spot_img
Wednesday, July 15, 2026
spot_img

ಪತ್ರಕರ್ತ ನಾಗೇಶ ಗಾಣಿಗ ನೇರಳಕಟ್ಟೆ ನಿಧನ

ಕುಂದಾಪುರ: ವಿಜಯಕರ್ನಾಟಕ ದಿನಪತ್ರಿಕೆಯ ಸಿದ್ದಾಪುರ ಭಾಗದ ವರದಿಗಾರ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ನಾಗೇಶ ಗಾಣಿಗ ನೇರಳಕಟ್ಟೆ (42ವ) ಹೃದಯಾಘಾತದಿಂದ ಜು.15ರಂದು ನಿಧನರಾದರು.

ಹಲವಾರು ವರ್ಷಗಳಿಂದ ಅವರು ಗ್ರಾಮೀಣ ಪ್ರದೇಶದ ವರದಿಗಾರರಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿಷ್ಠೆ, ಶ್ರದ್ದೆಯಿಂದ ಸೇವೆ ಸಲ್ಲಿಸುತ್ತಿದ್ದರು. ಗ್ರಾಮೀಣ ವರದಿ, ವಿಶೇಷ ವರದಿಗಳ ಮೂಲಕ ಸಿದ್ಧಾಪುರ ಭಾಗದಲ್ಲಿ ಜನಪ್ರೀತಿ ಸಂಪಾದಿಸಿದರು. ಸೌಮ್ಯ ಸ್ವಭಾವದವರಾದ ಅವರು ಪತ್ರಿಕೋದ್ಯಮದ ಜೊತೆಯಲ್ಲಿ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದರು.

ಮೃತರು ತಾಯಿ, ಸೋದರ, ಸೋದರಿಯರನ್ನು ಅಗಲಿದ್ದಾರೆ. ಜು.16 ಗುರುವಾರ ಅಂತ್ಯಕ್ರಿಯೆ ನಡೆಯಲಿದೆ.

ಪತ್ರಕರ್ತರ ಸಂಘ ತೀವ್ರ ಸಂತಾಪ:
ನಾಗೇಶ ಗಾಣಿಗರ ನಿಧನಕ್ಕೆ ಕುಂದಾಪುರ ತಾಲೂಕು ಪತ್ರಕರ್ತರ ಸಂಘವು ತೀವ್ರ ಸಂತಾಪ ಸೂಚಿಸಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಅಗಲಿದ ನಾಗೇಶ ಗಾಣಿಗರಿಗೆ ಸಂತಾಪ ವ್ಯಕ್ತ ಪಡಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!