spot_img
Friday, April 10, 2026
spot_img

ದ್ವಿತೀಯ ಪಿಯು ಫಲಿತಾಂಶ: ಸುಜ್ಞಾನ ಪಿಯು ಕಾಲೇಜಿಗೆ 100% ಫಲಿತಾಂಶ

ಕುಂದಾಪುರ: 2025-2026ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕುಂದಾಪುರದ ‘ಸುಜ್ಞಾನ’ ಪಿಯು ಕಾಲೇಜು ತನ್ನ ಮೊದಲ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಎಸ್ ಎಸ್ ಎಲ್ ಸಿಯಲ್ಲಿ ಶೇಕಡಾ 95ಕ್ಕಿಂತ ಅಧಿಕ ಫಲಿತಾಂಶ ಪಡೆದ ಕೇವಲ 9 ವಿದ್ಯಾರ್ಥಿಗಳನ್ನೊಳಗೊಂಡ ಒಟ್ಟು 125 ವಿದ್ಯಾರ್ಥಿಗಳಿರುವ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್ ನ ಫಲಿತಾಂಶದಲ್ಲಿ 22ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 84 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 5 ಹಾಗೇ ಪ್ರಥಮ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 33, ವಾಣಿಜ್ಯ ವಿಭಾಗದಲ್ಲಿ 2 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಮ್ಮೆದ ಪಾರೀಸ ಭೋಜ: 587 ಅಂಕಗಳು, ಸಿಂಚನಾ: 586 ಅಂಕಗಳು, ಪ್ರತೀಕ್ಷಾ ಎಚ್. ಶೆಟ್ಟಿ: 586 ಅಂಕಗಳು, ಎನ್. ರಕ್ಷಾ: 584 ಅಂಕಗಳು, ಅನಘಾ ವಿ. ಶೆಟ್ಟಿ: 583 ಅಂಕಗಳು, ಶ್ರೀಶಾಂತ್: 582 ಅಂಕಗಳು, ಶಿವರಾಜ್ ಬಿ. ಶೆಟ್ಟಿ: 581 ಅಂಕಗಳು, ಕೌಶಿಕ್ ಶೆಟ್ಟಿ: 580 ಅಂಕಗಳು, ಪವನ್ ಎ ಕುಲಾಲ್: 579 ಅಂಕಗಳು, ಪ್ರಿಯಾಂಕಾ ಶೆಟ್ಟಿ-577ಅಂಕಗಳು, ಸೃಷ್ಠಿ ಶಿವಾಜಿ ನೆಲವಾಡೆ-577ಅಂಕಗಳು, ಜಯರಾಜ್ ಜೆ.ಎಸ್-575 ಅಂಕಗಳು, ಸುಶ್ಮಿತಾ ಪ್ರವೀಣ್ ಕುಮಾರ್ ಸುಕಾಲಿ-575 ಅಂಕಗಳು, ಭೂಮಿಕಾ ಎಸ್. ಆಚಾರ್ಯ-575ಅಂಕಗಳು, ಪಂಚಮಿ ಚಂದ್ರ ಕುಲಾಲ್-574 ಅಂಕಗಳು, ಶ್ರೀಜನ್ ಶ್ರೀಧರ್ ಶೆಟ್ಟಿ-573 ಅಂಕಗಳು, ದೇಶಿಕ್ ಕೆ-572 ಅಂಕಗಳು, ಸುಜನ್ ಬಿ ಶೆಟ್ಟಿ-572 ಅಂಕಗಳು, ನವ್ಯಾ-571 ಅಂಕಗಳು, ತನುಷಾ ಎಸ್ ಶೆಟ್ಟಿ-571 ಅಂಕಗಳು, ಪೃಥ್ವಿಕ್ -570 ಅಂಕಗಳು.

ವಾಣಿಜ್ಯ ವಿಭಾಗದ ಸಾಧನೆ: ವಾಣಿಜ್ಯ ವಿಭಾಗದಲ್ಲಿ ಸ್ಪಂದನಾ ಆರ್ ಶೆಟ್ಟಿ 592 ಅಂಕಗಳನ್ನು ಗಳಿಸಿದ್ದಾರೆ.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಹಾಗೇ ಬೋಧಕ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ನಿರಂತರ ಶ್ರಮ, ಪೋಷಕರ ಸಹಕಾರ ಮತ್ತು ಕಾಲೇಜಿನ ಗುಣಮಟ್ಟದ ಶಿಕ್ಷಣವೇ ಈ 100% ಫಲಿತಾಂಶಕ್ಕೆ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!