spot_img
Monday, June 15, 2026
spot_img

ಕೋಟದಲ್ಲಿ ‘ನೆಲಗುಮ್ಮ-2026’ ಕಾಲಮಿತಿ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.), ಕೋಟ, ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರ, ಕೋಟತಟ್ಟು ಗ್ರಾಮ ಪಂಚಾಯತ್, ನೆನಪು ಮೂವೀಸ್ ಹಾಗೂ ಉಸಿರು ಕೋಟ ಇವುಗಳ ಜಂಟಿ ಆಶ್ರಯದಲ್ಲಿ 5ನೇ ಕಾಲಮಿತಿ ಸಾಹಿತ್ಯ ಸಮ್ಮೇಳನ ನೆಲಗುಮ್ಮ-2026′ (ಹನಿಯ ಚಿಲುಮೆ), ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ 2026ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಜೂನ್ ೧೪ರ ಭಾನುವಾರ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಸಮಾರಂಭದ ಉದ್ಘಾಟನೆ ವಿಶ್ರಾಂತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಸೋಮಶೇಖರ ಶೆಟ್ಟಿ ಅವರು ನೆರವೇರಿಸಿದರು. ಕಾರ್ಯಕ್ರಮದ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಶಂಕರ ಶೆಟ್ಟಿ, ಕೊತ್ತಾಡಿ ವಡ್ಡರ್ಸೆ ಅವರು ಸಾಹಿತ್ಯದ ಅಗತ್ಯತೆ ಮತ್ತು ಚುಟುಕು ಸಾಹಿತ್ಯದ ಮಹತ್ವದ ಕುರಿತು ಆಶಯ ನುಡಿಗಳನ್ನಾಡಿದರು . ಇದೇ ಸಂದರ್ಭದಲ್ಲಿ ಅಧ್ಯಕ್ಷರೊಂದಿಗೆ ಮಹೇಶ್ ಹವ್ಲಾಲ್ದಾರ್ ಹಾಗೂ ರೇವತಿ ಕೆಕ್ಕಟ್ಟೆ ಅವರು ನಡೆಸಿಕೊಟ್ಟ ‘ಚುಟುಕು ಸಂವಾದ’ ನೆರೆದಿದ್ದ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಕಾರಂತ ಅನೌಪಚಾರಿಕ ಶಿಕ್ಷಣ ಕೇಂದ್ರದ ನೂತನ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿದ ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದರ್ ಅವರು, ಯುವಜನರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಇಂತಹ ಶಿಕ್ಷಣ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು . ವೇದಿಕೆಯಲ್ಲಿ ಸುಶೀಲ ಸೋಮಶೇಖರ್, ಪ್ರಮೋದ ಹಂದೆ ಮತ್ತು ಶಿಕ್ಷಣ ಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.

ಆಕರ್ಷಕ ಚುಟುಕು ಕವಿಗೋಷ್ಠಿ:
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ನಡೆದ ಚುಟುಕು ಕವಿಗೋಷ್ಠಿಯಲ್ಲಿ ನಾಡಿನ ವಿವಿಧ ಭಾಗಗಳ ಹಲವಾರು ಕವಿಗಳು ಭಾಗವಹಿಸಿ ತಮ್ಮ ಚುಟುಕು ಕವನಗಳ ಮೂಲಕ ಸಾಹಿತ್ಯ ಸುಧೆ ಹರಿಸಿದರು. ಸುಮನ ಹೇರ್ಳೆ, ಚೇಂಪಿ ದಿನೇಶ್ ಮತ್ತು ಮಂಜುನಾಥ ಗುಂಡ್ಮಿ ಅವರು ಕವಿಗೋಷ್ಠಿಯ ಯಶಸ್ವಿ ನಿರ್ವಹಣೆ ಮಾಡಿದರು.

ಡಾ.ಕಾರಂತ ಪ್ರತಿಷ್ಠಾನದ ಆಡಳಿತ ನಿರ್ದೇಶಕರು ಹಾಗೂ ಪ್ರಮುಖರಾದ ಕೋಟತಟ್ಟು ಗ್ರಾ.ಪಂ. ಪಿ.ಡಿ.ಒ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಜನ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಯೋಜಕರುಗಳಾದ ಸುಬ್ರಾಯ ಆಚಾರ್ಯ ಮತ್ತು ಸತೀಶ್ ವಡ್ಡರ್ಸೆ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!