spot_img
Friday, March 6, 2026
spot_img

ಶಿರೂರು-ಮೂರ್ಕೈ: ಶ್ರೀ ಮಲ್ಲಿಕಾರ್ಜುನ ಸಹಕಾರಿ ಸಂಘಕ್ಕೆ ಗೋವಾ ರಾಜ್ಯದ ಸಹಕಾರಿಗಳ ಭೇಟಿ

ಕುಂದಾಪುರ: ಗೋವಾ ರಾಜ್ಯದ ದಿ ಮಾರ್ಷಲ್ ಅರ್ಬನ್ ಕೋ-ಆಪರೇಟಿವ್ ಕ್ರೆಡಿಡ್ ಸೊಸೈಟಿ ನಿಯಮಿತ ಆಡಳಿತ ಮಂಡಳಿಯ ಸದಸ್ಯರು ಮತ್ತು ಮಾಜಿ ನಿರ್ದೇಶಕರುಗಳು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದ 23 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಸಹಕಾರಿಗಳಿಗೆ ಸಹಕಾರಿ ಸೇವೆ ನೀಡುತ್ತಿರುವ ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ. ಶಿರೂರು-ಮೂರ್ಕೈಗೆ ಹೋಳಿ ಸಂದರ್ಭದಲ್ಲಿ ಭೇಟಿ ನೀಡಿದರು.

ಕಳೆದ 34 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಈ ಸಹಕಾರಿ ಧುರೀಣರು, ಮಲ್ಲಿಕಾರ್ಜುನ ಸಹಕಾರಿ ಸಂಘವು ಕನಿಷ್ಠ ಅವಧಿಯಲ್ಲಿ ಸಾಧಿಸಿದ ಸಾಧನೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ವಾರ್ಷಿಕ ಮಹಾಸಭೆಗೆ ಬರುವ ಸದಸ್ಯರು, ಸದಸ್ಯರ ಮಕ್ಕಳಿಗೆ ನೀಡುವ ವಿಧ್ಯಾರ್ಥಿವೇತನ, ಶಾಲಾ ಕಾಲೇಜ್ ಗಳಿಗೆ ನೀಡುತ್ತಿರುವ ಧನ ಸಹಾಯ, ಸದಸ್ಯರ ಮರಣೋತ್ತರ ನಿಧಿ ಪಾವತಿ, ಸಾಲಗಾರ ಸದಸ್ಯರರಿಗೆ ವಿಮಾ ಸೌಲಭ್ಯ, ಸ್ವಂತ ಆಡಳಿತ ಕಛೇರಿ ಮತ್ತು ಶಾಖಾ ಕಚೇರಿ, ಸೋಲಾರ್ ಅಳವಡಿಸಿದ ಗ್ರಾಮೀಣ ಸಹಕಾರಿ, ಉಚಿತ ಸಂದೇಶ ರವಾನೆ, ಉಚಿತ NEFT & RTGS ಸೌಲಭ್ಯ, ಸ್ವಂತ ನಿವೇಶನ & ಸುಸಜ್ಜಿತ ಆಡಳಿತ ಕಛೇರಿ, ಗ್ರಾಹಕರಿಗೆ ಲಾಕರ್ ಸೌಲಭ್ಯ, ನಿರಂತರ ನೀಡುತ್ತಿರುವ ಗರಿಷ್ಠ ಪಾಲು ಮುನಾಫೆ, ೬೦೦೦ ಮಿಕ್ಕಿA ತರಗತಿಯ ಸದಸ್ಯರು, ೫೦ ಕೋಟಿ ಠೇವಣಿ, ೪೩ ಕೋಟಿ ಸಾಲಗಳು, ೧೭ ಕೋಟಿ ಹೂಡಿಕೆ ಹಾಗೂ ವರ್ಷದಿಂದ ವರ್ಷಕ್ಕೆ ನಿರಂತರ ಪ್ರಗತಿಯನ್ನು ನೋಡಿ ಅಧ್ಯಯನಕ್ಕೆ ಯೋಗ್ಯ ಸಹಕಾರಿ ಸಂಘವೆಂದು ಹೆಮ್ಮ ಪಟ್ಟರು. ಈ ಸಂದರ್ಭದಲ್ಲಿ ಮಾರ್ಷಲ್ ಅರ್ಬನ್ ಕೋ-ಆಪರೇಟಿವ್ ಕ್ರೆಡಿಡ್ ಸೊಸೈಟಿಯ ಉಪಾಧ್ಯಕ್ಷರಾದ ಪ್ರಕಾಶ ಟಿ ನಾಯಕ್, ಹಿರಿಯ ನಿರ್ದೇಶಕರಾದ ಭಾನುದಾಸ್ ಕೆ ನಾಯ್ಕ ಗಾಂವ್ಕರ್ ಮತ್ತು ಆಡಳಿತ ಮಂಡಲಿಯ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ನಾಯ್ಕ ಸ್ವಾಗತಿಸಿ ಪ್ರಸ್ತಾವಿಕ ಮಾತಾಡಿದರು, ಅಧ್ಯಕ್ಷರಾದ ಕೃಷ್ಣ ನಾಯ್ಕ ಸಂಘದ ಕಾರ್ಯ ಚಟುವಟಿಕೆಯ ವಿವರ ನೀಡಿದರು, ಸಂಘದ ಆಡಳಿತ ಮಂಡಲಿಯ ಸದಸ್ಯರಾದ ಜಯಪ್ರಕಾಶ, ಮಹದೇವ , ಮಾಜಿ ಸದಸ್ಯರಾದ ಚಂದ್ರ ನಾಯ್ಕ, ಮತ್ತು ಸಿಬ್ಬಂದಿಗಳು ಹಾಜರಿದ್ದರು. ಶಾಖಾಧಿಕಾರಿ ಕೃಷ್ಣ ನಾಯ್ಕ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!