spot_img
Monday, June 29, 2026
spot_img

ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು: ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೆಬಲ್ ಟ್ರಸ್ಟ್ ಕೊಡುಗೆ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ, ಜೂ.29: ಒಂದು ಸಂಸ್ಥೆಯ ಯಶಸ್ಸಿಗೆ ನಾಯಕತ್ವ ಮುಖ್ಯ. ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಂತಹವರ ನಾಯಕತ್ವದಲ್ಲಿ ಇಂಥಹ ಮಾದರಿ ಕಾರ್ಯಗಳು ಸಾಧ್ಯವಾಗುತ್ತದೆ. ಸರಕಾರಿ ಶಾಲೆಗಳ ಉಳಿಯುವಿಕೆಯಲ್ಲಿ ಮಂಜರ ಪಾತ್ರ ಬಹುಮುಖ್ಯವಾದುದು. ಅವರು ಈ ಭಾಗದ ಹಲವು ಸರಕಾರಿ ಶಾಲೆಗಳ ಬೆಳವಣಿಗೆಗೆ ಕಾರಣಿಕರ್ತರಾಗುವ ಮೂಲಕ ರಾಜ್ಯಕ್ಕೆ ಆದರ್ಶಪ್ರಾಯರಾಗಿದ್ದಾರೆ. ಈ ಶಾಲೆಗೆ ಭವ್ಯವಾದ ಕಟ್ಟಡವನ್ನು ನಿರ್ಮಿಸಿಕೊಡುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ಬೈಂದೂರು ವಲಯದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿಗೆ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೆಬಲ್ ಟ್ರಸ್ಟ್ ಚಿತ್ತೂರು ಇವರ ಕೊಡುಗೆಯಾಗಿ ನಿರ್ಮಾಣ ಮಾಡಲಾದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಬೈಂದೂರು ಕ್ಷೇತ್ರದಲ್ಲಿ ೫೦ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಅಂಥಹ ಶಾಲೆಗಳ ಅಭಿವೃದ್ಧಿಗೊಳಿಸುವ ಕಾರ್ಯ ಮಂಜರಂಥಹ ಉದ್ಯಮಿಗಳ ಮೂಲಕ ಆಗಬೇಕಾಗಿದೆ. ಕೃಷ್ಣಮೂರ್ತಿ ಮಂಜರು ಹೋಟೆಲ್‌ನ್ನೇ ಶಾಲೆಯನ್ನಾಗಿ ಮಾಡಿಕೊಂಡವರು. ಅದಕ್ಕೆ ಅವರೇ ಮುಖ್ಯೋಪಾಧ್ಯಾಯರು. ಉದ್ಯಮ ಕ್ಷೇತ್ರದಲ್ಲೂ ಮಂಜರು ಮಾದರಿ ಎಂದು ಗುರುರಾಜ ಗಂಟಿಹೊಳೆ ಹೇಳಿದರು.

ಮೊಬೈಲ್ ಬಿಡಿ, ಪುಸ್ತಕ ಹಿಡಿ :
ಪಠ್ಯ ಪರಿಕರ ವಿತರಿಸಿ ಮಾತನಾಡಿದ ಹೈದರಬಾದ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಪ್ರತಿ ಊರಿನ ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿ ಆ ಊರಿನಲ್ಲಿ ಉಳ್ಳವರು ಸಂಘಟಿತವಾಗಿ ಶಾಲೆಯ ಅಭಿವೃದ್ದಿಗೆ ಮುಂದಾಗಬೇಕು. ಸರಕಾರಿ ಶಾಲೆಗಳು ಬಡವರ ಪಾಲಗೆ ಅಗತ್ಯ. ಸರಕಾರಿ ಶಾಲೆ ಮುಚ್ಚಲು ಬಿಡಬಾರದು ಎಂದು ಹೇಳಿದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರು ಹೆಚ್ಚು ಆಸಕ್ತಿ ಹಾಗೂ ಕಾಳಜಿ ವಹಿಸಬೇಕು. ಮೊಬೈಲ್ ಬಿಡಿ, ಪುಸ್ತಕ ಹಿಡಿ ಎನ್ನುವ ತತ್ವವನ್ನು ಅಳವಡಿಸಿಕೊಳ್ಳಬೇಕು. ಮೊಬೈಲ್ ಮಾದಕ ದ್ರವ್ಯ ಇದ್ದಂತೆ. ಮೊಬೈಲ್ ಗೀಳಿಗೆ ಮಕ್ಕಳು ಒಳಗಾಗದಂತೆ ನೋಡಿಕೊಳ್ಳಬೇಕು ಎಂದರು.

ಮಂಜರದ್ದು ನಿಸ್ವಾರ್ಥ ಕೈಂಕರ್ಯ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸವನ್ನು ಕೃಷ್ಣಮೂರ್ತಿ ಮಂಜರು ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಕೆಲಸ ಅತ್ಯಂತ ಶ್ರೇಷ್ಠವಾದುದು. ಅರ್ಪಣಾ ಮನೋಭಾವ, ನಿಸ್ವಾರ್ಥ ಕೈಂಕರ್ಯವನ್ನು ಮಂಜರು ಮಾಡುತ್ತಿದ್ದಾರೆ ಎಂದರು.

ವಾಚನಾಲಯವನ್ನು ಕೃಷ್ಣಮೂರ್ತಿ ಮಂಜರು ಉದ್ಘಾಟಿಸಿದರು. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ ಒಳಾಂಗಣ ಕ್ರೀಡಾಕೊಠಡಿಯನ್ನು ಉದ್ಘಾಟಿಸಿದರು. ಕಂಪ್ಯೂಟರ್ ಕೊಠಡಿಯನ್ನು ನಿರಾಮಯ ಸೊಸೈಟಿ ವಂಡ್ಸೆ ಇದರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ವಂಡ್ಸೆ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಯಟ್ ಪ್ರಾಂಶುಪಾಲರಾದ ಅಶೋಕ್ ಶ್ಯಾನುಭಾಗ್ ಮಾತನಾಡಿ, ಎಂಟು ವರ್ಷದ ಒಳಗೆ ಮೆದುಳಿನ ಶೇ 80 ಬೆಳವಣಿಗೆಯಾಗುತ್ತದೆ. ಈ ಅವಧಿಯಲ್ಲಿ ಪೋಷಕರು ಮಕ್ಕಳೊಂದಿಗೆ ದಿನದ ಅರ್ಧಗಂಟೆಯಾದರೂ ಮಾತನಾಡಬೇಕು. ಜಗತ್ತಿನ ವಿಶೇಷತೆಗಳನ್ನು ತೆರೆದಿಡಬೇಕು.ಮಕ್ಕಳ ಮಾತುಗಳನ್ನು ಆಲಿಸಬೇಕು, ಅವರ ಕುತೂಹಲವನ್ನು ತಾಳ್ಮೆಯಿಂದ ತಣಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯಕ್, ನಾಗರಾಜ ಮಂಜ ಮಾರಣಕಟ್ಟೆ, ಸರಕಾರಿ ಪ್ರೌಢಶಾಲೆ ಚಿತ್ತೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ಸದಾನಂದ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ದಿವಾಕರ ಆಚಾರ್ಯ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ರಘುರಾಮ ಶೆಟ್ಟಿ, ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಸಲಾಂ ಚಿತ್ತೂರು, ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಜಟ್ಟಪ್ಪ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪುರಸ್ಕೃತ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಕಟ್ಟಡ ನಿರ್ಮಾಣದ ಬಗ್ಗೆ, ಶಾಲೆಯ ಬೆಳೆವಣಿಗೆಯ ಬಗ್ಗೆ ವಿವರಿಸಿದರು.

ಡಯಟ್ ಉಪನ್ಯಾಸಕರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ, ನಾಗರಾಜ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಂ.ನಾಗರಾಜ ಶೆಟ್ಟಿ, ರವಿಚಂದ್ರ, ಸತೀಶ ಶೆಟ್ಟಿ, ಶೈಲಜಾ ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಡಾ.ರಾಜೇಶ ಬಾಯರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವಿಧರ ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕಿಯರಾದ ನಿರ್ಮಲ ಶೆಟ್ಟಿ, ದೀಪಾ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಂಸಿ ಉಪಾಧ್ಯಕ್ಷರು, ಸದಸ್ಯರು, ಅಧ್ಯಾಪಕ ವೃಂದದವರು ಅತಿಥಿಗಳನ್ನು ಗೌರವಿಸಿದರು.

ವಿಡಿಯೋ ವೀಕ್ಷಿಸಿ https://www.facebook.com/share/v/18tTrh12RY/

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!