spot_img
Monday, August 3, 2026
spot_img

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯಲ್ಲಿ ಪಾಲಕರ ಓರಿಯೆಂಟೇಶನ್ ಪ್ರೋಗ್ರಾಂ

 

ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಪಾಲಕ/ಪೋಷಕರಿಗಾಗಿ ಜೂನ್ 8 ಮತ್ತು 9ರಂದು ಓರಿಯೆಂಟೇಶನ್ ಪ್ರೋಗ್ರಾಂ ಅನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶೈಕ್ಷಣಿಕ ಸಾಧನೆಗಳು, ಐಸಿಎಸ್‌ಇ ಪಠ್ಯಕ್ರಮದ ವೈಶಿಷ್ಟ್ಯಗಳು, ಮೌಲ್ಯಮಾಪನ ಮತ್ತು ಪರೀಕ್ಷಾ ಪದ್ಧತಿ, ವಿದ್ಯಾರ್ಥಿಗಳ ಅಭ್ಯಾಸ ಕ್ರಮ, ಶಿಸ್ತು ಮತ್ತು ವರ್ತನೆ, ಸಮವಸ್ತ್ರ, ಸಮತೋಲಿತ ಆಹಾರ ಪದ್ಧತಿ, ಶಾಲೆಯಲ್ಲಿ ಒದಗಿಸಲಾಗುವ ಇತರ ಸೌಲಭ್ಯಗಳು, ಶಾಲಾ ಡೈರಿಯ ಅಗತ್ಯತೆ ಮತ್ತು ಅನುಕೂಲತೆಯ ಕುರಿತು ಶಿಕ್ಷಕಿಯರಾದ ಶ್ರೀಮತಿ ರೂಪಾ ಜೆ, ಶ್ರೀಮತಿ ಸ್ವಾತಿ, ಶ್ರೀಮತಿ ದೀಪಾ ಹಾಗೂ ಶ್ರೀಮತಿ ರೇಷ್ಮಾ ಅವರು ಸವಿಸ್ತಾರವಾಗಿ ಮಾಹಿತಿಯನ್ನು ಪಾಲಕರೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶಾಲೆಯ ಪ್ರಾಂಶುಪಾಲರಾದ  ಶರಣಕುಮಾರರವರು ಮಾತನಾಡುತ್ತಾ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣ ಹಾಗೂ ಶಾಲೆಯ ಕಾರ್ಯವೈಖರಿಯ ಕುರಿತಾದ ಸಂದೇಹಗಳಿಗೆ ಸ್ಪಷ್ಟನೆ ಪಡೆದು ಸಂತೃಪ್ತಿ ವ್ಯಕ್ತಪಡಿಸಿದರು.
ಈ ವೇದಿಕೆಯಲ್ಲಿ ಶಾಲೆಯ ಆಡಳಿತಾಧಿಕಾರಿಯವರಾದ ಶ್ರೀಮತಿ ವೀಣಾ ರಶ್ಮಿ ಎಂ, ಶೈಕ್ಷಣಿಕ ಸಲಹೆಗಾರರಾದ ಶ್ರೀಮತಿ ಸುಜಾತಾ ಸದಾರಾಮ್, ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಹೇಮಾಮಾಲಿನಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ರೋಹಿಣಿ ಹಾಗೂ ಶ್ರೀಮತಿ ಜ್ಯೋತಿ ಜಿ ಅವರು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!