Thursday, November 21, 2024

ಸಾರ್ವಜನಿಕ ಸ್ವತ್ತು ಕಾಪಾಡುವುದರಲ್ಲಿ ಯುವ ಜನರ ಪಾತ್ರ ಅಗತ್ಯ-ಸದಾಶಿವ ಆರ್. ಗವರೋಜಿ

ಕುಂದಾಪುರ:ಯುವ ಸ್ಪಂದನಾ ಕೇಂದ್ರ ಉಡುಪಿ, ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ‌ಎಸ್ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಅರಿವು ಕಾರ್ಯಕ್ರಮವು ಶಿಕ್ಷ ಪ್ರಭಾ ಅಕಾಡೆಮಿಯ ಕೌಟಿಲ್ಯ ಸಭಾಂಗಣದಲ್ಲಿ ಜರಗಿತು.


ಕುಂದಾಪುರ ಠಾಣಾ ಅಧಿಕಾರಿ ಸದಾಶಿವ ಆರ್. ಗವರೋಜಿ ಉದ್ಘಾಟಿಸಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸುವ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅವರ ಜೀವನದ ಭವಿಷ್ಯವಾಗಿರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸಾರ್ವಜನಿಕರಿಗೆ ಮಾಹಿತಿ ಕೊರೆತೆಯಿರುತ್ತದೆ. ಸರಿಯಾದ ಮಾಹಿತಿ ನೀಡಬೇಕಾದರೆ ಹೆಚ್ಚು ಹೆಚ್ಚು ಕಾರ್ಯಕ್ರಮ ಸಂಘಟಿಸುವುದರ ಮೂಲಕ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯನ್ನು ನೀಡಿದರೆ ಸಾಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ನಿರ್ದೇಶಕರಾದ ಪ್ರತಾಪ್‌ಚಂದ್ರ ಶೆಟ್ಟಿಯವರು ವಹಿಸಿಕೊಂಡು ಯುವಜನರು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಯುವ ಸ್ಪಂದನ ಕೇಂದ್ರದ ಪರಿವರ್ತಕರಾದ ನರಸಿಂಹ ಗಾಣಿಗ ಇವರು ಯುವ ಸಬಲೀಕರಣ ಸೇವೆಗಳ ಬಗ್ಗೆ ಮಾತನಾಡಿದರು.


ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ನಿರ್ದೇಶಕರಾದ ಭರತ್ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡುತ್ತಾ ಠಾಣಾಧಿಕಾರಿ ಸದಾಶಿವ ಆರ್ ಗವರೋಜಿಯಂತಹ ದಕ್ಷ ಅಧಿಕಾರಿಗಳ ಅನುಭವದ ಸ್ಪೂರ್ತಿದಾಯಕ ಮಾತುಗಳು ವಿದ್ಯಾರ್ಥಿಗಳಿಗೆ ಇತ್ತೀಚಿನ ದಿವಸದಲ್ಲಿ ಬಹಳ ಅಗತ್ಯವಿದೆ ಎಂದರು.

ವಿದ್ಯಾರ್ಥಿನಿ ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೇಯಾ ಭಟ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!