spot_img
Friday, July 31, 2026
spot_img

ಕೋಟ: ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಸಂಸದೀಯ ಮಾದರಿಯಲ್ಲಿ ಚುನಾವಣೆ

 

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ 2026 – 27 ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಇ ವಿ ಎಂ ಮೂಲಕ ಚುನಾವಣೆ ನಡೆಸಲಾಯಿತು.
ಚುನಾವಣೆ ಬಗ್ಗೆ ಘೋಷಣೆ, ನಾಮಪತ್ರ ಸಲ್ಲಿಸಲು ಅವಕಾಶ, ನಾಮಪತ್ರ ಪರಿಶೀಲನೆ ನಡೆಸಿ ಬಳಿಕ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಯಿತು. ಚುನಾವಣಾ ಅಭ್ಯರ್ಥಿ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ತೆರಳಿ ಮತಯಾಚನೆಗೆ ಅವಕಾಶ ಕಲ್ಪಿಸಲಾಯಿತು. ಕಾಲೇಜು ಮುಖಂಡನ ಸ್ಥಾನಕ್ಕೆ 10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು.
ಹೈಸ್ಕೂಲ್ ವಿಭಾಗದಿಂದ ಉಪ ಮುಖಂಡ ಸ್ಥಾನಕ್ಕೆ 2 ಸ್ಪರ್ಧಿಸಿದ್ದರು.
ಕಾಲೇಜು ಮುಖಂಡನ ಸ್ಥಾನಕ್ಕೆ ದ್ವಿತೀಯ ಪಿಯುಸಿ ಬಿ ವಿಭಾಗದ ನಿಶಾಂತ್ ಪಿ ಕಿಣಿ ಮತ್ತು ಉಪಮುಖಂಡನ ಸ್ಥಾನಕ್ಕೆ ಪ್ರೌಢಶಾಲಾ ವಿಭಾಗದ ಪ್ರಥಮ್ ಇವರು ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಉಪನ್ಯಾಸಕರು,ಅಧ್ಯಾಪಕ ಮತ್ತು ಸಿಬ್ಬಂದಿಗಳು ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವಡ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ವೇದಿಕೆಯಲ್ಲಿ ಹೈಸ್ಕೂಲ್ ವಿಭಾಗದ ಪ್ರೇಮಾನಂದ, ಚುನಾವಣಾ ಸಂಚಾಲಕರಾದ ಗಣೇಶ್ ಕುಮಾರ್ ಶೆಟ್ಟಿ, ಸುವೀರ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!