Thursday, November 21, 2024

ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸದಸ್ಯರಿಗೆ ವಿಶೇಷ ಕೊಡುಗೆ| ಸುದ್ಧಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಸ್.ರಾಜು ಪೂಜಾರಿ ಘೋಷಣೆ


ಕುಂದಾಪುರ, ಜ.19: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ನಾವುಂದದಲ್ಲಿ ಪ್ರಧಾನ ಕಛೇರಿ ಹೊಂದಿದ್ದು, ಮರವಂತೆ, ಹೇರೂರು ಮತ್ತು ಬಡಾಕೆರೆಯಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ತನ್ನ ಸದಸ್ಯರಿಗೆ ಆದ್ಯತೆ ಸಾಲ ಸೌಲಭ್ಯ ನೀಡಲು ಇದೀಗ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎಸ್.ರಾಜು ಪೂಜಾರಿ ಅವರು, ಈಗಾಗಲೇ ಕೊರೋನಾ ಮಹಾಮಾರಿ ಎಲ್ಲೆಡೆ ವ್ಯಾಪಿಸಿದ್ದು ಇದರಿಂದಾಗಿ ನಮ್ಮ ಸದಸ್ಯರು ಆರ್ಥಿಕ ಹೊಡೆತವನ್ನು ಅನುಭವಿಸಿದ್ದಾರೆ. ಅದಕ್ಕಾಗಿ ಸಂಘವು ತನ್ನ ಸದಸ್ಯರ ಸಾಲಗಳಿಗೆ ಬಡ್ಡಿ ರಿಯಾಯಿತಿಯನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಸಂಘವು ರೈತ ಮಿತ್ರ ಯೋಜನೆ ಘೋಷಣೆ ಮಾಡಿದ್ದು ಈಗಾಗಲೇ ಸಾಲ ಪಡೆದು 31/03/2020ಕ್ಕೂ ಮೊದಲೇ ಸುಸ್ತಿಯಾದ ಸಾಲಗಾರರು 31/03/2021ರ ಒಳಗೆ ಮರು ಪಾವತಿ ಮಾಡಿದಲ್ಲಿ ಶೇ.2 ಬಡ್ಡಿ ರಿಯಾಯಿತಿ ಮತ್ತು ದಂಡನೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ರಾಜು ಪೂಜಾರಿಯವರು ಘೋಷಿಸಿದರು. ಇದರಿಂದಾಗಿ 400ಕ್ಕೂ ಮಿಕ್ಕಿ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.


ಪುಷ್ಪಕ ಯೋಜನೆಯಡಿಯಲ್ಲಿ ವಿಶೇಷ ವಾಹನ ಸಾಲ ಸೌಲಭ್ಯವನ್ನು ಸಂಘವು ಘೋಷಿಸಿದೆ. 31 ಮಾರ್ಚ್ 2021 ರವರೆಗೆ ಕೇವಲ 12.50% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದ್ದು ತಕ್ಷಣವೇ ವಾಹನ ಸಾಲವನ್ನು ಮಂಜೂರು ಮಾಡಲಾಗುತ್ತದೆಂದು ತಿಳಿಸಿದರು.


ಸಂಘದ ವ್ಯಾಪ್ತಿಯ ಸದಸ್ಯ ರೈತರಿಗೆ ರೂ.3 ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲವನ್ನು ನೀಡುತ್ತಿದೆ. ಪಹಣಿ ಹೊಂದಿರುವ ಪ್ರತಿಯೊಬ್ಬ ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಲ್ಲದೇ ರೂ.10 ಲಕ್ಷದವರೆಗೆ ಶೇ.3 ಬಡ್ಡಿ ದರದಲ್ಲಿ ಕೃಷಿ ಅಭಿವೃದ್ಧಿ ಸಾಲ ನೀಡುತ್ತಿದ್ದು ಈ ಬಗ್ಗೆಯೂ ಸದಸ್ಯರು ಗಮನ ಹರಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದರು.


ಸಂಘದ ಎಲ್ಲಾ ಶಾಖೆಗಳಲ್ಲಿ ಕೃಷಿಯೇತರ ಸಾಲಗಳನ್ನು ಸಂಘವು ನೀಡುತ್ತಿದೆ. ಆಸ್ತಿ ಖರೀದಿ ಸಾಲ, ಸ್ಥಿರಾಸ್ತಿ ಅಡವಿನ ಸಾಲ, ವೇತನ ಆಧಾರಿತ ಸಾಲ, ವೃತ್ತಿ ಸಾಲ, ಒವರ್ ಡ್ರಾಪ್ಟ್ ಸೌಲಭ್ಯ, ವೈಯಕ್ತಿಕ ಸಾಲಗಳನ್ನು ಸಂಘವು ನೀಡುತ್ತಿದೆ.

ಜಾನುವಾರು ಡೈರಿ ಘಟಕ ಸಾಲ ಯೋಜನೆಯಲ್ಲಿ ರೂ.8.99 ಲಕ್ಷದವರೆಗೆ ಶೇ.3 ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಹೈನುಗಾರರಿಗೆ ನೀಡಲಾಗುವುದು. ಆಕರ್ಷಕ ಬಡ್ಡಿ ದರದಲ್ಲಿ ಗೃಹ ನಿರ್ಮಾಣ ಸಾಲವನ್ನು ಮಂಜೂರು ಮಾಡಲಾಗುವುದು ಎಂದರು. ಸದಸ್ಯರ ಅನುಕೂಲಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲವನ್ನು ನೀಡಲಾಗುತ್ತಿದ್ದು ಸಂಘದ ಎಲ್ಲಾ ಶಾಖೆಗಳಲ್ಲಿ ಅತ್ಯಂತ ತ್ವರಿತವಾಗಿ ನೀಡಲಾಗುತ್ತದೆ ಎಂದರು.


ನವೋದಯ ಸ್ವ ಸಹಾಯ ಗುಂಪುಗಳಿಗೆ ರೂ.10 ಲಕ್ಷದವರೆಗೆ ಸಾಲವನ್ನು ಘೋಷಣೆ ಮಾಡಲಾಗಿದೆ.
ಸದಸ್ಯರ ಠೇವಣಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನಿಗದಿಗೊಳಿಸಲಾಗಿದ್ದು ಹಿರಿಯ ನಾಗರೀಕರಿಗೆ 0.5% ಹೆಚ್ಚಿಗೆ ಬಡ್ದಿ ದರವನ್ನು ನಿಗದಿಗೊಳಿಸಲಾಗಿದೆ. ಅಲ್ಲದೇ ಕಲ್ಪತರು ನಗದು ಪತ್ರದಲ್ಲಿ ಹೂಡಿಕೆ ಮಾಡಿದರೆ 96 ತಿಂಗಳುಗಳಲ್ಲಿ ದ್ವಿಗುಣಗೊಳ್ಳಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಂಘದ ಸದಸ್ಯರು ಸದುಪಯೋಗಪಡಿಸಿಕೊಳ್ಲಬೇಕೆಂದು ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿಯವರು ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎಮ್. ಚಂದ್ರಶೀಲ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಮತ್ತು ಸಂಘದ ನಿರ್ದೇಶಕರಾದ ಸಂಘದ ನಿರ್ದೇಶಕರಾದ ವಾಸು ಪೂಜಾರಿ, ಜಗದೀಶ ಪಿ.ಪೂಜಾರಿ, ಭೋಜ ನಾಯ್ಕ, ಪ್ರಕಾಶ ದೇವಾಡಿಗ, ರಾಮಕೃಷ್ಣ ಖಾರ್ವಿ, ನರಸಿಂಹ ದೇವಾಡಿಗ, ಎಮ್, ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ಶ್ರೀಮತಿ ಎಮ್.ನಾಗಮ್ಮ, ಶ್ರೀಮತಿ ಸರೋಜ, ರಾಮ, ನಾಮನಿರ್ದೇಶಿತ ನಿರ್ದೇಶಕರಾದ ಎಮ್.ವಿನಾಯಕ ರಾವ್, ಅಶೋಕ ಕುಮಾರ್ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!