spot_img
Friday, February 27, 2026
spot_img

ಕೆರೆಕಟ್ಟೆ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಪವಿತ್ರ ನಾಲಿಗೆಯ ಹಬ್ಬ

 

ಸಿದ್ದಾಪುರ: ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ವಿಶೇಷ ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಫೆ.೧೭ ರಂದು ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೊಬೊ ಇವರು ಹಬ್ಬದ ಪ್ರಯುಕ್ತ ದಿವ್ಯಬಲಿದಾನವನ್ನು ಅರ್ಪಿಸಿ “ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಷ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕೃತಿಯಲ್ಲಿ ಸಹಾಯ ಮಾಡಬೇಕು. ‘ಬಡವರಿಗೆ ನೀಡುವಾತ ಭಾಗ್ಯವಂತ’ ಎಂದು ನಾವು ನೆನಪಿನಲ್ಲಿ ಇಟ್ಟುಕೊಳ್ಳೋಣ’ ಎಂದು ಸಂದೇಶ ನೀಡಿದರು.

ಬಸ್ರೂರು ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲರಾದ ವಂ|ಡ್ಯಾನ್ಸಿ ಮಾರ್ಟಿ ದೇವರ ವಾಕ್ಯದ ಮೇಲೆ ಟಿಪ್ಪಣಿ ಮಾಡಿದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್, ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ರೆಕ್ಟರ್ ಮೊನ್ಸಿಂಝ್ಹೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಹಬ್ಬಕ್ಕೆ ಶುಭ ಕೋರಿದರು. ಬಲಿದಾನ ಪ್ರಾರ್ಥನ ವಿಧಿಯನ್ನು ತ್ರಾಸಿ ಚರ್ಚಿನವರು, ಭಕ್ತಿ ಗಾಯನವನ್ನು ಬೈಂದೂರು ಚರ್ಚಿನವರು, ಕಾಣಿಕೆ ಸಂಗ್ರಹಣೆಯನ್ನು ಬಸ್ರೂರು ಚರ್ಚಿನವರು ನಡೆಸಿಕೊಟ್ಟರು. ಪುಣ್ಯಕ್ಷೇತ್ರಕ್ಕೆ ದಾನ ನೀಡಿದವರಿಗೆ ಮತ್ತು ಪೋಷಕತ್ವ ವಹಿಸಿಕೊಂಡವರಿಗೆ, ಸಹಕರಿಸಿದವರಿಗೆ ಮೇಣದ ಬತ್ತಿಗಳನ್ನು ನೀಡಿ ಗೌರವಿಸಲಾಯಿತು.

ಹಬ್ಬದ ಬಲಿಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರಸಂಖ್ಯೆಯಲ್ಲಿದ್ದು ಇತರಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯಕ್ಷೇತ್ರದ ರೆಕ್ಟರ್ ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದಿಸಿದರು. ವಂ| ರೋಯ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಜೆ ವಂ| ಪ್ರಥ್ವಿ ರೂಡ್ರಿಗಸ್ ಜೆ.ಸ. ಇವರ ನೇತ್ರತ್ವದಲ್ಲಿ ಕನ್ನಡದಲ್ಲಿ ಸಂಭ್ರಮದ ಬಲಿದಾನ ನಡೆಯಿತು. ವಂ|ಸುನೀಲ್ ವೇಗಸ್ ಧನ್ಯವಾದಗಳನ್ನುಸಮರ್ಪಿಸಿದರು. ವಂ| ರೋ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ಸಂಜೆ ವಂ| ಪ್ರಥ್ವಿ ರೂಡ್ರಿಗಸ್ ಜೆ.ಸ. ಇವರ ನೇತೃತ್ವದಲ್ಲಿ ಕನ್ನಡದಲ್ಲಿ ಸಂಭ್ರಮದ ಬಲಿದಾನ ನಡೆಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!