spot_img
Monday, May 25, 2026
spot_img

ಶಂಕರನಾರಾಯಣ : 1990 ರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕುಟುಂಬ ಮಿಲನ ಕಾರ್ಯಕ್ರಮ

 

ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ 1990 ರ ಎಸ್. ಎಸ್. ಎಲ್. ಸಿ.ಸಮಾನ ಮನಸ್ಕ ವಿದ್ಯಾರ್ಥಿಗಳ SSLC-1990 LM ಫ್ಯಾಮಿಲಿ ವಾಟ್ಸಪ್ಪ್ ಬಳಗದ 6 ನೇ ಕುಟುಂಬ ಮಿಲನ ಕಾರ್ಯಕ್ರಮವು ಬಳಗದ ಸದಸ್ಯರಾದ ಸಿದ್ದಾಪುರ ಮೇಲ್ಕಡ್ರಿ ವಿದ್ವಾನ್ ಗಣೇಶ್ ಅಡಿಗರ ಮನೆಯಲ್ಲಿ ನೆರವೇರಿತು. ಜಯಂತಿ ರಾಜೀವ್ ಐರೋಡಿ ಅಧ್ಯಕ್ಷತೆ ವಹಿಸಿದ್ದರು. ಆತಿಥೇಯರಾದ ವಿದ್ವಾನ್ ಗಣೇಶ್ ಅಡಿಗರು ಮಾತನಾಡಿ ಇದು ಕೇವಲ ಹಳೇವಿದ್ಯಾರ್ಥಿಗಳ ವಾಟ್ಸಪ್ಪ್ ಬಳಗದ ಸಹಮಿಲನ ಕಾರ್ಯಕ್ರಮವು ಒಂದು ಕುಟುಂಬ ಸದಸ್ಯರ ಮಿಲನ ಕಾರ್ಯಕ್ರಮದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಒಂದೇ ಕುಟುಂಬದಲ್ಲಿ ಕೂಡ ಈ ರೀತಿಯ ಒಗ್ಗಟ್ಟು ಕಾಣಲು ಸಾಧ್ಯವಿಲ್ಲ. ಆದರೆ ನಮ್ಮ ಈ ಎಸ್.ಎಸ್.ಎಲ್.ಸಿ – 1990 ರ ಕುಟುಂಬದ ಸದಸ್ಯರಲ್ಲಿ ಇರುವ ಅನೋನ್ಯತೆ, ಭಾಂದವ್ಯ, ಪರಸ್ಪರ ಕಾಳಜಿ ಮತ್ತು ವಿಶ್ವಾಸ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಇದು ನಿರಂತರವಾಗಿರಲಿ. ಪ್ರತಿ ವರ್ಷವೂ ಇದೆ ರೀತಿಯ ಕುಟುಂಬ ಮಿಲನ ಕಾರ್ಯಕ್ರಮ ನಮ್ಮ ಮನೆಯಲ್ಲಿ ನಾನು ನಡೆಸಲು ಸಿದ್ಧ ಎಂದರು. ಗುಂಪಿನ ನಿರ್ವಾಹಕರಾದ ನ್ಯಾಯವಾದಿ ಯೋಗೇಂದ್ರ ನಾಯ್ಕ್ ಮಾತನಾಡಿ ನಮ್ಮ ಈ ವಾಟ್ಸಪ್ಪ್ ಬಳಗ ಒಂದು ಕುಟುಂಬದಂತೆ ಕೆಲಸ ಮಾಡುತ್ತಿದೆ. ಪ್ರತಿ ಕುಟುಂಬ ಸದಸ್ಯರ ಮನೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಲ್ಲೂ ಕನಿಷ್ಠ ಹತ್ತಾರು ಜನ ಸದಸ್ಯರು ಭಾಗವಹಿಸುವುದರೊಂದಿಗೆ ನಾವುಗಳು ಆಯಾ ಕುಟುಂಬದ ಒಂದು ಭಾಗವಾಗಿದ್ದೇವೆ, ಈ ನಮ್ಮ ಬಳಗ ನಮ್ಮ ಮಕ್ಕಳ ಕಾಲಕ್ಕೂ ಇದೇ ರೀತಿಯ ಒಗ್ಗಟ್ಟಿನೊಂದಿಗೆ ಮುಂದುವರೆದುಕೊಂಡು ಹೋಗುವ ಭರವಸೆ ಇದೆ ಎಂದರು. ಈ ಸಂಧರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ವಿದ್ವಾನ್ ಗಣೇಶ್ ಅಡಿಗ ದಂಪತಿಗಳನ್ನು ಗೌರವಿಸಲಾಯಿತು.
ಸುಮಾರು 50 ಕ್ಕೂ ಅಧಿಕ ಕುಟುಂಬ ಸದಸ್ಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಮನೋರಂಜನಾ ಪಂದ್ಯಗಳನ್ನು ನಡೆಸಿ, ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. 2025-26 ನೇ ಸಾಲಿನ ದ್ವಿತೀಯ ಪಿ. ಯು. ಸಿ ವಾಣಿಜ್ಯ ವಿಭಾಗದಲ್ಲಿ 92% ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾದ ಹೊಸಂಗಡಿ ಕಾಲೇಜಿನ ಕು. ಸುವಿಧಾ ಗಣಪತಿ ಶೆಟ್ಟಿ ಯವರಿಗೆ ನಗದು ಪುರಸ್ಕಾರದೊಂದಿಗೆ ಹಾಗೂ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿವಿಧ ಶಾಲೆಗಳಲ್ಲಿ ಕಲಿತು ಉತ್ತಿರ್ಣರಾದ ಬಳಗದ ಸದಸ್ಯರ ಮಕ್ಕಳಾದ ಕು. ಪ್ರಣಮ್ಯ ಗುರುಪ್ರಸಾದ್ ಉಪ್ಪೂರ್, ಶ್ರೇಯಾಂಕಾ ಶಂಕರ್ ಚಿಟ್ಟೆ, ಅಂಶು ಯೋಗೇಂದ್ರ ನಾಯ್ಕ್, ಸ್ಕಂದ ಸುಭಾಸ್ ರಾವ್ ಇವರನ್ನು ಅಭಿನಂದಿಸಿ,ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು.
ವಾಟ್ಸಪ್ಪ್ ಬಳಗದ ನಿರ್ವಾಹಕತ್ರಯರಾದ ಯೋಗೇಂದ್ರ ನಾಯ್ಕ್, ನಾಗರಾಜ್ ತಲ್ಲಂಜೆ ಮತ್ತು ಜಯಂತಿ ಐರೋಡಿಯವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಪೊಲೀಸ್ ಸಹಾಯಕ ಉಪನಿರೀಕ್ಷಕರಾದ ಶಂಕರ್ ಚಿಟ್ಟೆ, ಬೆಂಗಳೂರು ಉದ್ಯಮಿ ಗುರುಪ್ರಸಾದ್ ಉಪ್ಪೂರ್, ಮುಂಬೈ ಉದ್ಯಮಿ ಉದಯ ಶೆಟ್ಟಿ ಕೊಕ್ಕೋಡು, ವಿಜಯಲಕ್ಷ್ಮಿ ಸೋಮಯಾಜಿ ಬೆಂಗಳೂರು, ಆರೋಗ್ಯ ಇಲಾಖೆಯ ಸುಭಾಸ್ ರಾವ್, ಶಶಿಕಲಾ ಶಂಕರ್, ಗಣಪತಿ ಶೆಟ್ಟಿ ಜಾಂಬ್ಳಿ, ಸೆಲ್ಕೋ ಸೋಲಾರ್ ನ ಸುರೇಶ್ ನಾಯ್ಕ್, ಬೆಂಗಳೂರು ನಿವಾಸಿ ಭಾಸ್ಕರ್ ನಾಯ್ಕ್, ವಾಣಿ ಸುಭಾಸ್ ರಾವ್ ಬಳ್ಕೂರು, ಚಂದ್ರಶೇಖರ ಹೆಗ್ಡೆ ಕಲ್ಗದ್ದೆ, ಉದಯ ಕುಪ್ಪಾರು ಮತ್ತಿತರರು ಉಪಸ್ಥಿತರಿದ್ದರು. ತಸ್ಮಯಿ. ಎನ್ . ತಲ್ಲಂಜೆ ಮತ್ತು ಮತ್ತು ತನ್ಮಯಿ. ಎನ್.ತಲ್ಲಂಜೆ ಪ್ರಾರ್ಥಿಸಿದರು, ನಾಗರಾಜ ತಲ್ಲಂಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸುಭಾಷ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು, ಉದಯ ಕುಪ್ಪಾರು ಸ್ವಾಗತಿಸಿ, ಚಂದ್ರಶೇಖರ ಹೆಗ್ಡೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!