spot_img
Friday, April 10, 2026
spot_img

ದ್ವಿತೀಯ ಪಿಯುಸಿ ಫಲಿತಾಂಶ : ಕುಂದಾಪುರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ರಾಜ್ಯ ಮಟ್ಟದ ಟಾಪ್ 10 ಸ್ಥಾನದಲ್ಲಿ ದಾಖಲೆಯ ಒಟ್ಟು 35 Rank,  ಶೇ 100 ಫಲಿತಾಂಶ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಟಾಪ್ 10 ಸ್ಥಾನ ದಲ್ಲಿ ಒಟ್ಟು 35 Rank ಗಳನ್ನು ಪಡೆಯುವುದರ ಮೂಲಕ ಶೇ 100 ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ ಪೈ, ಇಂಚರಾ. ಸಿ. ಪೂಜಾರಿ (596 ) 4 ನೇ Rank , ಅಕ್ಷಯ್ ಅಶ್ವಿನ್ ಪೈ(595) 5 ನೇ Rank, ಪ್ರವೀಣಾ ಪೈ, ದೀಕ್ಷಾ. ವಿ.ಕಾಮತ್, ಶ್ರೀನಿಧಿ (593) 7ನೇ Rank ,ಕೌಸ್ತುಬಾ, ವಸಂತ್ ಭಟ್, ವರ್ಷ. ಕೆ, ಪ್ರತಿಕ್ಷಿತಾ, ರೇಖಾ ಎಲ್, ಕ್ಷಿಪಾಲಿ ( 592) 8 ನೇ Rank,  ವಿಭವ್ ಮೇಲಾಡಿ, ವಿಜೇತಾ ಆರ್. ಭಟ್(591) 9ನೇ Rank, ಧನ್ಯಾ .ಜೆ ಪಟಗಾರ್ , ಮೋನಿಶಾ ಪಿ. ವಿ, ರಚನಾ ( 590) 10 ನೇ Rank ಪಡೆದಿರುತ್ತಾರೆ.

ವಾಣಿಜ್ಯ ವಿಭಾಗ ದಲ್ಲಿ ಬಿ. ಶ್ರೀ ಲಕ್ಷ್ಮಿ ವಿ. ಅಡಿಗ , ಸಾನಿಕಾ (596) 5ನೇ Rank, ರಾಜೇಂದ್ರ ಭಟ್, ಶ್ರಾವ್ಯ (595) 6 ನೇ Rank, ಧನ್ಯ ಭಟ್, ಹರ್ಷಿತಾ ಪೂಜಾರಿ, ಕೆ. ಪಿ ಶಾನ್ವಿ, ಸಮೀಕ್ಷಾ ( 594) 7ನೇ Rank, ತನುಶ್ರೀ ರವಿ ಪೂಜಾರಿ, ಮೇನಕಾ, ಮೊಹಮ್ಮದ್ ಹುಝೈಫಾ (593) 8 ನೇ Rank, ನಿಕಿತಾ, ದಿಶಾ ಎಸ್, ರಾಘವೇಶ್ ಭಟ್ (592) 9 ನೇ Rank ,ಕೀರ್ತನಾ , ಪ್ರಜ್ಞಾ, ಪ್ರತೀಕ್ಷಾ, ಸಮೀಕ್ಷಾ ಪೂಜಾರಿ (591 ) 10 ನೇ Rank ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ.

ಪರೀಕ್ಷೆಗೆ ಹಾಜರಾದ 538 ವಿದ್ಯಾರ್ಥಿಗಳಲ್ಲಿ 457 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ದ್ವಿತೀಯ ಶ್ರೇಣಿಯಲ್ಲಿ ಯಾವುದೇ ವಿದ್ಯಾರ್ಥಿಗಳು ತೇರ್ಗಡೆ ಹೊಂದಿಲ್ಲ.

ಸಂಸ್ಕೃತ 95, ಗಣಿತ ಶಾಸ್ತ್ರ 49,ಕಂಪ್ಯೂಟರ್ ಸೈನ್ಸ್ 42, ವ್ಯವಹಾರ ಅಧ್ಯಯನ 40, ಲೆಕ್ಕ ಶಾಸ್ತ್ರ 26, ಭೌತಶಾಸ್ತ್ರ 20, ಸಂಖ್ಯಾಶಾಸ್ತ್ರ 17,ಅರ್ಥ ಶಾಸ್ತ್ರ 13, ಕನ್ನಡ 10, ಇಂಗ್ಲೀಷ್ 04, ರಸಾಯನ ಶಾಸ್ತ್ರ 02, ಜೀವಶಾಸ್ತ್ರ 02, ಹಿಂದಿ 01 ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ವಿದ್ಯಾರ್ಥಿಗಳು ದಾಖಲಿ ಸಿದ್ದಾರೆ.

ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

 

 

 

 

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!