spot_img
Monday, June 15, 2026
spot_img

ಮೊಳಹಳ್ಳಿ: ಸಮತೋಲನ ರಸಗೊಬ್ಬರಗಳ ಬಳಕೆಯ ಮಾಹಿತಿ ಕಾರ್ಯಕ್ರಮ

ಕೃಷಿ ಇಲಾಖೆ ಕುಂದಾಪುರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ತೋಟಗಾರಿಕೆ ಇಲಾಖೆ ಕುಂದಾಪುರ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ( ನಿ.) ಬಿದ್ಕಲ್ ಕಟ್ಟೆ ಮತ್ತು ನೋಮಿ ನೆಟ್ವರ್ಕ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಹಯೋಗದಲ್ಲಿ 2026 – 2027ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತುಖೇತಿ ಬಚಾವೋ ಆಂದೋಲನದಡಿ ಸಮತೋಲನ ರಸಗೊಬ್ಬರಗಳ ಬಳಕೆಯ ಮಾಹಿತಿ ಕಾರ್ಯಕ್ರಮ ಹಾಗೂ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ ಕಾರ್ಯಕ್ರಮ ದಿನಾಂಕ 12-06-2026 ರಂದು ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮೊಳಹಳ್ಳಿ ಶಿವರಾವ್ ಸಭಾಭವನದಲ್ಲಿ ನೆರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ಎಂ ಮಹೇಶ ಹೆಗ್ಡೆ ಅಧ್ಯಕ್ಷರು ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ ( ನಿ.) ಬಿದ್ಕಲ್ ಕಟ್ಟೆ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಮತ್ತು ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷರು ಕುಂದಾಪುರ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಎಂ ದಿನೇಶ ಹೆಗ್ಡೆ ಜಯರತ್ನ ಚಾರಿಟೇಬಲ್ ಟ್ರಸ್ಟ್ (ರಿ), ಸಿ ಜಗನ್ನಾಥ ಶೆಟ್ಟಿ ಉಪಾಧ್ಯಕ್ಷರು ಮೊಳಹಳ್ಳಿ ವ್ಯ. ಸೇ. ಸ. ಸಂಘ(ನಿ) ಬಿದ್ಕಲ್ ಕಟ್ಟೆ, ಚಂದ್ರಶೇಖರ ನಾಯಕ್ ಉಪ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ, ಚಂದ್ರಶೇಖರ ಶೆಟ್ಟಿ ಮೊಳಹಳ್ಳಿ ಕಾರ್ಯಕಾರಿ ಸಮಿತಿ ಸದಸ್ಯರು ಕುಂದಾಪುರ ತಾಲ್ಲೂಕು ಕೃಷಿಕ ಸಮಾಜ, ರಾಘವೇಂದ್ರ ಆಚಾರ್ಯ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶ್ರೀಮತಿ ಪಾರ್ವತಿ ಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಳಹಳ್ಳಿ ವ್ಯ. ಸೇ. ಸ. ಸಂಘ( ನಿ ) ಬಿದ್ಕಲ್ ಕಟ್ಟೆ ಭಾಗವಹಿಸಿದ್ದರು. ಡಾ. ಧನಂಜಯ ಬಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರು ಬೀಜೋಪಚಾರ ಮತ್ತು ಸಮಗ್ರ ತೋಟಗಾರಿಕ ಬೆಳೆಗಳಿಗೆ ಪೋಷಕಾಂಶ ನಿರ್ವಹಣೆ ಬಗ್ಗೆ, ಡಾ. ರೇವಣ್ಣ ಕೀಟಬಾಧೆ ಬಗ್ಗೆ, ಖೇತಿ ಬಚಾವೋ ಅಭಿಯಾನದಡಿ ಸಮತೋಲನ ಗೊಬ್ಬರ ಬಳಕೆ ಬಗ್ಗೆ, ತೋಟಗಾರಿಕೆ ಮತ್ತುಕೃಷಿ  ಸಂಬಂಧಿಸಿದ ವಿಷಯ ಬಗ್ಗೆ, ಭಾರತೀಯ ವಿಕಾಸ ಟ್ರಸ್ಟ್ನಿಂದ ಕೃಷಿ ಆಧಾರಿತ ಯಂತ್ರಗಳಲ್ಲಿ ಸೌರಶಕ್ತಿ ಬಳಕೆ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸ್ವಾಗತವನ್ನು ಗಾಯತ್ರಿದೇವಿ ಕೃಷಿ ಅಧಿಕಾರಿಗಳು ಕುಂದಾಪುರ, ಕಾರ್ಯಕ್ರಮದ ನಿರೂಪಣೆ ಮತ್ತು ವಂದನಾರ್ಪಣೆಯನ್ನು ರಾಜೇಂದ್ರ ನಿವೃತ್ತ ಕೃಷಿ ಅಧಿಕಾರಿಗಳು ನಡೆಸಿಕೊಟ್ಟರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!