spot_img
Wednesday, April 15, 2026
spot_img

ಏಪ್ರಿಲ್ 18ಕ್ಕೆ ಉಡುಪಿಯಲ್ಲಿ ಭರತನಾಟ್ಯ ಪ್ರತಿಭೆಗಳಾದ ಪೂರ್ವಿಕಾ ಮತ್ತು ಗಾರ್ಗಿದೇವಿ ರಂಗಪ್ರವೇಶ

ಕುಂದಾಪುರ : ಅಶೋಕ್ ಕುಮಾರ್ ಮತ್ತು ಭರತನಾಟ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಅವರ ಪುತ್ರಿಯರಾದ ಪೂರ್ವಿಕಾ ಮತ್ತು ಗಾರ್ಗಿದೇವಿ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಏಪ್ರಿಲ್ 18ರಂದು ಸಂಜೆ 4 ಗಂಟೆಗೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ನಡೆಯಲಿದೆ.

ಈ ಬಗ್ಗೆ ಕುಂದಾಪುರದ ಪ್ರೆಸ್‍ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಿದುಷಿ ಪ್ರವಿತಾ ಅಶೋಕ್ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮಕ್ಕೆ ಆಳ್ವಾಸ್ ಶಿಕ್ಷಣ ಫೌಂಡೇಶನ್ ಮೂಡಬಿದ್ರೆ ಇದರ ನಿರ್ದೇಶಕರಾದ ಡಾ.ಮೋಹನ ಆಳ್ವಾ, ನಾಟ್ಯನಿಕೇತನ, ಕೋಲ್ಯ ಸೋಮೇಶ್ವರದ ಕರ್ನಾಟಕ ಕಲಾತಿಲಕ ಗುರು ಉಳ್ಳಾಲ ಮೋಹನ ಕುಮಾರ್, ಚಿತ್ಕಲಾ ಸ್ಕೂಲ್ ಆಫ್ ನೃತ್ಯ, ಬೆಂಗಳೂರಿನ ಭರತನಾಟ್ಯ ಕಲಾವಿದ ಪ್ರವೀಣ ಕುಮಾರ್, ಭರತನಾಟ್ಯ ಕಲಾವಿದೆ, ವ್ಯಾಸ (ಡೀಮ್ಡ್ ವಿಶ್ವವಿದ್ಯಾನಿಲಯ) ಇಲ್ಲಿನ ಯೋಗ ಮತ್ತು ಮಾನವೀಯ ಅಧ್ಯಯನ ಬೆಂಗಳೂರು ಇಲ್ಲಿನ ಡೀನ್ ಡಾ.ಕರುಣಾ ವಿಜಯೇಂದ್ರ, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಭರತನಾಟ್ಯ ಕಲಾವಿದೆ ಪೂರ್ವಿಕ ನನ್ನ ಶಿಷ್ಯೆಯಾಗಿ 10 ವರ್ಷಕ್ಕಿಂತ ಹೆಚ್ಚು ಕಾಲ ನಾಟ್ಯ ಅಭ್ಯಾಸಿಸಿ ಭರತನಾಟ್ಯದಲ್ಲಿ ಪಳಗಿದ್ದಾರೆ. ಭರತನಾಟ್ಯ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿ ಜೊತೆಯಲ್ಲಿ ಕರ್ನಾಟಿಕ್ ಸಂಗೀತವನ್ನು ವಿದ್ವಾನ್ ಉಷಾ ರಾಮಕೃಷ್ಣ ಭಟ್ ಅವರಲ್ಲಿ ಅಭ್ಯಸಿಸಿದ್ದು ಪ್ರಸ್ತುತ ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

ಇವರಿಗೆ ನೃತ್ಯಭೂಷಣ ಪ್ರಶಸ್ತಿ, ಕೇಂದ್ರ ಸರಕಾರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿವೇತನ, ಪಲ್ಲಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ನಿಂದ ಪ್ರಮಾ ಪ್ರಶಸ್ತಿ, ಬಾಲನೃತ್ಯ ಪ್ರತಿಭೆ ಪ್ರಶಸ್ತಿಗಳು ದೊರೆತಿವೆ. ಅಲ್ಲದೇ ವಿವಿಧ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಭರತನಾಟ್ಯ ಸ್ಪರ್ಧೆಗಳಲ್ಲಿ ಬಹುಮಾನಗಳು ದೊರೆತಿದೆ. ಅಲ್ಲದೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಶ್ರೀ ಮಧ್ವರಾಜ ಇನ್‍ಸ್ಟಿಟ್ಯೂಟ್ ಆಫ್ ಎಂಜನೀಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.

ಭರತನಾಟ್ಯ ಕಲಾವಿದೆ ಗಾರ್ಗಿದೇವಿ ನನ್ನ ಶಿಷ್ಯೆಯಾಗಿ 6ನೇ ವರ್ಷದಿಂದ ಇವರೆಗೂ ಭರತನಾಟ್ಯದಲ್ಲಿ ಪಳಗಿದ್ದಾರೆ. ಕರ್ನಾಟಿಕ್ ಸಂಗೀತವನ್ನು ವಿದ್ವಾನ್ ಉಷಾ ರಾಮಕೃಷ್ಣ ಭಟ್ ಅವರಲ್ಲಿ ಅಭ್ಯಾಸಿಸಿದ್ದು ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪ್ರಸ್ತುತ ಕುಂದಾಪುರದ ಆರ್ ಎನ್.ಶೆಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಅಭ್ಯಾಸಿಸಿತ್ತಿದ್ದಾರೆ.

ಇವರ ನೃತ್ಯ ಪ್ರತಿಭೆಗೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಮೈಸೂರಿನ ಶ್ರೀದುರ್ಗಾ ನೃತ್ಯ ಅಕಾಡೆಮಿಯಿಂದ ನಾಟ್ಯ ಮಯೂರಿ, ಉಡುಪಿಯ ಹೆಜ್ಜೆಗೆಜ್ಜೆ ಅಕಾಡೆಮಿಯಿಂದ ನೃತ್ಯ ಪಲ್ಲವ, ದ್ರ ಸರಕಾರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದ ವಿದ್ಯಾರ್ಥಿವೇತನ, ಪಲ್ಲಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ನಿಂದ ಪ್ರಮಾ ಪ್ರಶಸ್ತಿ, ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕಲಾಶ್ರೀ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿವಿಧ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಭರತನಾಟ್ಯ ಸ್ಪರ್ಧೆಗಳಲ್ಲಿ ಬಹುಮಾನಗಳು ದೊರೆತಿದೆ. ಅಲ್ಲದೇ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಇವರು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ, ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಭೇಷ್ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದೀಗ ಇವರಿಬ್ಬರ ಭರತನಾಟ್ಯದ ಅತ್ಯನ್ನತವಾದ ರಂಗಪ್ರವೇಶ ಕಾರ್ಯಕ್ರಮವು ನನ್ನ ನಿರ್ದೇಶನದಲ್ಲಿ ನಡೆಯಲಿದ್ದು ಹಾಡುಗಾರಿಕೆಯಲ್ಲಿ ಚೆನೈನ ಶ್ರೀ ಶ್ರೀಕಾಂತ ಗೋಪಾಲಕೃಷ್ಣನ್ ಮೃದಂಗದಲ್ಲಿ ವಿದ್ವಾನ್ ಹರ್ಷ ಸಾಮಗ, ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ಶ್ರೀ ನಿತೀಶ್ ಅಮ್ಮಣ್ಣಾಯ, ಬೆಂಗಳೂರು, ಮತ್ತು ವೀಣೆಯಲ್ಲಿ ವಿದ್ವಾನ್ ಪ್ರಶಾಂತ್ ರುದ್ರಪ್ಪ ಸಹಕರಿಸಲಿದ್ದಾರೆ ಎಂದರು.

ನಾನೂ ಕೂಡಾ ಭರತನಾಟ್ಯ ಕಲಾವಿದೆಯಾಗಿದ್ದು, ನೃತ್ಯ ನಿರ್ದೇಶಕಿಯಾಗಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಕುಂದಾಪುರದಲ್ಲಿ ನೃತ್ಯ ವಸಂತ ನಾಟ್ಯಾಲಯ (ರಿ) ಎಂಬ ಭರತನಾಟ್ಯ ಶಾಲೆಯನ್ನು ಆರಂಭಿಸಿ, ಭರತನಾಟ್ಯ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ವಿದುಷಿ ಶ್ರೀಮತಿ ಶೃದ್ಧಾ ನಾರಾಯಣ ಭಟ್, ವಿದುಷಿ ಶ್ರೀಮತಿ ವಾಣಿ ರಾಜಗೋಪಾಲ್ ತಮ್ಮ ಭರತನಾಟ್ಯ ಕಲೆಯನ್ನು ಕಲಿತು ಪರಿಣಿತಿ ಪಡೆದು ಈಗಾಗಲೇ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊಂದಿದ್ದೇನೆ. ನನ್ನ ಶಿಷ್ಯರು ಭರತನಾಟ್ಯ ಕಲಾವಿದೆಯರಾಗಿ ರೂಪುಗೊಂಡು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನನಗೆ 2014-15ರಲ್ಲಿ ಭರತನಾಟ್ಯದ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. 2017-18ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ನೃತ್ಯ ವಸಂತ ನಾಟ್ಯಾಲಯ (ರಿ) ಭರತನಾಟ್ಯ ಶಾಲೆಯ ಮೂಲಕ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿದೆ. ಕೃಷ್ಣ ಗಾನ ಸಭಾ ಚೆನೈ, ಇಳಮಲೈಯಿಲ್ ತಿರಮೈ ನೃತ್ಯ ಸಿರೀಸ್, ಅಯೋಧ್ಯಾ ಶ್ರೀರಾಮ ಮಂದಿರ, ಆಳ್ವಾಸ್ ವಿರಾಸತ್. ನಾಟ್ಯಾಂಜಲಿ ಪೇರೂರು, ಆರ್ಟ್ ಆಫ್ ಲಿವಿಂಗ್ ಇದರ 50ನೇ ವರ್ಷಾಚರಣೆ ಮುಂತಾದ ಕಡೆ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದಾರೆ ಎಂದರು.

ನೃತ್ಯ ವಸಂತ ನಾಟ್ಯಾಲಯದ ಟ್ರಸ್ಟಿ ಕಲ್ಪನಾ ಭಾಸ್ಕರ ಮಾತನಾಡಿ, ನೃತ್ಯ ವಸಂತ ನಾಟ್ಯಾಲಯ ಪ್ರಸಿದ್ಧ ನೃತ್ಯ ತರಬೇತಿ ಸಂಸ್ಥೆಯಾಗಿ ಬೆಳೆದಿದೆ. ಭರತನಾಟ್ಯದ ಬಗ್ಗೆ ಅಭಿಮಾನವನ್ನು ಸೃಷ್ಟಿಸಿ ಈ ಭಾಗದಲ್ಲಿ ಪ್ರಸಿದ್ಧ ಪಡಿಸಿದೆ. ನೃತ್ಯ ವಸಂತ ನಾಟ್ಯಾಲಯದ ನೃತ್ಯ ಗುರುಗಳಾಗಿ ವಿದುಷಿ ಪ್ರವಿತಾ ಅಶೋಕ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಇಬ್ಬರು ಮಕ್ಕಳಾದ ಪೂರ್ವಿಕ ಹಾಗೂ ಗಾರ್ಗಿದೇವಿ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದಿದ್ದು ಅವರಿಬ್ಬರ ರಂಗಪ್ರವೇಶ ಕಾರ್ಯಕ್ರಮ ಎ.18ರಂದು ಉಡುಪಿಯಲ್ಲಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಟ್ರಸ್ಟಿಗಳಾದ ಚಂದ್ರಿಕಾ ಧನ್ಯ, ಶ್ರೀಕಾಂತಿ ಉಡುಪ, ಉಪನ್ಯಾಸಕಿ ಸುಮಲತಾ ನಾಯಕ್, ಅಶೋಕ್ ಕುಮಾರ್, ಪೂರ್ವಿಕ, ಗಾರ್ಗಿದೇವಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!