spot_img
Monday, June 15, 2026
spot_img

ಕ್ಲಿಷ್ಟ ಪ್ರಸಂಗಗಳ ಕಾರ್ಯಾಗಾರ ಭಾಗವತರಿಗೆ ಅತೀ ಅಗತ್ಯ: ಕೊಂಡದಕುಳಿ ರಾಮಚಂದ್ರ ಹೆಗಡೆ

ಯಕ್ಷಗಾನದಲ್ಲಿ ಬಹಳಷ್ಟು ಪ್ರಸಂಗಗಳು ಚಲಾವಣೆಯಲಿಲ್ಲ. ಮುಖ್ಯ ಕಾರಣ ಕ್ಲಿಷ್ಟ ನಡೆಗಳು, ಅದರಲ್ಲಿ ಕವಿ ಮುದ್ದಣನ “ಕುಮಾರ ವಿಜಯ” ವೂ ಒಂದು. ನನ್ನ ಯಕ್ಷಗಾನ 48 ವರ್ಷಗಳ ಸೇವೆಯಲ್ಲಿ ಈ ಪ್ರಸಂಗದ ಪ್ರದರ್ಶನದ ಬಗ್ಗೆ ಕೇಳಿಲ್ಲ, ಕಂಡಿಲ್ಲ. ಅಂತಹ ಪ್ರಸಂಗವನ್ನು ಆಯ್ದ ಭಾಗವತರುಗಳಿಗೆ ನೀಡಲ್ಪಡುವ ಶಿಕ್ಷಣ ನಿಜಕ್ಕೂ ಶ್ಲಾಘನೀಯ. ಅಗತ್ಯವೂ ಹೌದು. ಯಕ್ಷಗಾನ ಬೆಳವಣಿಗೆಗೆ ಇದು ಪೂರಕ. ಅಸಂಖ್ಯಾತ ಶ್ರೇಷ್ಟ ಭಾಗವತರುಗಳನ್ನು ಯಕ್ಷ ಪ್ರಪಂಚಕ್ಕೆ ನೀಡಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಈ ಕಾರ್ಯ ಮೆಚ್ಚತಕ್ಕದ್ದು. ಅದರಲ್ಲೂ ಯಕ್ಷಗಾನ ಪ್ರಪಂಚದಲ್ಲಿ ಅಪಾರ ಜ್ಞಾನ ಹೊಂದಿರುವ ಮೇಧಾವಿ ಸದಾನಂದ ಐತಾಳರ ಗುರುತನ ದೊರಕಿದ್ದು ಶಿಬಿರಾರ್ಥಿ ಭಾಗವತರುಗಳ ಭಾಗ್ಯ. ಈ ಕಾರ್ಯಾಗಾರದ ಯಶಸ್ವಿಗೆ ಹಾರೈಸುತ್ತೇನೆಂದು ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಶುಭ ಹಾರೈಸಿದರು.
ಅವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ಹಮ್ಮಿಕೊಂಡಿರುವ “ಕುಮಾರ ವಿಜಯ” ಪ್ರಸಂಗದ ಭಾಗವತಿಗೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಾಚಾರ್ಯ ಸದಾನಂದ ಐತಾಳರು ವೇದಿಕೆಯಲ್ಲಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಕಾರ್ಯಾಗಾರದ ಮುಖ್ಯ ಉದ್ದೇಶವನ್ನು ವಿವರಿಸಿ, ಸ್ವಾಗತಿಸಿದರು. ಬೈಕಾಡಿ ರಘುರಾಮರವರು ವಂದಿಸಿದರು. ಆಯ್ದ ಹತ್ತು ಭಾಗವತರುಗಳಿಗೆ ಪ್ರಸಂಗ ಶಿಕ್ಷಣವನ್ನು ನೀಡಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!