spot_img
Monday, June 29, 2026
spot_img

ಆತ್ರಾಡಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯಮಟ್ಟದ ಏಕತಾ ಸಾಮಾಜಿಕ ಸಾಮರಸ್ಯ ಶಿಬಿರ 2026-27

ವಂಡ್ಸೆ: ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ಆತ್ರಾಡಿ-ವಂಡ್ಸೆ ಇವರ ಸಹಯೋಗದಲ್ಲಿ ಜೂನ್ 27ರಿಂದ ಜೂನ್ 29 ರವರೆಗೆ ರಾಜ್ಯದ 17 ಜಿಲ್ಲೆಗಳಿಂದ ಆಗಮಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜಸ್ ವಿದ್ಯಾರ್ಥಿಗಳಿಗಾಗಿ ’ಎಕತಾ ಸಾಮಾಜಿಕ ಸಾಮರಸ್ಯ’ 2026-27 ಮೂರು ದಿನಗಳ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಎಕತೆ ಮತ್ತು ಸಾಮಾಜಿಕ ಸಾಮರಸ್ಯದ ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮವನ್ನು ಮಾಜಿ ಸಚಿವ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಡಾ. ಪಿ. ಜಿ. ಆರ್. ಸಿಂಧ್ಯಾ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಮುಸ್ಲಿಂ ಬಾಂಧವ್ಯ ಕಾರ್ಯವೇದಿಕೆ ಸಂಸ್ಥಾಪಕರಾದ ಮಸ್ತಾಕ್ ಹೆನ್ನಾಬೈಲು, ಸಾಹಿತಿಗಳು ಹಾಗೂ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ತಾ ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಧರ್ಮಗಳಲ್ಲಿ ಸಾಮಾಜಿಕ ಸಾಮರಸ್ಯ ಹಾಗೂ ಎಕತಾ ವಿಚಾರಗಳನ್ನು ದೃಷ್ಟಾಂತಗಳ ಮೂಲಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ವಹಿಸಿದ್ದರು. ವಿಜಯ ಮಕ್ಕಳ ಕೂಟ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ. ಎನ್. ಶೆಟ್ಟಿ, ಉದ್ಯಮಿ ಶಂಕರ್ ಹೆಗ್ಡೆ ಹೊಳ್ಮಗೆ,  ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಬೈಂದೂರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ ಇದರ ಉಪಾಧ್ಯಕ್ಷರಾದ ಮಹಮ್ಮದ್ ಮೌಲ್, ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಎ.ಎಸ್.ಓ.ಸಿ ಸುಮನ್ ಶೇಖರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿ ಇದರ ಕಾರ್ಯದರ್ಶಿ ಆನಂದ ಅಡಿಗ ಉಪಸ್ಥಿತರಿದ್ದರು.

ಉಪನಿರ್ದೇಶಕರ ಕಛೇರಿ ಉಡುಪಿ ಇಲ್ಲಿನ ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಆಲೂರು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿಜಯ ಮಕ್ಕಳ ಕೂಟ ಸಂಸ್ಥೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ದೀಪಿಕಾ ಸುಭಾಸ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ಕಾರ್ಯ ಚಟುವಟಿಕೆಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಕ ಮಾಲಿಕೆಗಳಲ್ಲದೆ ಸ್ಥಳೀಯ ಧಾರ್ಮಿಕ ಹಾಗೂ ಶ್ರದ್ದಾ ಕೇಂದ್ರಗಳಾದ ಗುಲ್ವಾಡಿ ಮಸೀದಿಗೆ ಭೇಟಿ ನೀಡಲಾಯಿತು. ಆ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಉದ್ಯಮಿಗಳಾದ ಗುಲ್ವಾಡಿ ಚೇರಿಯಫ್ ಸಾಹೇಬ್ ಹಾಗೂ ಮುಸ್ತಾಕ್ ಹೆನ್ನಾಬೈಲು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು. ಮಸೀದಿಯ ಧಾರ್ಮಿಕ ಪ್ರಮುಖರಾದ ಝಮೀರ್ ಅಹಮದ್ ರಷಾದಿ ಮತ್ತು ಮುಸ್ತಾಕ್ ಹೆನ್ನಾಬೈಲ್ ಮಸೀದಿಯ ಭಕ್ತಿ ಆಚರಣೆಯ ಕಾರ್ಯವಿಧಾನಗಳ ಗುರಿ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು. ಈ ಸಂದರ್ಭದಲ್ಲಿ ಮಸೀದಿ ಆಡಳಿತ ಮಂಡಳಿಯ ಇತರ ಸದಸ್ಯರು ಉಪಸ್ಥಿತರಿದ್ದರು.

ಅನಂತರ ಮಾರಣಕಟ್ಟೆ ಬ್ರಹ್ಮಲಿಂಗೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸಂದರ್ಶಿಸಲಾಯಿತು. ತದನಂತರ ಜಡ್ಕಲ್ ಜಾರ್ಜ್ ಚರ್ಚ್‌ಗೆ ಕೋರಿಕೆಯ ಮೇರೆಗೆ ಅವಕಾಶ ಮಾಡಿಕೊಟ್ಟು ಅಲ್ಲಿನ ಧರ್ಮಗುರುಗಳು ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಚರ್ಚ್‌ನ ಕಾರ್ಯವಿಧಾನ, ಶ್ರದ್ದಾ ಭಕ್ತಿ ಆಚರಣೆಗಳ ಕುರಿತು ಹಾಗೂ ಚರ್ಚ್ ಬೆಳೆದು ಬಂದ ಪರಂಪರೆಯ ವಿಚಾರವಾಗಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


ತದನಂತರ ಸಂಜೆ ಗಂಟೆಗೆ ವಂಡ್ಸೆ ಪೇಟೆಯಲ್ಲಿ ಭಿತ್ತಿಚಿತ್ರ ಹಿಡಿದು ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಾಮಾಜಿಕ ಸಾಮರಸ್ಯ ಮತ್ತು ಸ್ವಸ್ಥ ಸಮಾಜಕ್ಕಾಗಿ ಮಾದಕ ವಸ್ತುಗಳಿಂದ ಮುಕ್ತ ಸಮಾಜಕ್ಕಾಗಿ ಜಾಥಾವನ್ನು ಆಯೋಜಿಸಲಾಯಿತು. ಈ ಜಾಥಾ ಜವಬ್ದಾರಿಯನ್ನು ವಿಜಯ ಮಕ್ಕಳ ಕೂಟ ಸಂಸ್ಥೆ ಹಾಗೂ ಉಡುಪಿ ಜಿಲ್ಲೆ, ಸೌಟ್ಸ್ ಮತ್ತು ಗೈಡ್ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದರು.

ಜೂ.28ರಂದು ಸಂಜೆ ಕಾರ್ಯಕ್ರಮವು ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಎಕತಾ ಸಾಮಾಜಿಕ ಸಾಮರಸ್ಯಕ್ಕೆ ಕುರಿತಂತೆ ಸಮಾಲೋಚನ ಚರ್ಚೆ ವಿಚಾರಗೋಷ್ಠಿಗಳು ನಡೆಯಿತು. ಜೂ.29ರಂದು ಬೆಳಿಗ್ಗೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿಡಿಯೋ ವೀಕ್ಷಿಸಿ: https://www.facebook.com/share/v/1BZSvojnGA/

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!