spot_img
Friday, May 29, 2026
spot_img

ಮೇ ೩೦: ಹೆಮ್ಮಾಡಿಯಲ್ಲಿ ಎಸ್.ಸಿ., ಎಸ್.ಟಿ ಯುವ ಉದ್ಯಮಶೀಲತಾ ಸಮಾವೇಶ ‘ಭೀಮೋದ್ಯಮ’

ಕುಂದಾಪುರ: ಪರಿಶಿಷ್ಟ ಸಮುದಾಯದ ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು, ಕಟ್ಟಾಳುಗಳು ಭವಿಷ್ಯದ ಉದ್ಯಮಿಗಳಾಗಿ ರೂಪುಗೊಳ್ಳಬೇಕೆಂಬ ಉದ್ದೇಶದಿಂದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ “ಭೀಮೋತ್ಸವ” ಕಾರ್ಯಕ್ರಮವನ್ನು ಮೇ 30ರಂದು ಶನಿವಾರ ಹೆಮ್ಮಾಡಿಯ ಜಯಶ್ರೀ ಸಭಾ ಭವನದಲ್ಲಿ‌ಆಯೋಜಿಸಲಾಗಿದೆ.
ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ; ಯುವಕರ ಬದುಕಿಗೆ ಹೊಸ ದಿಕ್ಕು ತೋರಿಸುವ, ಆತ್ಮವಿಶ್ವಾಸ ತುಂಬುವ ಹಾಗೂ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲ ನೀಡುವ ವೇದಿಕೆಯಾಗಿದೆ.

ಈ ಕಾರ್ಯಕ್ರಮದಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಕರಿಗೆ ಸ್ವಯಂ ಉದ್ಯೋಗದ ದಾರಿಯನ್ನು ಪರಿಚಯಿಸುವುದು, ಸಣ್ಣ ಮಟ್ಟಿನ ಉದ್ಯಮ ಆರಂಭಿಸಲು ಅಗತ್ಯವಾದ ಮೂಲಭೂತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ನೀಡುವುದು, ಸರ್ಕಾರದ ವಿವಿಧ ಯೋಜನೆಗಳು, ಸಹಾಯಧನ ಹಾಗೂ ಸಾಲ ಸೌಲಭ್ಯಗಳ ಕುರಿತು ಸ್ಪಷ್ಟ ಮಾರ್ಗದರ್ಶನ ಒದಗಿಸುವುದು, ಬ್ಯಾಂಕ್ ಸಾಲ ಪಡೆಯುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಪ್ರಕ್ರಿಯೆಗಳ ಅರಿವು ಮೂಡಿಸುವುದು, ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯಮಶೀಲತೆ ಬಗ್ಗೆ ಆತ್ಮವಿಶ್ವಾಸ ಬೆಳೆಸುವುದು “ಉದ್ಯೋಗ ಕೇಳುವವರಲ್ಲ, ಉದ್ಯೋಗ ನೀಡುವವರಾಗೋಣ” ಎಂಬ ಮನೋಭಾವ ಬೆಳೆಸುವುದು, ಯಶಸ್ವಿ ಉದ್ಯಮಿಗಳ ಅನುಭವ ಹಂಚಿಕೆಯಿಂದ ಯುವಕರಿಗೆ ಪ್ರೇರಣೆ ನೀಡುವುದು, ವಿದ್ಯಾರ್ಥಿಗಳಿಗೆ ಭವಿಷ್ಯದ ವೃತ್ತಿ ಆಯ್ಕೆ ಕುರಿತು ಹೊಸ ಅವಕಾಶಗಳ ಪರಿಚಯ ಮಾಡಿಸುವುದು, ಮಹಿಳೆಯರು ಹಾಗೂ ಯುವತಿಯರಿಗೆ ಸ್ವಾವಲಂಬಿ ಬದುಕಿನ ಅವಕಾಶಗಳ ಬಗ್ಗೆ ಮಾಹಿತಿ ನೀಡುವುದು, ಸ್ಟಾರ್ಟ್‌ಅಪ್, ಸಣ್ಣ ಕೈಗಾರಿಕೆ ಹಾಗೂ ಸೇವಾ ಆಧಾರಿತ ಉದ್ಯಮಗಳ ಕುರಿತು ಮಾರ್ಗದರ್ಶನ ನೀಡುವುದು, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಆದಾಯ ಗಳಿಸುವ ಮಾರ್ಗಗಳನ್ನು ಪರಿಚಯಿಸುವುದು, ಯುವಕರಲ್ಲಿ ನಾಯಕತ್ವ, ನಿರ್ಧಾರ ಸಾಮರ್ಥ್ಯ ಹಾಗೂ ಆರ್ಥಿಕ ಅರಿವು ವೃದ್ಧಿಸುವುದು, ಸಮಾಜದ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗುವ ವಾತಾವರಣ ನಿರ್ಮಿಸುವುದು, ಪರಿಶಿಷ್ಟ ಸಮುದಾಯದ ಯುವಕರಿಗೆ ವಿಶೇಷ ಅವಕಾಶಗಳು ಹಾಗೂ ಪ್ರೇರಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

“ಭೀಮೋತ್ಸವ” ಕಾರ್ಯಕ್ರಮವು ಯುವಕರ ಕನಸುಗಳಿಗೆ ಜೀವ ತುಂಬಿ, ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಡುವ ಹಾಗೂ ಸಮಾಜದ ಅಭಿವೃದ್ಧಿಗೆ ಯುವಶಕ್ತಿಯನ್ನು ರೂಪಿಸಿ, ಜೋಡಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!