spot_img
Monday, July 27, 2026
spot_img

ಪಡುಕೋಣೆ: ಸಂತ ಅಂತೋನಿ ಚರ್ಚಿನಲ್ಲಿ ಹಿರಿಯರ ದಿನಾಚರಣೆ

 

ಪಡುಕೋಣೆ: ಸಂತ ಅಂತೋನಿ ಚರ್ಚಿನಲ್ಲಿ ಹಿರಿಯ ನಾಗರಿಕರ ದಿನಾಚರಣೆಯು ದಿನಾಂಕ 27. 7. 26 ರಂದು ಸಂತ ಜೊಕಿಮ್ ಮತ್ತು ಸಂತ ಅನ್ನಾ ಮಾತೆಯ ಹಬ್ಬದ ದಿನವಾದ ಜುಲೈ 26 ರಂದು ಧರ್ಮ ಗುರುಗಳಾದ ವಂ|ಫಾ|ಪ್ರಾನ್ಸಿಸ್ ಕರ್ನೆಲಿಯೊರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮಾಜಿ ಪಾಲನ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾರವರು ಮಾತನಾಡಿ ‘ನಮ್ಮ ಮನೆಯ ಹಿರಿಯ ವ್ಯಕ್ತಿಗಳು ನಮ್ಮ ಕುಟುಂಬದ ದೊಡ್ಡ ಆಸ್ತಿ, ಅವರವರ ಮನೆಯ ಹಿರಿಯವರನ್ನು ಅವರವರೇ ಗೌರವ ನೀಡಿ ಚೆನ್ನಾಗಿ ನೋಡಿಕೊಳ್ಳಬೇಕು. ಯಾರ ಮನೆಯಲ್ಲಿ ತಂದೆ, ತಾಯಿ, ಹಿರಿಯವರನ್ನು ಪ್ರೀತಿ, ಗೌರವದಿಂದ ನೋಡಿ ಕೊಳ್ಳುವರೋ, ಆ ಮನೆಯೇ ಇಂದು ಭಾಗ್ಯವಂತ ಅಂದರೆ ಭಗವಂತನ ಕೃಪೆ, ಪಡೆದ ಅದೃಷ್ಟವಂತ ಕುಟುಂಬ’ ಎಂದು ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಂದನೀಯ ಫಾ| ಪ್ರಾನ್ಸಿಸ್ ಕರ್ನೆಲಿಯೊ ‘ನಾನು ಗಮನಿಸಿದ ಪ್ರಕಾರ ಪಡುಕೋಣೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಹಿರಿಯ ವ್ಯಕ್ತಿಗಳು ತಮ್ಮ ತಮ್ಮ ಕುಟುಂಬದಲ್ಲಿ ಅವರವರ ಮಕ್ಕಳ ಜೊತೆಯಲ್ಲಿಯೇ ಇದ್ದಾರೆ. ಇದರ ಅರ್ಥ ನಮ್ಮ ಹಿರಿಯವರು ನಮಗೆ ಬೇಕು ಎಂಬ ಅರ್ಥ ವನ್ನು ಸೂಚಿಸುತ್ತದೆ. ಎಷ್ಟು ಸಂತೋಷ, ಅಭಿಮಾನ, ನಿಮ್ಮ ಕುಟುಂಬಗಳಿಗೆ ಗೌರವ ಎಂದರು. ಮುಖ್ಯ ಅತಿಥಿಗಳಾಗಿ ಕಾನ್ವೆಂಟಿನಾ ಸುಪಿರಿಯರ್ ಸಿಸ್ಟರ್ ಪಾವನಾ, ಪಾಲನಾ ಮಂಡಳಿಯ ಕಾರ್ಯದರ್ಶಿ ಸಿಂತಿಯಾ ವಾಸ್, ಸರ್ವ ಆಯೋಗಗಳಾ ಅಧ್ಯಕ್ಷೆ ಟ್ರಿಜಾ ಸಿಕ್ವೇರಾ, ಕುಟುಂಬ ಆಯೋಗಾದ ಅಧ್ಯಕ್ಷೆ ಫಿಲೋಮಿನಾ ಡಿಸೋಜ ಉಪಸ್ಥಿತರಿದ್ದರು.

ಅತೀ ಹಿರಿಯ ನಾಗರಿಕರಾದ ವೆಲೆನ್ಸಿಯಸ್ ಪಿರೇರಾರವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನವನ್ನು ನೀಡಲಾಯಿತು. ಐ.ಸಿ.ವೈ.ಎಮ್. ಸದಸ್ಯೆ ಶೈನಿ ಡಿ ಆಲ್ಮೇಡಾ ಸ್ವಾಗತಿಸಿದರು. ಐ.ಸಿ. ವೈ.ಎಮ್. ನ ಜೋವಿಯೆಲ್ ಫೆರ್ನಾಂಡಿಸ್ ವಂದಿಸಿದರು. ಅಧ್ಯಕ್ಷೆ ರಿಯಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!