spot_img
Monday, April 13, 2026
spot_img

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.,: ರೂ.1067 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರ

ಬ್ರಹ್ಮಾವರ : ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘವು 2025-2026ನೇ ಸಾಲಿನಲ್ಲಿ 1067.00 ಕೋಟಿ ರೂ ವ್ಯವಹಾರ ನಡೆಸಿದೆ. ಸಂಘವು 31-03-2026ಕ್ಕೆ 6.16 ಕೋಟಿ ರೂ.ಗಳ ಪಾಲು ಬಂಡವಾಳ ಹೊಂದಿದೆ. ರೂ. 244.76 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ರೂ. 182.68 ಕೋಟಿಗೂ ಮಿಕ್ಕಿ ಸಾಲ ನೀಡಿದೆ. ಸುಮಾರು ಶೇ. 99.30ರಷ್ಟು ಸಾಲ ಮರುಪಾವತಿಯಾಗಿದೆ. 31-03-26 ಕ್ಕೆ ಸಂಘವು ರೂ. 30.99 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ರೂ. 105.83 ಕೋಟಿ ವಿವಿಧ ಬ್ಯಾಂಕ್‍ಗಳಲ್ಲಿ ವಿನಿಯೋಗಿಸಿದೆ. ಸುಮಾರು ರೂ. 5.00 ಕೋಟಿಯಷ್ಟು ಸ್ಥಿರ ಚರ ಆಸ್ತಿಯನ್ನು ಸಂಘವು ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 4.50 ಕೋಟಿಗೂ ಮಿಕ್ಕಿ ಲಾಭ ಗಳಿಸಿದೆ.

ಸಂಘವು ಬ್ಯಾಂಕಿಂಗ್ ವ್ಯವಹಾರವನ್ನಲ್ಲದೇ ಪಡಿತರ ಹಾಗೂ ರಸಗೊಬ್ಬರ ಮಾರಾಟ ನಡೆಸುತ್ತಿದ್ದು, ರೈತರಿಗೆ ಹಾಗೂ ಬಡ ಕುಟುಂಬಗಳಿಗೆ ನೆರವಾಗುತ್ತಿದೆ. ಸಂಘವು ಕೃಷಿ ಸಾಲಕ್ಕೆ ಆದ್ಯತೆ ನೀಡುತ್ತಿದ್ದು ವರದಿ ಸಾಲಿನಲ್ಲಿ ಬಹಳಷ್ಟು ಮಂದಿ ರೈತ ಸದಸ್ಯರು ಬಡ್ಡಿರಹಿತ ಸಾಲ, ಸರ್ಕಾರದ ಶೇ. 3 ಬಡ್ಡಿ ದರದ ಸಾಲದ ಪ್ರಯೋಜನ ಪಡೆದಿರುತ್ತಾರೆ. ಅತೀ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ ಹಾಗೂ ಇತರ ಸಾಲಗಳನ್ನು ನೀಡಲಾಗುತ್ತಿದೆ. ಸಂಘವು ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತೀ ವರ್ಷ ವಿದ್ಯಾರ್ಥಿ ವೇತನವನ್ನು, ಹಲವಾರು ಸದಸ್ಯರಿಗೆ ವೈದ್ಯಕೀಯ ನೆರವು ಹಾಗೂ ಸರ್ಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಲ್ಲಿ ಸುಮಾರು 1000 ಕ್ಕೂ ಮಿಕ್ಕಿ ಸಂಘದ ಸದಸ್ಯರ ಕುಟುಂಬವನ್ನು ನೊಂದಾಯಿಸಲಾಗಿದೆ.

ಸಂಘವು ಸುಸಜ್ಜಿತವಾದ ಎರಡು ಅಂತಸ್ತಿನ ಸಭಾಭವನವನ್ನು ಹೊಂದಿದೆ. ಸಂಘದ ಎಲ್ಲಾ 9 ಶಾಖೆಗಳೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣ ಗಣಕೀಕರಣಗೊಂಡಿದೆ. ಸಂಘದ 8 ಶಾಖೆಯು ಹವಾನಿಯಂತ್ರಿತ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ನೀಲಾವರ ಶಾಖೆಯು ಪಡಿತರ ವ್ಯವಸ್ಥೆಯನ್ನು ಮಾತ್ರವೇ ಹೊಂದಿದ್ದು ಇದೇ ಎಪ್ರಿಲ್ 2026ರಿಂದ ಸದಸ್ಯರ ಅನುಕೂಲಕ್ಕಾಗಿ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಲಾಗಿದೆ. ಸಂಘದ ಸದಸ್ಯರಿಗೆ ಬ್ಯಾಂಕಿಂಗ್, ಸೇಫ್ ಲಾಕರ್, ಪಡಿತರ, ಹಾಗೂ ಸುಸಜ್ಜಿತವಾದ ಮಿನಿ ಸಭಾಂಗಣದ ವ್ಯವಸ್ಥೆಯೊಂದಿಗೆ ಸೇವೆಗೆ ಲಭ್ಯವಾಗಿದೆ. ಸಂಘವು ಸದಸ್ಯರಿಗೆ ಶೇ.19 ಡಿವಿಡೆಂಡನ್ನು ನೀಡಲಾಗಿದ್ದು ವರ್ಷದಿಂದ ವರ್ಷಕ್ಕೆ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದು, ಎ ಶ್ರೇಣಿಯ ಸಹಕಾರಿ ಸಂಘವಾಗಿ ಸುಭದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಬಿರ್ತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!