spot_img
Wednesday, February 25, 2026
spot_img

ಕುಂದಾಪುರ ಶಾಸಕರ ಸತತ ಪ್ರಯತ್ನದಿಂದ ಇ.ಎಸ್.ಐ ಪಟ್ಟಿಗೆ ಮಣಿಪಾಲ ಕೆ‌ಎಂಸಿ ಆಸ್ಪತ್ರೆ ಮರು ಸೇರ್ಪಡೆ

ಕುಂದಾಪುರ: ಎಸ್‌ಐ ರೆಫರಲ್ ನಿಯಮದಂತೆ ಎರಡು ವರ್ಷಗಳ ಅವಧಿಗೆ ಖಾಸಗಿ ಆಸ್ಪತ್ರೆಯೊಂದಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಮಣಿಪಾಲದ ಕೆ‌ಎಂಸಿ ಆಸ್ಪತ್ರೆ ಕೈಬಿಟ್ಟು ಹೋಗಿದ್ದು ಇದರಿಂದ ದೊಡ್ಡ ಸಂಖ್ಯೆಯ ಕಾರ್ಮಿಕ ವಿಮಾದಾರರಿಗೆ ಸಮಸ್ಯೆಯಾಗುತ್ತಿದ್ದು ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿಯವರು ಸತತ ಪರಿಶ್ರಮದ ಮೂಲಕ ಇ.ಎಸ್.ಐ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗಿದೆ.

ರಾಜ್ಯದಲ್ಲಿ ವಿಮಾದಾರರು ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಇ‌ಎಸ್‌ಐ ರೆಫರಲ್ ನಿಯಮದಂತೆ ಎರಡು ವರ್ಷಗಳ ಅವಧಿಗೆ ಖಾಸಗಿ ಆಸ್ಪತ್ರೆಯೊಂದಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಾದ ಕೆ‌ಎಂಸಿ ಮಣಿಪಾಲ ಆಸ್ಪತ್ರೆಯನ್ನು ಕೈಬಿಡಲಾಗಿದ್ದು ಈ ಆಸ್ಪತ್ರೆಗಳನ್ನು ಪರಿಶೀಲನಾ ಸಮಿತಿಯವರು ಕೈಬಿಟ್ಟಿರುವುದು ಸಮಂಜಸವಲ್ಲ ಇದನ್ನು ಸರಿಪಡಿಸದೆ ಇದ್ದರೆ ತುಂಬಾ ವಿಮಾ ಅರ್ಹ ರೋಗಿಗಳು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದುದರಿಂದ ಖಾಸಗಿ ಆಸ್ಪತ್ರೆಯೊಂದಿಗೆ ವಿಮಾ ಚಿಕಿತ್ಸೆಗೆ ಹೊಂದಾಣಿಕೆ ಮಾಡಿಕೊಳ್ಳುವಾಗ ಬಿಟ್ಟು ಹೋಗಿರುವ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಾದ ಕೆ‌ಎಂಸಿ ಮಣಿಪಾಲ ಆಸ್ಪತ್ರೆಯನ್ನು ಸೇರಿಸಿಕೊಳ್ಳುವ ಬಗ್ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಸತತವಾಗಿ ಪ್ರಯತ್ನಪಟ್ಟು ಮತ್ತೊಮ್ಮೆ ಕರ್ನಾಟಕ ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರನ್ನು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸತತವಾಗಿ ಸಂಪರ್ಕವನ್ನು ಮಾಡಿ ವಿಚಾರವನ್ನು ಮನವರಿಕೆ ಮಾಡಿ. ಇದೀಗ ಮರು ನವೀಕರಣ ಸಂದರ್ಭದಲ್ಲಿ ಕೈಬಿಟ್ಟ ಕೆ‌ಎಂಸಿ ಮಣಿಪಾಲ ಆಸ್ಪತ್ರೆಯನ್ನ ಮರು ಸೇರ್ಪಡೆ ಮಾಡಲಾಗಿದ್ದು ಈ ಸಂಬಂಧ ಶಾಸಕರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!