spot_img
Friday, July 17, 2026
spot_img

ಎಕ್ಸಲೆಂಟ್ ಕಾಲೇಜು ಕುಂದಾಪುರ: ನೀಟ್ ಸ್ಪರ್ಧಾತ್ಮಕ ಪರೀಕ್ಷೆಯ ಸಾಧನೆ

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆ ಸುಣ್ಣಾರಿ ಕುಂದಾಪುರ ಉಡುಪಿ ಜಿಲ್ಲೆ ಗ್ರಾಮೀಣ ಮಕ್ಕಳ ಶೈಕ್ಷಣಿಕ ಮನೋಭಿಲಾಷೆಯನ್ನು ಈಡೇರಿಸಲು ಸುಣ್ಣಾರಿ ಎನ್ನುವ ಗ್ರಾಮೀಣ ಭಾಗದಲ್ಲಿ ನಿರ್ಮಿಸಿದ ಶಿಸ್ತು ಬದ್ಧ ಶೈಕ್ಷಣಿಕ ಸಂಸ್ಥೆಯಾಗಿದೆ. 2012ರಂದು 40 ವಿದ್ಯಾರ್ಥಿಗಳಿಂದ ಆರಂಭವಾಗಿ ಈಗ ಸಾವಿರಕ್ಕೂ ಹೆಚ್ಚಿನ ಮಕ್ಕಳು ತಮ್ಮ ಕನಸನ್ನು ಈಡೇರಿಸಿಕೊಂಡು ತಮ್ಮ ಬದುಕನ್ನು ಹಸನಾಗಿಸಿಕೊಂಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ ಅದೆಷ್ಟೋ ಬಡ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ನಂದಾದೀಪವಾಗಿ ಬೆಳಗಿದ ಉಡುಪಿ ಜಿಲ್ಲೆಯ ಎಂ ಮಹೇಶ್ ಹೆಗ್ಡೆ ಕನಸಿನ ಶಿಕ್ಷಣ ಸಂಸ್ಥೆ ಇದಾಗಿದೆ. ಇಡೀ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರವೇ ಗುರುತಿಸಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆದ ಹೆಗ್ಗಳಿಕೆಗೆ ಈ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತ ತನ್ನ ಸಾಧನೆಯನ್ನು ರಾಷ್ಟ್ರಕ್ಕೆ ಗುರುತಿಸಿ ಇರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಅದೇ ರೀತಿ ಈ ವರ್ಷ ನಡೆದ ಬೋರ್ಡ್, ಸಿಇಟಿ, ಜೆಇಇ, ಸಿಎ, ಸಿಎಸ್ ಫಲಿತಾಂಶದಲ್ಲೂ ಸಹ ಸಾಧನೆ ಪಡೆದಿರುವುದು ದೊಡ್ಡ ಇತಿಹಾಸವಾಗಿದೆ. ಅದೇ ರೀತಿ ಮೆಡಿಕಲ್ ಸೀಟ್‍ಗಾಗಿ ನಡೆದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಶಿಕ್ಷಣ ಸಂಸ್ಥೆಯು ಅತ್ಯುತ್ತಮ ಫಲಿತಾಂಶವನ್ನು ಪಡೆದು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡಿರುವುದಾಗಿ ಮಹೇಶ್ ಹೆಗ್ಡೆ ತಿಳಿಸಿದ್ದಾರೆ.

ನೀಟ್‍ನಲ್ಲಿ ಉತ್ತಮ ಸಾಧನೆಯನ್ನು ಮಾಡಿರುವ ಸಂಸ್ಥೆಯ ವಿದ್ಯಾರ್ಥಿಗಳಾದ ರುಮೇಜ್ 600, ರಶ್ಮಿ 573, ಶ್ರೇಯ ಎನ್.ಡಿ-513, ವಡ್ಡೆ ಮನೋಹರ್ 511, ಮಾನಿಂಗ್ ಶ್ರೀಕಾಂತ್ ಮೇದಾರ್ 508, ಶ್ರೀಶ ವಿ 503, ಬಾಲಗೌಡ 502, ಪದ್ಮಶ್ರೀ ವಿ ಎನ್ 496, ಪ್ರವೀಣ್ 495, ಸೃಜನ್ ಗಾಣಿಗ 480, ಐಶ್ವರ್ಯ 474, ರಕ್ಷಾ ಶೆಟ್ಟಿ 466, ಅಂಕಗಳೊಂದಿಗೆ ರಾಜ್ಯಕ್ಕೆ ನೀಟ್ ನಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಈ ರೀತಿಯ ಅಮೋಘ ಸಾಧನೆ ಮಾಡಿದ ಪ್ರೀತಿಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ. ಪ್ರಾಂಶುಪಾಲರಾದ ನಾಗರಾಜ್ ಶಟ್ಟಿ, ಅಭಿನಂದನೆ ಸಲ್ಲಿಸಿದ್ದಾರೆ.

 

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!