spot_img
Friday, March 6, 2026
spot_img

ಬೈಂದೂರು: ಸೈಂಟ್ ಥೋಮಸ್ ಶಾಲೆ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆಯ ಸಂದೇಶ, ಸ್ಕೇಟಿಂಗ್, ಸೈಕಲ್ ಜಾಥಾ

ಬೈಂದೂರು:  ಬೈಂದೂರು ಸೈಂಟ್ ಥೋಮಸ್ ಸಿಬಿ‌ಎಸ್‌ಇ ಶಾಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯವರು ಭಾರತೀಯ ರಸ್ತೆ ಸುರಕ್ಷತೆಯ ಸವಾಲಿನ ತೀವ್ರತೆಯ ಬಗ್ಗೆ ನಾಗರಿಕರು ಹಾಗೂ ಎಲ್ಲಾ ಪಾಲುದಾರರಲ್ಲಿಯೂ ಅರಿವು ಮೂಡಿಸುವ ಉದ್ದೇಶದಿಂದ “ಸಡಕ್ ಸುರಕ್ಷಾ ಜೀವನ ರಕ್ಷಾ” ಎಂಬ ರಸ್ತೆ ಸುರಕ್ಷತೆಯ ಥೀಮ್ ನೊಂದಿಗೆ ಆಚರಿಸಲು ಸಂಯೋಜಿತ ಶಾಲೆಗಳಿಗೆ ಸೂಚನೆ ನೀಡಿದ್ದು ಅದರಂತೆ ಸ್ಕೇಟಿಂಗ್ ಮತ್ತು ಸೈಕಲ್ ಜಾಥಾವನ್ನು ಫೆ.27ರಂದು ಬೆಳಿಗ್ಗೆ ಯಡ್ತರೆಯಲ್ಲಿ ಬೈಂದೂರು ಠಾಣಾಧಿಕಾರಿ ಸುನಿಲ್ ಕುಮಾರ್ ಚಾಲನೆ ನೀಡಿ, ಈ ಕಾರ್ಯಕ್ರಮವು ಕೇವಲ ಜಾಗೃತಿ ಮೂಡಿಸುವುದಲ್ಲದೆ, ಸಮುದಾಯದಲ್ಲಿ ಒಗ್ಗಟ್ಟು ಮತ್ತು ಹೊಣೆಗಾರಿಕೆಯ ಭಾವನೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಭಾಗವಹಿಸುವುದರಿಂದ ಇದರ ಪರಿಣಾಮ ಹೆಚ್ಚು ಪರಿಣಾಮಕಾರಿ ಆಗುತ್ತದೆ. ರಾಷ್ಟ್ರೀಯ ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಸ್ಕೇಟಿಂಗ್ ಮತ್ತು ಸೈಕಲ್ ಜಾಥಾ ಹಮ್ಮಿಕೊಳ್ಳುವುದು ಸಮಾಜಕ್ಕೆ ಉಪಯುಕ್ತ ಹಾಗೂ ಅವಶ್ಯಕವಾದ ಕಾರ್ಯವಾಗಿದೆ ಎಂದರು.

ಪೊಲೀಸ್ ಇಲಾಖೆಯ ಸಹಕಾರದಿಂದ ಯಡ್ತರೆ ಮಾರ್ಗದಿಂದ ಸೋಮೇಶ್ವರ ಮಾರ್ಗ ವಾಗಿ ಹೋಗಿ ಪಟ್ಟಣವನ್ನು ಸುತ್ತುವರಿದು ಶಾಲೆಯನ್ನು ತಲುಪಲಾಯಿತು.

ಪ್ರಾಂಶುಪಾಲರಾದ ಫಾದರ್ ಫಿಲಿಪ್ ನೆಲ್ಲಿವಿಳಾ ಮಾತನಾಡಿ, ಶಾಲೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸ್ಕೇಟಿಂಗ್ ಮತ್ತು ಸೈಕಲ್ ಜಾಥಾ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

ರಸ್ತೆ ಸುರಕ್ಷತೆ ಕೇವಲ ನಿಯಮ ಪಾಲನೆಯ ವಿಷಯವಲ್ಲ; ಅದು ಜೀವ ರಕ್ಷಿಸುವ ಸಂಸ್ಕೃತಿ. ಚಿಕ್ಕ ತಪ್ಪು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ನಾವು ಎಲ್ಲರೂ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಸಹಸಿಬ್ಬಂದಿ ವರ್ಗದವರ ಸಹಕಾರ ಹಾಗೂ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ,ನಮ್ಮ ಶಾಲಾ ಪೋಷಕ ಪ್ರತಿನಿಧಿಗಳು, ಪಾಲಕರು, ಶಿಕ್ಷಕರು ,ಹಾಗೂ ಸಹ ಸಿಬ್ಬಂದಿವರ್ಗದವರು ,ವಿದ್ಯಾರ್ಥಿಗಳೆಲ್ಲರೂ ಸೇರಿ ಯಶಸ್ವಿಯಾಗಿ ಸಮಾಜಕ್ಕೆ ಜಾಗೃತ ಅರಿವು ಮೂಡಿಸುವ ಕಾರ್ಯ ನೆರವೇರಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!