spot_img
Monday, June 15, 2026
spot_img

ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಖಂಡ ಭಜನಾ ಮಹೋತ್ಸವ ಯಶಸ್ವಿ

ಕುಂದಾಪುರ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಮಾಸಾವಧಿ ಅಖಂಡ ಭಜನಾ ಮಹೋತ್ಸವ ಯಶಸ್ವಿ 26 ದಿನಗಳನ್ನು ಪೂರೈಸಿದ್ದು, ಜೂ.16ರಂದು ದೀಪ ವಿಸರ್ಜನೆಯೊಂದಿಗೆ ಸಮಾಪನಗೊಳ್ಳಲಿದೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ದೀಪ ಪ್ರಜ್ವಲನೆಯೊಂದಿಗೆ ಮೇ 17ರಂದು ಚಾಲನೆ ನೀಡಿದ್ದರು. ಈ ಮಹೋತ್ಸವದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಿಂದ ವಿವಿಧ ಭಜನಾ ಮಂಡಳಿಗಳು ಹಾಗೂ ಕಲಾವಿದರು ಆಗಮಿಸಿ ಭಜನಾ ಸೇವೆ ಸಮರ್ಪಿಸಿದ್ದಾರೆ. ಅಷ್ಟೋತ್ತರದಿಂದ ಶ್ರೀದೇವರಿಗೆ 108 ಪ್ರದಕ್ಷಿಣಾ ಸೇವೆ, ಗಂಧಲೇಪನ ಸೇವೆ, ಸಾಮೂಹಿಕ ತುಳಸಿ ಅರ್ಚನೆ ಮತ್ತು ಸಾಮೂಹಿಕ ಕುಂಕುಮಾರ್ಚನೆ ಸೇವೆ, ಅಪೂಪ ದಾನ ದೀಪ ದಾನ ಸೇವೆ, ದ್ವಾದಶ ಸ್ತೋತ್ರ ಪೂಜೆ, ದೀಪಾರಾಧನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಖಂಡ ಭಜನಾ ಮಹೋತ್ಸವದ ಸಂದರ್ಭ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಜೂ.15ರಂದು ಸಂಜೆ 5 ಗಂಟೆಗೆ ನಗರ ಭಜನೆ, ರಾತ್ರಿ ವಿಶೇಷ ಪೂಜೆ, ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!