spot_img
Saturday, April 18, 2026
spot_img

ಮಣಿಪಾಲ ಜ್ಞಾನಸುಧಾ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಣಿಪಾಲ: ಕಠಿಣ ಪರಿಶ್ರಮಕ್ಕೆ, ಏಕಾಗ್ರತೆಗೆ, ಸಮರ್ಪಣಾ ಮನೋಭಾವನೆಗೆ, ಹೆತ್ತವರನ್ನು, ಹುಟ್ಟೂರನ್ನು ಗೌರವಿಸುವ ವಿವಿಧ ಉತ್ತಮ ಗುಣಗಳಿಗೆ ಡಾ. ಸುಧಾಕರ್ ಶೆಟ್ಟಿಅವರೇ ನಮಗೆ ರೋಲ್ ಮಾಡೆಲ್ ಎಂದು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ ಅನಿಲ್ ಕುಮಾರ್‍ಜೈನ್ ಹೇಳಿದರು.

ಇವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಮೊದಲ ಬ್ಯಾಚಿನ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.ವ್ಯಕ್ತಿಯ ಬದುಕಿನಲ್ಲಿತಂದೆತಾಯಿಯ ಆಶೀರ್ವಾದದ ಶಕ್ತಿ ಎಲ್ಲಾ ಶಕ್ತಿಗಳಿಗಿಂತ ಅದ್ಭುತ ಶಕ್ತಿ. ಹೆತ್ತವರ ಪಾದ ಮುಟ್ಟಿ ನಮಸ್ಕರಿಸುವ ಅಭ್ಯಾಸ ಬೆಳೆಸಿಕೊಂಡರೆ ಅದೇ ನಮ್ಮ ಸಾಧನೆಯ ಸ್ಪೂರ್ತಿಯಾಗಿ ಬದಲಾಗುತ್ತದೆ ಎಂದು ಅವರು ಹೇಳಿದರು. ಜ್ಞಾನಸುಧಾಶಿಕ್ಷಣ ಸಂಸ್ಥೆಗಳಅಧ್ಯಕ್ಷಡಾ. ಸುಧಾಕರ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ದ್ವಿತೀಯ ಪಿ.ಯು.ಸಿ.ಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 98ಕ್ಕಿಂತ ಅಧಿಕ ಪಡೆದ ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿಗಳಾದ ಅಶ್ವಿನ್ ವಿ ಶೆಟ್ಟಿ (596), ಪಿ ಅಖಿಲ್ ಶರ್ಮ (594), ಶ್ರೀರಾಮ್ ಕೆ ಹೆಬ್ಬಾರ್ (594), ಪರ್ಣಿಕಾ (593), ರಕ್ಷಿತ್ ಶೆಟ್ಟಿ (592) ಈಶ್ವರಿ ಬಿ ಶೇಟ್ (591), ಸಾಜನ್ ಆರ್ (591), ಪ್ರಥ್ವೀಧರ ಎಲ್ ಕಾರಂತ್ (590), ತ್ರಿಶಾ ಶೆಟ್ಟಿ ಬಿ (589), ಚೈತನ್ಯ ಎಸ್ ನಾಯ್ಕ (588), ದೃಶ್ಯ ಜೆ ಶೆಟ್ಟಿ (588), ಕಾರುಣ್ಯ ಸೋಮಯಾಜಿ(588), ಶ್ರೀರಕ್ಷಾ ಹೆಗ್ಡೆ(588)ಇವರನ್ನು ಸನ್ಮಾನಿಸಲಾಯಿತು.

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಗಣೇಶ ಶೆಟ್ಟಿ,ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್‍ಯು, ಉಪ ಪ್ರಾಂಶುಪಾಲರುಗಳಾದ ಹೇಮಂತ್ ಹಾಗೂ ರವಿ ಜಿ,ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!