spot_img
Monday, June 15, 2026
spot_img

ಗಂಗೊಳ್ಳಿಯ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೂಲ ಮಂತ್ರ ಹವನ

ಕುಂದಾಪುರ : ಗಂಗೊಳ್ಳಿಯ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸದ ಅಂಗವಾಗಿ ಶ್ರೀದೇವರ ಪ್ರೀತ್ಯರ್ಥವಾಗಿ ಹಾಗೂ ಸಾನಿಧ್ಯ ಅಭಿವೃದ್ಧಿಗಾಗಿ ಶ್ರೀ ವಿಷ್ಣು ಸಹಸ್ರನಾಮ ಹವನ, ತತ್ವ ಮಂತ್ರ ಹವನ, ಮಾತೃಕಾ ಮಂತ್ರ ಹವನ, ಶ್ರೀ ವಿಠ್ಠಲ ಮೂಲ ಮಂತ್ರ ಹವನ, ಶ್ರೀ ವೆಂಕಟೇಶ ಮೂಲ ಮಂತ್ರ ಹವನ, ಹನುಮಂತ ಮೂಲ ಮಂತ್ರ ಹವನ, ಗರುಡ ಮೂಲ ಮಂತ್ರ ಹವನ ಬುಧವಾರ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಹವನದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿತು. ದೇವಳದ ಪ್ರಧಾನ ಅರ್ಚಕ ಜಿ.ಮೋಹನದಾಸ ಭಟ್, ಜಿ. ಪ್ರದೀಪ್ ಭಟ್ ಮತ್ತು ತಾಂತ್ರಿಕ ಜಿ.ರಾಘವೇಂದ್ರ ಆಚಾರ್ಯ ನೇತೃತ್ವದಲ್ಲಿ ಪುರೋಹಿತರಿಂದ ಹವನದ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತೊಕ್ತಕವಾಗಿ ಸಂಪನ್ನಗೊಂಡಿತು. ಮಧ್ಯಾಹ್ನ ಪೂರ್ಣಾಹುತಿ, ಶ್ರೀದೇವರಿಗೆ ಮಹಾಪೂಜೆ, ಬ್ರಾಹ್ಮಣ ಪೂಜೆ ಹಾಗೂ ಮಹಾಸಮಾರಾಧನೆ ನಡೆಯಿತು.
ದೇವಳದ ಆಡಳಿತ ಮೊಕ್ತೇಸರ ಜಿ.ನರಸಿಂಹ ನಾಯಕ್, ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಸೇವಾದಾರರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!