spot_img
Monday, May 25, 2026
spot_img

ಚಾರಿತ್ರಿಕ ಪ್ರಸಿದ್ದಿಯ ಕುಂದಾಪುರ ರೋಜರಿ ಚರ್ಚಿಗೆ ಧರ್ಮಾಧ್ಯಕ್ಷರಾದ ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜರವರ ಅಧಿಕೃತ ಭೇಟಿ

ಕುಂದಾಪುರ, ಜೂ.11: ‘ನಾವೆಲ್ಲರೂ ಪವಿತ್ರ ಸಭೆಯ ಜವಾಬ್ದಾರಿಯುತ ಕ್ರೈಸ್ತರಾಗಿದ್ದೇವೆ. ನಾವೆಲ್ಲರೂ ಪವಿತ್ರ ಸಭೆ ನಮ್ಮದು ಎಂದು ಅರಿತುಕೊಳ್ಳಬೇಕು, ಈ ಮುಖಾಂತರ ದೇವರ ಶುಭವಾರ್ತೆಯನ್ನು, ನಾವೆಲ್ಲ ಒಬ್ಬರೊನಬ್ಬೊರಿಗೆ ಹಂಚಬೇಕು, ದೇವರ ಪ್ರೀತಿಯನ್ನು ಹಂಚಬೇಕು. ಇಂದು ನಾವು ಪವಿತ್ರಾತ್ಮನ ಸಂಭ್ರಮದ ಹಬ್ಬವನ್ನು ಆಚರಿಸುತ್ತೇವೆ, ಈ ಪವಿತ್ರತ್ಮಾನು ನಮ್ಮಿಂದ ಆಸಾಧ್ಯವಾದ ಅದ್ಬುತಗಳನ್ನು ಮಾಡುತದೆ, ಯೇಸು ಕ್ರಿಸ್ತರು ತಮ್ಮನ್ನೆ ಬಲಿದಾನ ಅರ್ಪಿಸಿದ ಮೇಲೆ, ಪುನರ್ಜೀವಂತವಾಗಿ, ನಂತರ ಪವಿತ್ರಾತ್ಮರನ್ನು ಯೇಸು ಕ್ರೀಸ್ತರು ತಮ್ಮ ಶಿಸ್ಯರ ಮೇಲೆ ಕಳುಹಿಸುತ್ತಾರೆ, ಅವಾಗ ಅವರ ಶಿಸ್ಯರು ಪವಿತ್ರತ್ಮಾ ಭರಿತರಾಗಿ ದೇವರ ಶುಭವಾರ್ತೆಯನ್ನು ಸಾರುತ್ತಾರೆ, ಅವರಿಗೆ ಅಡ್ಡಿಪಡಿಸಿದಾಗ, ನಾವು ಕಣ್ಣಾರೆ ಕಂಡಿದ್ದನ್ನು, ಕಿವಿಯಾರೆ ಕೇಳಿದ್ದು, ನಾವು ಸುಮ್ಮನೆ ಇರುವುದಿಲ್ಲ, ಸತ್ಯವನ್ನು ನುಡಿಯುತ್ತೇವೆ ಎಂದು ಸಾರಿದರು. ನಾವು ಕೂಡ ಇದನ್ನು ಪಾಲಿಸಬೇಕು. ಇದೇ ಸಂದರ್ಭದಲ್ಲಿ ಅವರು 38 ಯುವಕ – ಯುವತಿಯರಿಗೆ ಧೃಡಿಕರಣ ಸಂಸ್ಕಾರವನ್ನು ನೀಡಿದರು. ಈ ಧೃಡೀಕರಣ ಸಂಸ್ಕಾರ ಚೆನ್ನಾಗಿ ತಿಳುವಳಿಕೆ ಬಂದ ಮೇಲೆ ಕೊಡಲಾಗುತದೆ. “ಈ ಧೃಡಿಕರಣ ಸಂಸ್ಕಾರ ಪಡೆದ ಯುವಕ ಯುವತಿಯರು ಪವಿತ್ರಾತ್ಮರ ಶಕ್ತಿಯಿಂದ ಉತ್ತಮ ಜೀವನ ಸಾಗಿಸಲಿ, ಯೇಸು ಕ್ರಿಸ್ತರ ನೀಜ ಅನುಯಾಯಿಗಳಾಗಿ ಆದರ್ಶ ಜೀವನ ಸಾಗಲಿ, ಅವರಿಗೋಸ್ಕರ ನಾವೆಲ್ಲಾ ಪ್ರಾರ್ಥಿಸೋಣ’ ಎಂದು ಸಂದೇಶ ನೀಡಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌವ್ಲ್ ರೇಗೊ, ಪ್ರಾಂಶುಪಾಲರಾದ ವಂ|ರೊಲ್ವಿನ್ ಫೆರ್ನಾಂಡಿಸ್, ಬಿಷಪರ ಕಾರ್ಯದರ್ಶಿ ವಂ| ರಿತೇಶ್ ಕಾಸ್ಟೆಲೀನೊ ಬಲಿದಾನದಲ್ಲಿ ಭಾಗವಹಿಸಿದರು.
ಚರ್ಚ್ ವತಿಯಿಂದ, ಬರ್ನಾಡ್ ಡಿಕೋಸ್ತಾ ಸಂಪಾದಕತ್ವದಲ್ಲಿ ಪ್ರಕಟವಾಗುವ ರೋಜಾರಿಯುಮ್ ಸಂಕಲನವನ್ನು ಬಿಷಪ್ ಲೆಸ್ಲಿ ಬಿಡುಗಡೆ ಮಾಡಿದರು. ಈ ಸಂಕನಲನವು, ಚರ್ಚಿನ ಕಾರ್ಯಕ್ರಮಗಳೊಗಂಡ, ಬಿಷಪ್ ಬಗ್ಗೆ ಲೇಖನ, ಶುಭಾಷಯಗಳೊಗಂಡ ಸಂಕಲನವಾಗಿದೆ. ತದ ನಂತರ ಚರ್ಚ್ ಪರವಾಗಿ ಬಿಷಪರನ್ನು ಸನ್ಮಾನಿಸಲಾಯಿತು.
ಪಾಲನ ಮಂಡಳಿ ಉಪಾಧ್ಯಕ್ಷೆ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ಡೋಮಿನಿಕ್ ಬ್ರಗಾಂಜಾ, ಆಯೋಗಗಳ ಸಂಯೋಜಕಿ ಶೋಭ ವಾಜ್, ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು.
ಬಿಶಪರ ಈ ಭೇಟಿ 2 ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತಿಸಲಾಯಿತು. ಪಾಲನ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು. ನಂತರ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು.
ಭಾನುವಾರ ಬೆಳಗ್ಗೆಯಿಂದ, ಪಾಲನ ಮಂಡಳಿಯವರ ಜೊತೆ ಚರ್ಚೆ, ಸಮಾಲೋಚನ ನಡೆಸಿದರು. ನಂತರ ವಿವಿಧ ಸಂಘಟನೆಗಳ ಜೊತೆ ಮಾತುಕತೆ, ಸಮಾಲೋಚನ ನಡೆಸಿದರು. ಸಂಜೆ ಕಿರು ಸಮುದಾಯದ ಕೂಟದಲ್ಲಿ ಭಾಗಿಯಾದರು. ಚರ್ಚ್ ವತಿಯಿಂದ ಆನಾರೋಗ್ಯಸ್ಥರ 2 ಮನೆಗಳಿಗೆ ಭೇಟಿ ಮಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!