Sunday, September 8, 2024

ಮಾರಣಕಟ್ಟೆ: ಪಟ್ಲ ಸತೀಶ್ ಶೆಟ್ಟಿಯವರಿಗೆ ಸನ್ಮಾನ


ಕುಂದಾಪುರ, ಜ.15: ಯಕ್ಷಸಂಕ್ರಾಂತಿಯ ನೇತೃತ್ವದಲ್ಲಿ ಮಾರಣಕಟ್ಟೆಯ ನಡೆದ ಪಾವಂಜೆ ಮೇಳದ ಯಕ್ಷಗಾನ ಬಯಲಾಟದಲ್ಲಿ ಭಾಗವತ, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.


ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಯಕ್ಷಗಾನ ಸ್ಪೂರ್ತಿ ಪಟ್ಲ ಸತೀಶ ಶೆಟ್ಟರು. ಅವರ ಧ್ವನಿಯಲ್ಲಿರುವ ವಿಶೇಷತೆಯ ಸಳೆತದಿಂದ ಪಟ್ಲರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಅಭಿಪ್ರಾಯ ಪಟ್ಟರು.


ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ಯಕ್ಷಗಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇನ್ನೂ 500 ವರ್ಷವಾದರೂ ಯಕ್ಷಗಾನಕ್ಕೆ ಯಾವುದೇ ಕುಂದು ಬರದು. ಯಕ್ಷಗಾನದ ಶಕ್ತಿ ಅಂತಹದ್ದು ಎಂದರು.


ಉದ್ಯಮಿ ಗುರ್ಮಿ ಸುರೇಶ ಶೆಟ್ಟಿ ಅವರು ಮಾತನಾಡಿ, ಪಟ್ಲ ಸತೀಶ ಶೆಟ್ಟರು ನಾಡಿನ ಹೆಮ್ಮೆಯ ಯಕ್ಷಗಾಯಕ. ಶ್ರೀಮಂತಿಕೆಗಿಂತ ನೆಮ್ಮದಿಯ ಬದುಕು ಶ್ರೀಮಂತ ಎನ್ನುವುದನ್ನು ತನ್ನ ಗಾಯನದ ಮೂಲಕ ತೋರಿಸಿಕೊಟ್ಟವರು ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ ಶೆಟ್ಟಿ, ಅಭಿಮಾನಿಗಳ ಪ್ರೀತಿಯ ಮಧ್ಯೆ ಮಾತು ಮೌನವಾಗುತ್ತದೆ. ಕಲಾವಿದರಿಗೆ ಇಂತಹ ಅಭಿಮಾನವೇ ಸಂಪತ್ತು. ನಿಮ್ಮ ಅಭಿಮಾನ ಎಲ್ಲ ಯಕ್ಷಗಾನ ಕಲಾವಿದರ ಮೇಲಿರಲಿ, ಯಕ್ಷಗಾನವನ್ನು ಬೆಳೆಸೋಣ ಎಂದರು.


ಈ ಸಂದರ್ಭದಲ್ಲಿ ಚಿತ್ರಕೂಟ ಕಳಿ ಆಲೂರು ಇದರ ವೈದ್ಯರಾದ ಡಾ|ರಾಜೇಶ ಬಾಯರಿ, ರಾಮಚಂದ್ರ ಮಂಜರು ಮಾರಣಕಟ್ಟೆ, ಪಾವಂಜೆ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಶೆಟ್ಟಿ, ಚಾರ್ಟೆಡ್ ಅಕೌಂಟೆಂಟ್ ರಾಜೇಶ ಶೆಟ್ಟಿ ನಂದ್ರೋಳಿ, ಪತ್ರಕರ್ತ ವಸಂತ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಹೊಯ್ಸಳ ಕಲ್ಚರಲ್ ಟ್ರಸ್ಟ್ ನಾಡ ವತಿಯಿಂದ ಪಟ್ಲ ಸತೀಶ ಶೆಟ್ಟರನ್ನು ಸನ್ಮಾನಿಸಲಾಯಿತು.

ಯಕ್ಷಸಂಕ್ರಾಂತಿಯ ರೂವಾರಿ ನಾಗರಾಜ ಶೆಟ್ಟಿ ನೈಕಂಬ್ಳಿ ಸ್ವಾಗತಿಸಿ, ವಂದಿಸಿದರು.
ಬಳಿಕ ‘ಗಜೇಂದ್ರ ಮೋಕ್ಷ, ಮಾನಿಷಾದ, ರತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!