spot_img
Monday, July 27, 2026
spot_img

ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ “ಅಕ್ಷರ ಪದ್ಮ ನಿಧಿ” ಬಿರುದು ಪ್ರಧಾನ

 

ಕುಂದಾಪುರ, ಜುಲೈ 27: ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ವಾರ್ಷಿಕ ಸಮಾವೇಶ ತಮಿಳುನಾಡಿನ ಶ್ರೀರಂಗಂನಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಕರ್ನಾಟಕ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ವಾಸ್ತುತಜ್ಞ, ಜ್ಯೋತಿಷಿ, ಸಾಹಿತಿ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಮಾಜಿ ರಾಷ್ಟ್ರಅಧ್ಯಕ್ಷರಾದ ಬ್ರಹ್ಮರ್ಷಿ ಬೊಜ್ಜನ್ನ ಪಂತುಲುರವರು “ಅಕ್ಷರ ಪದ್ಮ ನಿಧಿ” ಬಿರುದನ್ನು ರಾಷ್ಟ್ರೀಯ ಮಟ್ಟದಲ್ಲಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಪ್ರಣವ ಪೀಠದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶ್ರೀ ಶ್ರೀ ಡಾ. ಮಾತೇ ಮುಕ್ತಾಂಭಿಕಾದೇವಿ, ಪದ್ಮಭೂಷಣ ಕುಪ್ಪುಸ್ವಾಮಿ ಚೆಟ್ಟಿಯ್ಯಾರ್ ಚೆನೈ, ಶ್ರೀ ಗುರು ಮಾರ್ಕಾಂಡೇಯ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಪ್ರಭುಲಿಂಗ ಸ್ವಾಮಿ, ಅಖಿಲಭಾರತ ಪದ್ಮಶಾಲಿ ಸಂಘ ಹೈದರಾಬ್ ಇದರ ಅಧ್ಯಕ್ಷರಾದ ಕಂದಗಟ್ಲ ಸ್ವಾಮಿ, ಬ್ರಹ್ಮರ್ಷಿ ಪುಂಡಲಿಕಾ ನಂದ ಕಾಟಿಪಾಮುಲು ಪಂತುಲು, ರಾಷ್ಟ್ರಅಧ್ಯಕ್ಷರಾದ  ನೀಲಾ ಶ್ರೀಮತಿ ರಾಧ, ತಮಿಳುನಾಡು ರಾಜ್ಯಾಧ್ಯಕ್ಷರಾದ ವೀರಮಲ್ಲ ರವಿಚಂದ್ರನ್, ಹೈದರಾಬಾದ್ ತೆಲಂಗಾಣದ ರಮೇಶ್ ಋಷಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಅಖಿಲಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಬ್ರಹ್ಮರ್ಷಿ ಮಾರ್ಚಾಲು ಕೇಶವಮೂರ್ತಿ ಭಾರ್ಗವಾಚಾರ್ಯರು ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಅಡೆಪು ಹರೀಶ್ ವಂದಿಸಿದರು.
ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಸತತ 42 ವರ್ಷಗಳಿಂದ 16 ನಾಟಕ, 4 ಕಾದಂಬರಿ, 76 ಯಕ್ಷಗಾನ ಪ್ರಸಂಗ, ನೂರಾರು ಬಾವಗೀತೆ, ಭಕ್ತಿಗೀತೆ, ಕವನ ರಚಿಸಿದ್ದಲ್ಲದೇ ವಾಸ್ತುಕ್ಷೇತ್ರ, ಜ್ಯೋತಿಷ್ಯಕ್ಷೇತ್ರ, ಕಲಾಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ “ಅಕ್ಷರ ಪದ್ಮ ನಿಧಿ” ರಾಷ್ಟ್ರೀಯ ಮಟ್ಟದ ಗೌರವವನ್ನು ನೀಡಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!