spot_img
Wednesday, March 25, 2026
spot_img

ಜಿಲ್ಲಾ ರೈತ ಸಂಘದ 1200 ಸದಸ್ಯರಿಗೆ ‘ಜನಾಧಿಕಾರ’ ಪುಸ್ತಕ ಉಚಿತ ವಿತರಣೆಗೆ ನಿರ್ಧಾರ-ಕೆ.ಪ್ರತಾಪಚಂದ್ರ ಶೆಟ್ಟಿ


ಕುಂದಾಪುರ: ರಾಜ್ಯದ ಗ್ರಾಮ ಪಂಚಾಯಿತಿಗಳು ಜನಸಹಭಾಗಿತ್ವದ ಮೂಲಕ ಆಡಳಿತ ಮತ್ತು ಅಭಿವೃದ್ಧಿ ಕಾರ್ಯ ನಡೆಸಬೇಕು. ಅದಕ್ಕಾಗಿ ಜನಪ್ರತಿನಿಧಿಗಳಿಗೆ ಇರುವಂತೆ, ಜನರಿಗೂ ಅದರ ಕುರಿತಾದ ಅರಿವು ಇರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ರೈತಸಂಘದ 1,200 ಸದಸ್ಯರಿಗೆ ಎಸ್. ಜನಾರ್ದನ ಮರವಂತೆ ಸಂಕಲಿಸಿ, ಜನಪ್ರತಿನಿಧಿ ಪ್ರಕಾಶನ ಹೊರತಂದಿರುವ ಜನಾಧಿಕಾರ’ ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಎಂದು ರೈತಸಂಘದ ಅಧ್ಯಕ್ಷ, ವಿಧಾನ ಪರಿಷತ್ತಿನ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.


ಜ.೩ರಂದು ಜನಾರ್ದನ ಮತ್ತು ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ಹಸ್ತಾಂತರಿಸಿದ ಪುಸ್ತಕಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಪುಸ್ತಕ ಖರೀದಿಸಿದ ಉದ್ದೇಶವನ್ನು ವಿವರಿಸಿದರು.


ರಾಜಕೀಯೇತರ ಸಂಘಟನೆಯಾದ ರೈತಸಂಘವು, ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಜತೆ ಸೇರಿಕೊಂಡು ವಾರಾಹಿ ನೀರಾವರಿ ಯೋಜನೆ, ಸಿ‌ಆರ್‌ಝಡ್ ನಿರ್ಬಂಧ, ಕಸ್ತೂರಿ ರಂಗನ್ ವರದಿ, ಉಡುಪಿಗೆ ನೀರು ಪೂರೈಸುವ ಮಾರ್ಗದಲ್ಲಿರುವ ಗ್ರಾಮಗಳಿಗೆ ನೀರು ಪೂರೈಕೆ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ಡೀಮ್ಡ್ ಫಾರೆಸ್ಟ್, ಕಾಡು ಪ್ರಾಣಿಗಳಿಂದ ಬೆಳೆಹಾನಿ ಇತ್ಯಾದಿ ರೈತ ಸಮುದಾಯದ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತ ಬಂದಿದೆ. ಟ್ರಸ್ಟ್ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿವಿಧ ನೆರವು, ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅವೆಲ್ಲದರ ಮುಂದುವರಿಕೆಯಾಗಿ ರೈತಸಂಘದ ಸದಸ್ಯರು ಗ್ರಾಮ ಪಂಚಾಯಿತಿ ವ್ಯವಸ್ಥೆಯ ಸಮಗ್ರ ಅರಿವು ಪಡೆದು ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಜವಾಬ್ದಾರಿಯಿಂದ ಭಾಗವಹಿಸಬೇಕು; ಪಂಚಾಯಿತಿಗಳು ಕಾಯಿದೆ, ನಿಯಮಗಳ ಚೌಕಟ್ಟಿನಲ್ಲಿ, ಭ್ರಷ್ಟಾಚಾರ ಮುಕ್ತವಾಗಿ ನೈಜ ಅಭಿವೃದ್ಧಿಯ ಗುರಿ ಇರಿಸಿಕೊಂಡು ಕಾರ್ಯವೆಸಗುವಂತೆ ಎಚ್ಚರ ವಹಿಸಬೇಕು ಎನ್ನುವ ಉದ್ದೇಶದಿಂದ ಈ ಪುಸ್ತಕ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.


ಜನಾಧಿಕಾರದ ಎರಡನೆ ಆವೃ ತ್ತಿಯಸುವ ಮೂಲಕ ಪುಸ್ತಕ ಪ್ರಕಟಣೆಯ ಉದ್ದೇಶ ಸಾಧನೆಗೆ ವಿಶೇಷಕೊಡುಗೆ ಮತ್ತು ಪ್ರೋತ್ಸಾಹ ನೀಡಿದ ಬಗ್ಗೆ ಎರಡು ಸಂಸ್ಥೆಗಳ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸುಬ್ರಹ್ಮಣ್ಯ ಪಡುಕೋಣೆ ಕೃತಜ್ಞತೆ ಸಲ್ಲಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!