spot_img
Wednesday, March 25, 2026
spot_img

ಶ್ರೀ ಹಾಡಿಗರಡಿ ದೈವಸ್ಥಾನ ನಾಡ: ವಾರ್ಷಿಕ ಹಬ್ಬ- ಧಾರ್ಮಿಕ ಸಭಾ ಕಾರ್ಯಕ್ರಮ

ಕುಂದಾಪುರ: ಶ್ರೀ ಹಾಡಿಗರಡಿ ದೈವಸ್ಥಾನ ನಾಡ ಇಲ್ಲಿ ವಾರ್ಷಿಕ ಹಾಲು ಹಬ್ಬ, ಗೆಂಡಸೇವೆಯ ಪ್ರಯುಕ್ತ ಕೊರೋನಾ ವಾರಿಯರ್ಸ್‍ಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ.14ರಂದು ನಡೆಯಿತು.


ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಪ್ರದೀಪ್ ಎಂ.ಚಂದನ್ ಕುಂದಬಾರಂದಡಿ, ಮುಂಬೈ ಇವರು ಉದ್ಘಾಟಿಸಿದರು. ಶ್ರೀ ಹಾಡಿಗರಡಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ನಾಗೇಶ ಪಿ.ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಪ್ರವೀಣ್ ಶೆಟ್ಟಿ ಕಡ್ಕೆ, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಕೆ.ಎಂ.ಶಿವರಾಮ ಕೋಟ ಭಾಗವಹಿಸಿದ್ದರು. ವೈದ್ಯರಾದ ಡಾ|ಪ್ರೇಮಾನಂದ, ಡಾ|ಸುರೇಶ ಕುಮಾರ ಶೆಟ್ಟಿ, ಗ್ರಾಮ ಲೆಕ್ಕಿಗರಾದ ಸಂದೀಪ ಭಂಡಾರ್ಕಾರ್, ಅನ್ನದಾನದ ಸೇವಾಕರ್ತರಾದ ಮಾಧವ ಮೊಗವೀರ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಡಾ| ಪ್ರೇಮಾನಂದ, ಡಾ| ಸುರೇಶ ಕುಮಾರ ಶೆಟ್ಟಿ ಸಹಿತ ಕೊರೋನಾ ವಾರಿಯರ್ಸ್ (ಆರೋಗ್ಯ ಕಾರ್ಯಕರ್ತರನ್ನು) ಗೌರವಿಸಲಾಯಿತು. ಕೊರೋನಾ ಫ್ರಂಟ್‍ಲೈನ್ ವಾರಿಯರ್ರ್ಸ್ ಆಗಿ ಸೇವೆ ಸಲ್ಲಿಸಿದ ರಮೇಶ ಟಿ.ಟಿ., ರಾಘವೇಂದ್ರ ನೆಂಪು ಅವರನ್ನು ಸನ್ಮಾನಿಸಲಾಯಿತು.

ಹಾಡಿಗರಡಿ ದೈವಸ್ಥಾನ ದೈವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಎನ್,ಎಮ್ ಸ್ವಾಗತಿಸಿ, ವಿಜಯ ಪಿ.ಕಾಂಚನ್ ವಂದಿಸಿದರು. ವಿಶ್ವನಾಥ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.


ನಂತರ ಮೊವಾಡಿಯ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಇಲ್ಲಿನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ನಾಗಸನ್ನಿಧಿಯಲ್ಲಿ ಪೂಜೆ, ದರ್ಶನ ಸೇವೆ, ಮಹಾಪೂಜೆ, ಮಹಾಮಂಗಳಾರತಿ, ದೈವದರ್ಶನ ಸೇವೆ, ಗೆಂಡಸೇವೆ, ಅನ್ನಪ್ರಸಾದ ವಿತರಣೆ, ಜ.15ರಂದು ತುಲಾಭಾರ ಸೇವೆ, ಮಹಾಪೂಜೆ, ಮಹಾಮಂಗಳಾರತಿ, ಸರ್ವ ದೈವಗಳ ದರ್ಶನ ಸೇವೆ, ಹೂ ಸಮರ್ಪಣೆ, ಬಲಿ ಪೂಜೆ, ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!