spot_img
Friday, April 10, 2026
spot_img

ಉಳ್ಳೂರು-74 ಬಂಟಕೋಡಿನ ಕೋಟೆರಾಯ ದೇವರ ವಾರ್ಷಿಕ ವರ್ಧಂತಿ: ಬೆಳ್ಳಿ ಕಿರೀಟ ಸಮರ್ಪಣೆ

ಕುಂದಾಪುರ: ಕುಂದಾಪುರ ತಾಲೂಕಿನ ಉಳ್ಳೂರು- 74 ಬಂಟಕೋಡು ಶ್ರೀ ಕೋಟೆರಾಯ ಮತ್ತು ಪರಿವಾರ ದೇವಸ್ಥಾನದ ವಾರ್ಷಿಕ ವರ್ಧಂತಿ ಉತ್ಸವವು ಮಹೇಂದ್ರ ಸೋಮಯಾಜಿ ಬೆಚ್ಚಪ್ಪು ಇವರ ಧಾರ್ಮಿಕ ಮಾರ್ಗದರ್ಶದಲ್ಲಿ ಫೆಬ್ರವರಿ 22ರಂದು ಸಂಪನ್ನಗೊಂಡಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ನಾಗಸನ್ನಿಧಿಯಲ್ಲಿ ಸವಿತೃಕಲಶಾಭಿಷೇಕ, ಕೋಟೆರಾಯನಿಗೆ ನವಕಲಶಸ್ಥಾಪನೆ, ಪ್ರಧಾನಹೋಮ, ಕಲಶಾಭಿಷೇಕ, ಪರಿವಾರಪೂಜೆ ಮತ್ತು ನಾಗದೇವರ ಸಂದರ್ಶನ, ಶ್ರೀ ಕೋಟೆರಾಯ ದೇವರಿಗೆ ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶ್ರೀ ಕೋಟೆರಾಯ, ಶ್ರೀ ಜಟ್ಟಿಗ ಮತ್ತು ಶ್ರೀ ಮಾಸ್ತಿ ಅಮ್ಮನವರಿಗೆ 74-ಉಳ್ಳೂರು ಬಂಟಕೋಡಿನ ಶ್ರೀಮತಿ ಶಕೀಲಾ ಮತ್ತು ಸುಕುಮಾರ ಶೆಟ್ಟಿ ಮತ್ತು ಮಕ್ಕಳು ಸೇವಾರೂಪದಲ್ಲಿ ನೀಡಿದ ಬೆಳ್ಳಿಯ ಕಿರೀಟವನ್ನು ಸಮರ್ಪಿಸಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ದೇವರಿಗೆ ರಂಗಪೂಜೆ ಮತ್ತು ಶ್ರೀ ಕೋಟೆರಾಯನ ದರ್ಶನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಪ್ರಮುಖರಾದ ಗಣಪಯ್ಯ ಶೆಟ್ಟಿ ಬಂಟಕೋಡು, ಶಂಕರ ಶೆಟ್ಟಿ ಮಧುರಬಾಳು, ದಿನಕರ ತೋಳಾರ್ ತಲ್ಲೂರುಮಕ್ಕಿ, ಶ್ರೀಮತಿ ಶಕೀಲಾ ಸುಕುಮಾರ ಶೆಟ್ಟಿ ದಂಪತಿಗಳು, ಬಂಟಕೋಡು ಮೂರು ಮನೆಯ ಕುಟುಂಬಸ್ಥರು ಮತ್ತು ಊರ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!