಬ, ದೀಪಾಂಜಲಿ, ಸಂಚಲನ, ನೆಲಗುಮ್ಮ, ಕಿನ್ನರಿ ಇತ್ಯಾದಿ, ಇತ್ಯಾದಿ ವಿಭಿನ್ನ,   ತಲೆಬರಹಗಳಿಂದ ವಿಜೃಂಭಿಸುತ್ತಿದ್ದರೆ,  ಅಲ್ಲೆಲ್ಲ ನಮ್ಮ ನರೇಂದ್ರ ಮಾಷ್ಟ್ರ ಸಾರಥ್ಯದಲ್ಲಿ  ಕನ್ನಡಮ್ಮನ ಒಡ್ಡೋಲಗ  ನಡೆಯುತ್ತಿದೆ ಎಂದೇ ಅರ್ಥ.  ತಮ್ಮ  ಸಾದಾ ಉಡುಪು, ಸದಾ ಹುರುಪು, ನಾವಿನ್ಯತೆಯ ಛಾಪು, ಛಲ ಬಿಡದ ಚುರುಪು, ವಿಶೇಷವೆನಿಸುವ ಬರೆಪು, ಅಸ್ಖಲಿತ ಮಾತಿನೊನಪುಗಳಿಂದ  ಉಡುಪಿಯಲ್ಲಿ ಮಾತ್ರವಲ್ಲದೇ   ರಾಜ್ಯದಾದ್ಯಂತ ಮನೆ ಮಾತಾಗಿರುವ ನರೇಂದ್ರ ಮೇಷ್ಟ್ರ ವ್ಯಕ್ತಿತ್ವಕ್ಕೆ  ಅವರೇ ಸಾಟಿ.  ಸಾಹಿತ್ಯದ ಕಲ್ಪತರುವಂತೆ ತಾ ಬಾನೆತ್ತರಕ್ಕೆ ಬೆಳೆದು, ತನ್ನ ಸುತ್ತಲಿನ  ಮಕ್ಕಳು ಮಂದಿಗರು  ತನಗಿಂತಲೂ ಎತ್ತರಕ್ಕೇರಲೆಂಬ  ಮಹತ್ವಾಕಾಂಕ್ಷೆಯ ಹೊತ್ತು, ಎಲ್ಲರಿಗೂ ಅವಕಾಶಗಳನ್ನು ಒದಗಿಸಿ, ತಾವ್ ಮಾರ್ಗದರ್ಶಕರಾಗಿ , ಕಿರಿಯರಿಗೆ ಪ್ರೇರಣಾಸ್ವರೂಪರಾಗಿ ಪಡಿ ಮೂಡಿಸುವ ಅಪೂರ್ವ ಬರೆಹಗಾರಾದ ಶ್ರೀಯುತರು, ವಂದಿಮಾಗಧರ ಸ್ತುತಿ ನಿಂದೆಗೆಂದೂ ಹಿಗ್ಗಿದವರಲ್ಲ, ಕುಂದಿದವರಲ್ಲ.
             ಕವಿತೆ, ಕಾದಂಬರಿ, ನಾಟಕ, ಕಥೆ, ರೂಪಕ, ಹೀಗೆ  ತರಹೇವಾರಿ ಕನ್ನಡದ ಸಾಹಿತ್ಯ ಪ್ರಣತಿಗಳನ್ನು ಜಳಪಿಸಿ, ಅದರ ಚೆಂಬೆಳಕಲಿ ತಾಯಿ ಭುವನೇಶ್ವರಿಯ ಪ್ರಭಾವಳಿಯು  ಹೊಳೆ ಹೊಳೆವಂತೆ ಮಾಡಿದವರು. ಜಿಲ್ಲೆಯಾದ್ಯಂತ  ಹಲವಾರು ಸಾಹಿತ್ಯಕ, ಶೈಕ್ಷಣಿಕ, ಸಾಮಾಜಿಕ, ಚಟುವಟಿಕೆಗಳನ್ನು ಸಂಘಟಿಸಿದ ಇನ್ನಿಲ್ಲದಷ್ಟು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ ಯಶೋಭಾಗ್ಯ  ಇವರದು.  ಇನಿತು ಸರಸ್ವತಿ ಪುತ್ರನಿಗೆ ಸಂದ ಸಮ್ಮಾನಗಳು ಅಗಣಿತ, ಅಸೀಮಾ. ಅಮಿತ. ಉತ್ತಮ ಶಿಕ್ಷಕ, ಮೆಲು ಭಾಷಿಗ, ಸಂಭಾಷಿಗ, ಕಿರುತೆರೆಯ ನಿರ್ದೇಶಕ, ನಟ, ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿದ ಅಪೂರ್ವ ದೈತ್ಯ ಪ್ರತಿಭೆ. ಇಂತಹ ಬಹು ಅಪರೂಪದ ಬಹುರೂಪಿ ಅಕ್ಷರ ಸಂತನನ್ನು , ಬ್ರಹ್ಮಾವರ ತಾಲೂಕು ಐದನೇ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ,   ಕನ್ನಡ ತಾಯಿ ತನ್ನ ಮಡಿಲ್ಲಲ್ಲಿ ಕೂರಿಸಿಕೊಂಡಳೆಂದರೆ, ನಿಜಕ್ಕೂ ಅತ್ಯಂತ ಸಂತಸದ ಸ್ತುತ್ಯರ್ಹ  ವಿಚಾರ.
         ಕೆ. ವಾಣಿಶ್ರೀ ಅಶೋಕ್ ಐತಾಳ್ 
          ಶಿಕ್ಷಕರು,
       ಪಾರಂಪಳ್ಳಿ, ಸಾಲಿಗ್ರಾಮ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!