spot_img
Monday, July 27, 2026
spot_img

ಸಿದ್ದಾಪುರ: ಅಗಲಿದ ಪತ್ರಕರ್ತ ನಾಗೇಶ ಗಾಣಿಗರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆ

ಸಿದ್ದಾಪುರ: ಸಮಾಜಮುಖಿ ನಿಲುವು ಹೊಂದಿದ್ದ ಯುವ ಪತ್ರಕರ್ತ ನಾಗೇಶ ಗಾಣಿಗರು ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಸದಾ ಬೆಳಕು ಚೆಲ್ಲುತ್ತಾ ಗ್ರಾಮಾಂತರ ಪ್ರದೇಶದ ಜನಮನದ ನಾಡಿಮಿಡಿತ ಅರಿತಿದ್ದರು. ಪತ್ರಿಕೋದ್ಯಮದ ಜವಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಪಾಲಿಸುತ್ತಿದ್ದ ಅವರು ವೃತ್ತಿನಿಷ್ಠರಾಗಿಯೇ ಬದುಕಿದವರು. ಗ್ರಾಮೀಣ ಭಾಗದಲ್ಲಿ ವರದಿಗಾರಿಕೆ ಸವಾಲಾಗಿದ್ದರೂ ಕೂಡಾ ತನ್ನ ವೈಯಕ್ತಿಕ ನೋವುಗಳನ್ನು ನುಂಗಿಕೊಂಡು ವೃತ್ತಿಗೆ ನ್ಯಾಯ ಒದಗಿಸುವರು. ಅವರ ಕನಸಾಗಿದ್ದ ಮನೆನಿರ್ಮಾಣದ ಉಳಿದ ಕಾಮಗಾರಿಯನ್ನು ಪೂರ್ತಿಗೊಳಿಸುವಲ್ಲಿ ನಾವೆಲ್ಲರೂ ಸಹಕಾರ ನೀಡೋಣ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಇತ್ತೀಚೆಗೆ ಅಗಲಿದ ಪತ್ರಕರ್ತ ನಾಗೇಶ ಗಾಣಿಗ ನೇರಳಕಟ್ಟೆ ಅವರ ಗೌರವಾರ್ಥವಾಗಿ ಸಿದ್ಧಾಪುರದ ರಂಗನಾಥ ಸಭಾಭವನದಲ್ಲಿ ಜು.25ರಂದು ಆಯೋಜಿಸಲಾದ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.

ಉಳ್ಳೂರು-೭೪ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ ಅವರು ನುಡಿನಮನ ಸಲ್ಲಿಸಿ, ಪತ್ರಕರ್ತ ನಾಗೇಶ ಗಾಣಿಗರು ಎಲ್ಲರಿಗೂ ಆತ್ಮೀಯರಾಗಿದ್ದರು. ಸ್ವಾಭಿಮಾನಿ. ಸಾಕಷ್ಟು ಹೊಣೆಗಾರಿಕೆ ಅವರ ಮೇಲಿತ್ತು. ಆದರೆ ಅವರು ಅದನ್ನೂ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ತನ್ನ ಕರ್ತವ್ಯ, ಹಾಗೂ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಅಕಾಲಿಕವಾಗಿ ಅಗಲಿದ್ದಾರೆ. ಅವರ ಸೇವೆ ಸದಾ ಚಿರಸ್ಥಾಯಿ ಎಂದರು.

ಸಿದ್ದಾಪುರ ಸಂಯುಕ್ತ ಜಿ‌ಎಸ್‌ಬಿ ಸಂಘದ ಅಧ್ಯಕ್ಷ ಡಿ. ಗೋಪಿನಾಥ ಕಾಮತ್ ನುಡಿನಮನ ಸಲ್ಲಿಸಿ, ಪತ್ರಕರ್ತನ ಬದ್ದತೆ, ಸೇವಾವೈಖರಿಗೆ ನಾಗೇಶ ಗಾಣಿಗರು ಹೆಸರಾಗಿದ್ದರು. ಸಿದ್ಧಾಪುರ ಭಾಗದ ಅಭಿವೃದ್ಧಿ ಬಗ್ಗೆ ಅವರಲ್ಲಿ ಸಾಕಷ್ಟು ಕನಸುಗಳಿದ್ದವು. ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸಳೆಯುವ ಪ್ರಯತ್ನ ಮಾಡುತ್ತಿದ್ದರು. ಅನಿರೀಕ್ಷಿತವಾಗಿ ಅಗಲಿದ ಅವರ ಮನೆ ನಿರ್ಮಾಣದ ಕನಸಿಗೆ ಸಹೃದಯಿಗಳು ತಮ್ಮಿಂದಾದ ಸಹಕಾರ ನೀಡುವುದು ಕರ್ತವ್ಯವಾಗಿದೆ ಎಂದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ನುಡಿನಮನ ಸಲ್ಲಿಸಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಕ್ರೀಯ ಸದಸ್ಯರಾಗಿದ್ದ ನಾಗೇಶ ಗಾಣಿಗರು ಅವರು ನಮ್ಮೊಂದಿಗಿಲ್ಲ. ಆದರೆ ಅವರ ಮನೆ ನಿರ್ಮಾಣದ ಕನಸು ನಮ್ಮೊಂದಿಗಿದೆ. ಅವರ ಮನೆ ನಿರ್ಮಾಣದ ಬಾಕಿ ಉಳಿದಿರುವ ಕಾಮಗಾರಿ ನೆಡೆಸುವ ಬಗ್ಗೆ ಈಗಾಗಲೇ ದಾನಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಂಘ ತನ್ನಿಂದಾದ ಸಹಕಾರ ನೀಡಲಿದೆ. ಜೊತೆಯಲ್ಲಿ ಜಿಲ್ಲಾ ಸಂಘದ ನಿರ್ದೇಶನದಂತೆ ನಾಗೇಶ ಗಾಣಿಗರ ಹೆಸರಲ್ಲಿ ಪ್ರತಿ ವರ್ಷ ಓರ್ವ ಗ್ರಾಮೀಣ ಪತ್ರಕರ್ತರಿಗೆ ಪ್ರಶಸ್ತಿ ನೀಡುವುದರ ಮೂಲಕ ಅವರ ಹೆಸರಲ್ಲಿ ಶಾಶ್ವತಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ನಿವೃತ ಅಧ್ಯಾಪಕ ಶಶಿಧರ ಶೆಟ್ಟಿ ಅಜ್ರಿ ತಗ್ಗುಂಜೆ ಮಾತನಾಡಿ ನಾಗೇಶ ಗಾಣಿಗ ನತದೃಷ್ಟ. ೧೨ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಕುಟುಂಬದ ಜವಬ್ದಾರಿಯನ್ನು ಹೊತ್ತರು. ವೃದ್ದ ತಾಯಿ, ವಿಶೇಷಚೇತನ ಸಹೋದರ ಹೀಗೆ ಸವಾಲುಗಳು ಅವರ ಮುಂದಿತ್ತು. ಎಲ್ಲಿಯೂ ತನ್ನ ಸಮಸ್ಯೆಯನ್ನು ಹಂಚಿಕೊಳ್ಳದೆ ಇದ್ದ ಸೌಮ್ಯ ಸ್ವಭಾವದ ವ್ಯಕ್ತಿ ಅವರಾಗಿದ್ದರು ಎಂದರು.

ನಿವೃತ ಉಪನ್ಯಾಸಕ ಡಾ.ಶ್ರೀಕಾಂತ ರಾವ್ ಸಿದ್ದಾಪುರ ಮಾತನಾಡಿ, ನಮ್ಮೊಂದಿಗೆ ಆತ್ಮೀಯತೆಯಿಂದ ಇದ್ದ ವ್ಯಕ್ತಿ ನಾಗೇಶ ಗಾಣಿಗರು. ಸಮಾಜಮುಖಿ ಕನಸು ಹೊತ್ತ ಯುವಕ. ಮನೆ ನಿರ್ಮಾಣ, ಬಳಿಕ ಮದುವೆ ಹೀಗೆ ಕನಸುಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟ ನಾವು ಅವರನ್ನು ಕಳೆದುಕೊಂಡಿದ್ದೇವೆ ಎಂದರು.

ಸ್ಥಳೀಯ ಪ್ರಮುಖರಾದ ಡಿ. ಗೋಪಾಲಕೃಷ್ಣ ಕಾಮತ್, ಚಿಂತಕ ಮುಸ್ತಾಕ್ ಹೆನ್ನಾಬೈಲು, ಚಿಟ್ಟೆ ರಾಜಗೋಪಾಲ ಹೆಗ್ಡೆ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಲೋಕೇಶ ಆಚಾರ್ಯ ತೆಕ್ಕಟ್ಟೆ ಮೊದಲಾದವರು ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಜನ ಜಾಗೃತಿ ವೇದಿಕೆ ಸದಸ್ಯ ಕೆ.ಎಸ್. ಮಡಿವಾಳ ಹೊಸಂಗಡಿ, ಅರಣ್ಯ ಗುತ್ತಿಗೆದಾರ ಸುರೇಂದ್ರ ಶೆಟ್ಟಿ ಹಾಲಾಡಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಚ್. ಭೋಜ ಶೆಟ್ಟಿ, ಜಿ. ಪಂ ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

ಸಿದ್ದಾಪುರ ಯಕ್ಷ ನುಡಿಸಿರಿ ಬಳಗದ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ವಿದ್ಯಾ ಭಾರತಿ ಜಿಲ್ಲಾಧ್ಯಕ್ಷ ಟಿ. ಜಿ ಪಾಂಡುರಂಗ ಪೈ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸತೀಶ ಆಚಾರ್ಯ ಉಳ್ಳೂರು ಕಾರ್ಯಕ್ರಮ ಆಯೋಜನೆ ಮಾಡಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!